ಸುಳ್ಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜನಾಕ್ರೋಶ ಸಭೆ | ಕಾಂಗ್ರೆಸ್ ಮಹಿಳಾ ವಿರೋಧಿ ನೀತಿ ಅಳವಡಿಸಿದೆ : ಶಾಸಕಿ ಭಾಗೀರಥಿ ಮುರುಳ್ಯ ಆಕ್ರೋಶ

Picture of Savistara

Savistara

Bureau Report

ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಯಾಗದಂತೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ತಡೆದು ಮಹಿಳಾ ವಿರೋಧಿ ನೀತಿ ಅಳವಡಿಸಿದೆ ಎಂದು ಸುಳ್ಯ ಮಹಿಳಾ ಮೋರ್ಚಾ ವತಿಯಿಂದ ಜನಾಕ್ರೋಶ ಸಭೆ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಎ.27ರಂದು ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಶಾಸಕಿ ಭಾಗಿರಥಿ ಮುರುಳ್ಯ ಮಾತನಾಡಿ, “ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಸರಕಾರ ಜಾರಿಗೊಳಿಸುವ ಸಂದರ್ಭ ಅದನ್ನು ಸರ್ವರೂ ಸ್ವಾಗತಿಸಬೇಕಿತ್ತು. ಮಹಿಳೆಯರಿಗೂ ಒಂದು ಅವಕಾಶ ಕಲ್ಪಿಸುವ ಮಸೂದೆಗೆ ಬೆಂಬಲ ನೀಡಬೇಕಿತ್ತು. ಆದರೆ ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳು ವಿರೋಧಿಸುವುದರ ಮೂಲಕ ನಾವು ಮಹಿಳೆಯರಿಗೆ ವಿರುದ್ಧ ಎಂದು ಹೇಳುವುದರ ಮೂಲಕ ಕಾಂಗ್ರೆಸ್ ನರಿಬುದ್ಧಿಯನ್ನು ತೋರಿಸಿದೆ. ಇಂದು ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಮುಂದೆ ಬಂದಿದ್ದಾರೆ. ಅವರಿಗೆ ಮತ್ತಷ್ಟು ಬಲ ನೀಡಲು ನಾರಿಶಕ್ತಿ ವಂದನಾ ನಿರ್ಣಯಕ್ಕೆ ಮುಂದಾದಾಗ ಅದಕ್ಕೆ ವಿರೋಧ ಬಂದಿದೆ. ಮುಂದೊಂದು ದಿನ ಕಾಂಗ್ರೆಸ್‌ನವರ ಸಹಕಾರ ಇಲ್ಲದೇ ಈ ಮಸೂದೆ ಮಂಡನೆಯಾಗೋದು ಶತಸಿದ್ಧ ಎಂದು ಹೇಳಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, “ಮಹಿಳೆಯರಿಗಾಗಿ ಸರಕಾರ ಒಳ್ಳೆ ಕೆಲಸ ಮಾಡುವಾಗ ಕಾಂಗ್ರೆಸ್ ಅದನ್ನು ವಿರೋಧಿಸಿದೆ. ಮುಂದಿನ ಚುನಾವನೆಯಲ್ಲಿ ಕಾಂಗ್ರೆಸ್‌ಗೆ ಜನರೇ ಉತ್ತರ ನೀಡಲಿದ್ದಾರೆ” ಎಂದು ಹೇಳಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ., ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಮಾತನಾಡಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಪ್ರಾಸ್ತಾವಿಕ ಮಾತನಾಡಿ , ಸ್ವಾಗತಿಸಿದರು. ಗುಣವತಿ ಕೊಲ್ಲಂತಡ್ಕ ವಂದಿಸಿದರು. ಬಿಜೆಪಿ ನಗರಾಧ್ಯಕ್ಷ ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮಂಡಲ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಪುಷ್ಪಾ ಮೇದಪ್ಪ ಗೌಡ, ಶಾರದಾ ಡಿ.ಶೆಟ್ಟಿ, ಜಯಂತಿ ಎನ್.ಜೆ., ಸತ್ಯವತಿ ಬಸವನಪಾದೆ, ಭಾರತಿ ಉಳುವಾರು, ಶೀಲಾ ಕುರುಂಜಿ, ಮಮತಾ ಬೊಳುಗಲ್ಲು, ಕಿಶೋರಿ ಶೇಟ್, ಅವಿನಾಶ್ ಕುರುಂಜಿ, ಪ್ರಭೋದ್ ಶೆಟ್ಟಿ ಮೇನಾಲ, ಶಾಂತರಾಮ ಕಣಿಲೆಗುಂಡಿ, ಸೋಮನಾಥ ಪೂಜಾರಿ, ಶ್ರೀಕಾಂತ್ ಮಾವಿನಕಟ್ಟೆ, ಬುದ್ಧ ನಾಯ್ಕ್, ನಾರಾಯಣ ಶಾಂತಿನಗರ, ಜಿನ್ನಪ್ಪ ಪೂಜಾರಿ, ಸುನಿಲ್ ಕೇರ್ಪಳ, ವಿಜಯ ಆಲಡ್ಕ, ಕೃಷ್ಣಯ್ಯ ಮೂಲೆತೋಟ, ರಂಜಿತ್ ಎನ್.ಆರ್., ಬಾಲಚಂದ್ರ ಜಯನಗರ, ಜಗನ್ನಾಥ ಜಯನಗರ, ಅಶೋಕ್ ಅಡ್ಕಾರ್, ತಿಮ್ಮಪ್ಪ ಗೌಡ, ಶಶಿಕಲಾ ನೀರಬಿದ್ರೆ, ಶಿವರಾಮ ಕೇರ್ಪಳ, ಪ್ರಣೀತ್ ಕಣಕ್ಕೂರು, ಪ್ರದೀಪ್ ಕಣಕ್ಕೂರು ಪುರುಷೋತ್ತಮ ಬೊಡ್ಡಣಕೊಚ್ಚಿ, ಧನಂಜಯ ಕುಂಚಡ್ಕ, ವೀಣಾ ಮೋಂಟಡ್ಕ, ಕರುಣಾಕರ ಹಾಸ್ಪಾರೆ, ಮೋಹಿನಿ ಕಟ್ಟ, ಚಂದ್ರಾವತಿ ಸವಣೂರು, ಆಶಾ ರೈಸವಣೂರು, ಲೋಲಾಕ್ಷಿ ದಾಸನಕಜೆ, ರಾಜೇಶ್ ಶೆಟ್ಟಿ ಮೇನಾಲ, ಸೀತಾ ಹೊಸಮಜಲು ಮೊದಲಾದವರಿದ್ದರು.

[t4b-ticker]
error: Content is protected !!