ಇಂದು, ನಾಳೆಯೂ ಸಬ್‌ರಿಜಿಸ್ಟ್ರಾರ್ ಕಚೇರಿ ಓಪನ್

Picture of Savistara

Savistara

Bureau Report

ಬೆಂಗಳೂರು:ಸಾರ್ವಜನಿಕರ ಅನುಕೂಲಕ್ಕಾಗಿ ಆರ್ಥಿಕ ವರ್ಷದ ಕೊನೆಯ ರಜೆ ದಿನಗಳಾದ ಶನಿವಾರ ಮತ್ತು ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿಗಳು ಸೇವೆ ಸಲ್ಲಿಸಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ 2025-26ನೇ ಸಾಲಿನ ಆರ್ಥಿಕ ವರ್ಷಕ್ಕೆ ಖರ್ಚುವೆಚ್ಚ ತೋರಿಸುವ ಸಲುವಾಗಿ ಸಾರ್ವಜನಿಕರು ಮಾರ್ಚ್‌ನಲ್ಲಿ ಆಸ್ತಿಗಳ ವ್ಯಾಪಾರ, ವಹಿವಾಟು ನಡೆಸಲು ಇಚ್ಛಿಸುತ್ತಾರೆ. ಅದೇ ರೀತಿಯಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ರಾಜಸ್ವ ಸಂಗ್ರಹದ ಲೆಕ್ಕಪತ್ರ ಮುಕ್ತಾಯ ಮಾಡಿ ಏ.1 ರಿಂದ ಹೊಸದಾಗಿ ಶುರು ಮಾಡುವ ಉದ್ದೇಶದಿಂದ ರಜೆ ದಿನವೂ ಕೆಲಸದ ದಿನವೆಂದು ಘೋಷಣೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

[t4b-ticker]
error: Content is protected !!