Rangaswamy Mookanahalli: ಎವೆರಿಥಿಂಗ್‌ ಇಸ್‌ ಎ ಪ್ರಾಡಕ್ಟ್‌ ಆಫ್‌ ಟೈಮ್‌ !

Picture of Savistara

Savistara

Bureau Report

ಎಲ್ಲವೂ ಕಾಲದ ಮಹಿಮೆ. ಬೆಳಿಗ್ಗೆ ಎಳೆಬಿಸಿಲಿನಲ್ಲಿ ಹಸಿರು ಹೊದ್ದ ಹೊಲಗದ್ದೆ ಚಂದ ಕಂಡರೆ, ಮುಳುಗುವ ಸೂರ್ಯನ ಹೊಂಬಿಸಿಲಿನಲ್ಲಿ ಹಣ್ಣಾದ ಎಲೆ ಸುಂದರವಾಗಿ ಕಾಣುತ್ತದೆ ಎಂದರು. ಎವೆರಿ ಥಿಂಗ್ ಇಸ್ ಆ ಪ್ರಾಡಕ್ಟ್ ಆಫ್ ಟೈಮ್ ಎನ್ನುವ ಪದ ಮನಸ್ಸಿನಲ್ಲಿ ಕುಳಿತು ಬಿಟ್ಟಿತು. ಆ ಕ್ಷಣದಲ್ಲಿ ಕಟ್ಟಿ ಸಾಹೇಬರಿಗೆ ಈ ವಾರದ ನನ್ನ ವಿಶ್ವವಾಣಿಯ ಅಂಕಣ ಬರಹದ ವಸ್ತುವನ್ನು ನೀವು ನೀಡಿದಿರಿ ಧನ್ಯವಾದ ಎಂದು ಹೇಳಿದೆ.‌

ನಾವು ಸಮಯದ ಮೇಲೆ ನಿಯಂತ್ರಣ ತೆಗೆದುಕೊಳ್ಳದೆ ಹೋದರೆ ನಮ್ಮ ಬದುಕು ಸೂತ್ರ ಕಿತ್ತ ಗಾಳಿಪಟದಂತೆ ಲಾಗ ಹೊಡೆಯಲು ಶುರುವಾಗುತ್ತದೆ. ನಮ್ಮ ಮೌಲ್ಯ ನಾವು ಅರಿತು ಕೊಳ್ಳಬೇಕು, ಆಗ ಸಮಯದ ಮೌಲ್ಯ ತಿಳಿಯುತ್ತದೆ. ಎಲ್ಲಿಯವರೆಗೆ ನಮಗೆ ಸಮಯದ ಮೌಲ್ಯ ತಿಳಿಯುವುದಿಲ್ಲ, ಅಲ್ಲಿಯವರೆಗೆ ಸಮಯದಿಂದ ನಾವೇನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಬಹಳ ಚೆನ್ನಾಗಿ ಗೊತ್ತಿರುತ್ತದೆ.

ಭಾನುವಾರ ಬೆಳಿಗ್ಗೆ ಎಂದಿನಂತೆ ಎದ್ದು ಬೆಳಗಿನ ವಾಕ್ ಹೊರಟಿದ್ದೆ. ಮನಸ್ಸಿನಲ್ಲಿ ವಿಶ್ವವಾಣಿಯ ಅಂಕಣ ಬರಹಕ್ಕೆ ಈ ವಾರ ಯಾವ ವಿಚಾರ ಬರೆಯುವುದು ಎನ್ನುವು ದನ್ನು ಯೋಚಿಸುತ್ತಿದ್ದೆ. ಅಂಕಣ ಬರಹ ಎನ್ನುವುದು ಒಂದು ರೀತಿಯ ತಪಸ್ಸು ಇದ್ದಹಾಗೆ.

ವಾರ ಎನ್ನುವುದು ಚಿಟಿಕೆ ಹೊಡೆಯುವಷ್ಟರಲ್ಲಿ ಕಳೆದು ಹೋಗುತ್ತದೆ. ಇನ್ನೊಂದು ಹೊಸ ವಿಚಾರದೊಂದಿಗೆ ಬರಹ ಸಿದ್ಧಪಡಿಸಿ ಕಳುಹಿಸಬೇಕಾದ ಡೆಡ್‌ಲೈನ್ ಅಂಕಣಕಾರರ ಮುಂದಿರುತ್ತದೆ. ಬಹುತೇಕರು ಅಂಕಣ ಬರಹಗಳ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿಲ್ಲ ದಿರುವುದಕ್ಕೆ ಕಾರಣ ಅದು ಟೈಮ್ ಬೌಂಡ್. ಸಮಯದ ಪರಿಮಿತಿಯಲ್ಲಿ ಇದನ್ನು ನಿಭಾಯಿಯಿಸಬೇಕಾಗುತ್ತದೆ. ಆನ್‌ಲೈನ್ ಯುಗದಲ್ಲಿ ಆನ್‌ಲೈನ್ ಪತ್ರಿಕೆಗಳಿಗೆ ಬರೆಯುವುದು ಬೇರೆಯ ತರಹದ ಸವಾಲು ಒಡ್ಡಿದರೆ, ಪ್ರಿಂಟ್ ಮೀಡಿಯಾಗೆ ಬರೆಯುವಾಗ ಸಮಯ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸುದ್ದಿಮನೆಯಲ್ಲಿನ ತಾಕಲಾಟಗಳನ್ನು ಕೇಳಿದ್ದೇನೆ. ಪ್ರತ್ಯಕ್ಷ ಕಾಣುವ, ಅನುಭವಿಸುವ ಅವಕಾಶವಾಗಿಲ್ಲ ಎನ್ನುವುದು ಬಿಟ್ಟರೆ, ಕೊನೆಯ ಕ್ಷಣದವರೆಗೂ ಅಲ್ಲಿನ ಧಾವಂತಗಳು ಎಷ್ಟು ಎನ್ನುವುದರ ಅಂದಾಜು ಮಾಡಲು ಸಾಧ್ಯವಾಗಿದೆ.

ಅಂಕಣ ಬರಹ ಕೊನೆಗಳಿಗೆಯವರೆಗೂ ಕಳುಹಿಸದವರ ಬೆನ್ನ ಹಿಂದೆ ಬಿದ್ದು ತರಿಸಿಕೊಳ್ಳು ವುದು, ಕೊನೆಯ ಕ್ಷಣದ ಸುದ್ದಿಯನ್ನು ಬಿಡದೆ ಕವರ್ ಮಾಡಬೇಕಾಗುವುದು, ಹೀಗೆ ಒಂದೇ ಎರಡೇ ಸುದ್ದಿಮನೆಯ ಸಮಯದ ಜೊತೆಗಿನ ಗುದ್ದಾಟ ಬಲ್ಲವರೇ ಬಲ್ಲರು.

ಈ ವಾರ ಏನು ಬರೆಯುವುದು ಎನ್ನುವ ವಿಚಾರವನ್ನು ಮನಸ್ಸಿನಲ್ಲಿ ಒಂದೆಡೆ ಚಿಂತಿಸಲು ಬಿಟ್ಟು, ಗೆಳೆಯ ನವೀನ್ ಕಟ್ಟಿಯವರಿಗೆ ಫೋನ್ ಮಾಡಿದೆ. ಮಾತು ಎಂದರೆ ಗೊತ್ತಲ್ಲ ಶುರು ಮಾಡಿದ ವಿಚಾರ ಯಾವುದು ಎನ್ನುವುದು ಮರೆತು ಹೋಗಿರುತ್ತೆ.ಇನ್ನ್ಯಾವುದೋ ಹೊಸ ವಿಚಾರ ಬಂದಿರುತ್ತೆ. ಈ ವಿಚಾರ ಏಕೆ ಮಾತಾಡುತ್ತಿದ್ದೇವೆ ಎನ್ನು ವುದು ಗೊತ್ತಿಲ್ಲದೇ ಅದರ ಬಗ್ಗೆ ಚರ್ಚೆ ಕೂಡ ಆಗುತ್ತೆ. ಇದು ನನ್ನೊಬ್ಬನ ಕಥೆಯಲ್ಲ ಎಂದುಕೊಳ್ಳುವೆ. ಮಾತಿನ ಮಧ್ಯದಲ್ಲಿ ನವೀನ್ ‘ಇವತ್ತು ಜಗತ್ತು ಸುಮ್ಮನೆ ಕುಳಿತು ಒಣ ಮಾತಾಡುವ ಜನರಿಗೆ ಸೇರಿದ್ದಲ್ಲ, ಈ ಸಮಯವನ್ನು ದುಡಿಸಿಕೊಂಡು ಕಾರ್ಯೋನ್ಮುಖ ರಾಗುವವರಿಗೆ ಸೇರಿದ್ದು’ ಎಂದರು. ಮುಂದುವರಿದು’ ಎವೆರಿ ಥಿಂಗ್ ಇಸ್ ಆ ಪ್ರಾಡಕ್ಟ್ ಆಫ್ ಟೈಮ್’ ಸೋಶಿಯಲ್ ಮೀಡಿಯಾ ಬರುವುದಕ್ಕೆ ಮುಂಚೆ ಇದ್ದ ಸಂವಹನದ ರೀತಿಗೂ ಇವತ್ತಿಗೂ ಜಗತ್ತು ಹೇಗೆ ಬದಲಾಗಿದೆ ನೋಡಿ, ಯಾವುದೇ ಒಂದು ನರೇಟಿವ್ ಕಟ್ಟುವುದು ಇವತ್ತಿಗೆ ಸುಲಭದ ಮಾತಲ್ಲ. ‌ಎಲ್ಲವೂ ಕಾಲದ ಮಹಿಮೆ. ಬೆಳಿಗ್ಗೆ ಎಳೆಬಿಸಿಲಿನಲ್ಲಿ ಹಸಿರು ಹೊದ್ದ ಹೊಲಗದ್ದೆ ಚಂದ ಕಂಡರೆ, ಮುಳುಗುವ ಸೂರ್ಯನ ಹೊಂಬಿಸಿಲಿನಲ್ಲಿ ಹಣ್ಣಾದ ಎಲೆ ಸುಂದರವಾಗಿ ಕಾಣುತ್ತದೆ ಎಂದರು. ಎವೆರಿ ಥಿಂಗ್ ಇಸ್ ಆ ಪ್ರಾಡಕ್ಟ್ ಆಫ್ ಟೈಮ್ ಎನ್ನುವ ಪದ ಮನಸ್ಸಿ ನಲ್ಲಿ ಕುಳಿತು ಬಿಟ್ಟಿತು. ಆ ಕ್ಷಣದಲ್ಲಿ ಕಟ್ಟಿ ಸಾಹೇಬರಿಗೆ ಈ ವಾರದ ನನ್ನ ವಿಶ್ವವಾಣಿಯ ಅಂಕಣ ಬರಹದ ವಸ್ತುವನ್ನು ನೀವು ನೀಡಿದಿರಿ ಧನ್ಯವಾದ ಎಂದು ಹೇಳಿದೆ.‌

ಕೊಡುತ್ತ ಹೋದರೆ ನಿತ್ಯವೂ ಒಂದಲ್ಲ ಒಂದು ಅಂಶ ಮುಂದೆ ಬಂದು ನಿಲ್ಲುತ್ತದೆ, ಬದಲಾವಣೆ ಅನಿವಾರ್ಯ ಎನಿಸುತ್ತದೆ. ಹೀಗಾಗಿ ಶಿಸ್ತು ಬಹಳ ಮುಖ್ಯ. ದಿನ ಪ್ಲಾನ್ ಆದ ಮೇಲೆ ಅಂದು ಎದುರಾಗುವ ಎಷ್ಟೇ ಮುಖ್ಯ ಅಂಶವಿದ್ದರೂ ಅದನ್ನು ನಾಳೆಯ ಬ್ಲಾಕ್‌ನಲ್ಲಿ ಹಾಕಬೇಕು.

ಸಾವು ಬದುಕಿನ ನಡುವಿನ ಪ್ರಶ್ನೆ ಎಂದಾಗ ಅದು ಬೇರೆನೇ ಕಥೆ

ನನ್ನ ನೆಚ್ಚಿನ ಸಂಪಾದಕ ರಾದ ವಿಶ್ವೇಶ್ವರ ಭಟ್ಟರು ಸಮಯವನ್ನು ದುಡಿಸಿಕೊಳ್ಳುವ ರೀತಿ ಕೂಡ ನನ್ನನ್ನು ಸದಾ ವಿಸ್ಮಿತನನ್ನಾಗಿಸಿಸುತ್ತದೆ. ಭಗವಂತ ಎಲ್ಲರಿಗೂ 24 ತಾಸು ನೀಡಿ, ಭಟ್ಟರಿಗೆ ಮಾತ್ರ 48 ತಾಸು ನೀಡಿದ್ದಾನೆ ಎನ್ನಿಸುವಷ್ಟರ ಮಟ್ಟಿಗೆ ಅವರು ವೇಳೆಯನ್ನು ದುಡಿಸಿಕೊಳ್ಳುತ್ತಾರೆ.ಇಷ್ಟೆ ಮಾಡಿ ಕೂಡ ಅವರು ಬೇಜಾರು, ಸುಸ್ತು ಎಂದು ಕುಳಿತದ್ದು ಕಾಣುವುದಿಲ್ಲ. ಸಮಯ ವನ್ನು ಸರಿಯಾಗಿ ದುಡಿಸಿಕೊಂಡು ಸದಾ ಬ್ಯುಸಿ ಇರುವವರಿಗೆ ಎಲ್ಲವನ್ನೂ ಮಾಡಲು ಸಾಕಷ್ಟು ವೇಳೆಯಿರುತ್ತದೆ ಎನ್ನುವ ಮಾತನ್ನು ಭಟ್ಟರಂತಹ ವ್ಯಕ್ತಿಗಳನ್ನು ನೋಡಿ ಹೇಳಿದ್ದಾರೆ ಎನ್ನಿಸುತ್ತದೆ. ಅದು ಇನ್ನಷ್ಟು ಬರೆಯಲು, ಕೆಲಸ ಮಾಡಲು ಪ್ರೇರಣೆ ನೀಡು ತ್ತದೆ.

[t4b-ticker]
error: Content is protected !!