ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಕೆ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದು ಭಾರಿ ಇಳಿಕೆ ಕಂಡುಬಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಏರುಪೇರುಗಳ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಸುಮಾರು 3,000 ರೂಪಾಯಿಗಳಷ್ಟು ಕಡಿಮೆಯಾಗಿದ್ದರೆ, ಬೆಳ್ಳಿಯ ಬೆಲೆ ಕೆಜಿಗೆ 10,000 ರೂಪಾಯಿಗಳಷ್ಟು ಇಳಿಕೆಯಾಗಿದೆ.
ಇಂದಿನ ಚಿನ್ನದ ದರಗಳು (ಮಾರ್ಚ್ 21, 2026):24 ಕ್ಯಾರೆಟ್ (ಅಪರಂಜಿ ಚಿನ್ನ):10 ಗ್ರಾಂ ಚಿನ್ನದ ಬೆಲೆಯಲ್ಲಿ ₹2,940 ಇಳಿಕೆಯಾಗಿದ್ದು, ಪ್ರಸ್ತುತ ಬೆಲೆ ₹1,45,970 ಕ್ಕೆ ತಲುಪಿದೆ. ಪ್ರತಿ 1 ಗ್ರಾಂ ಚಿನ್ನದ ಬೆಲೆ ₹15,093 ದಾಖಲಾಗಿದೆ.
22 ಕ್ಯಾರೆಟ್ (ಆಭರಣ ಚಿನ್ನ): ಸಾಮಾನ್ಯವಾಗಿ ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹2,750 ಇಳಿಕೆಯಾಗಿದ್ದು, ಬೆಲೆ ₹1,33,800 ಆಗಿದೆ. ಪ್ರತಿ 1 ಗ್ರಾಂ ಚಿನ್ನದ ಬೆಲೆ ₹13,380 ಕ್ಕೆ ಇಳಿದಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ:ಚಿನ್ನದ ಹಾದಿಯಲ್ಲೇ ಬೆಳ್ಳಿಯ ಬೆಲೆಯೂ ಭಾರಿ ಇಳಿಕೆ ಕಂಡಿದೆ. ಇಂದು ಒಂದೇ ದಿನ ಬೆಳ್ಳಿ ಕೆಜಿಗೆ ₹10,000 ಇಳಿಕೆಯಾಗಿದ್ದು, ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ ₹2,45,000 ಆಗಿದೆ.
ಬೆಲೆ ಇಳಿಕೆಗೆ ಕಾರಣವೇನು?
ಇರಾನ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಸಂಘರ್ಷ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದ ಏರುಪೇರು ಚಿನ್ನ ಮತ್ತು ಬೆಳ್ಳಿಯ ದರದ ಮೇಲೆ ನೇರ ಪರಿಣಾಮ ಬೀರಿದೆ. ಇದರಿಂದಾಗಿ ಹೂಡಿಕೆದಾರರಲ್ಲಿ ಉಂಟಾಗಿರುವ ಬದಲಾವಣೆಗಳು ಬೆಲೆ ಇಳಿಕೆಗೆ ಕಾರಣವಾಗಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.













































