ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಮೇಯರ್​ ಆಗಿ ಆಯ್ಕೆಯಾದ ಬಿಜೆಪಿಯ ಪ್ರವೇಶ್ ವಾಹಿ!

Picture of Savistara

Savistara

Bureau Report

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ (MCD) ರಾಜಕೀಯದಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಆಮ್ ಆದ್ಮಿ ಪಾರ್ಟಿ (AAP) ಚುನಾವಣಾ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ, ಬಿಜೆಪಿಯ ಹಿರಿಯ ನಾಯಕ ಪ್ರವೇಶ್ ವಾಹಿ (Pravesh Wahi) ಅವರು ದೆಹಲಿಯ ನೂತನ ಮೇಯರ್ ಆಗಿ ಬುಧವಾರ (ಏಪ್ರಿಲ್ 29) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ರಾಜಾ ಇಕ್ಬಾಲ್ ಸಿಂಗ್ ಅವರು ವಾಹಿ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದ್ದು, ಪಾಲಿಕೆಯಲ್ಲಿ ಬಿಜೆಪಿಯ ಬಲ ಈಗ ಮತ್ತಷ್ಟು ಗಟ್ಟಿಯಾದಂತಾಗಿದೆ.

ಸಾಮಾನ್ಯ ಕಾರ್ಯಕರ್ತನಿಗೆ ಸಿಕ್ಕ ಜಯಮೇಯರ್ ಆಗಿ ಆಯ್ಕೆಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರವೇಶ್ ವಾಹಿ ಭಾವುಕರಾಗಿದ್ದಾರೆ. ನನ್ನಂತಹ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ಕೇಂದ್ರ ನಾಯಕತ್ವಕ್ಕೆ ನಾನು ಚಿರಋಣಿ. ಪಕ್ಷದ ತತ್ವಗಳನ್ನು ಎತ್ತಿ ಹಿಡಿಯುತ್ತಾ, ದೆಹಲಿ ಜನರ ಸೇವೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಯಾರು ಈ ಪ್ರವೇಶ್ ವಾಹಿ?

ಪ್ರವೇಶ್ ವಾಹಿ ಅವರ ಬದುಕು ಮತ್ತು ರಾಜಕೀಯ ಬೆಳವಣಿಗೆ ತುಂಬಾ ಕುತೂಹಲಕಾರಿಯಾಗಿದೆ. ಇವರ ಪೂರ್ವಜರು ಮೂಲತಃ ಪಾಕಿಸ್ತಾನದ ರಾವಲ್ಪಿಂಡಿಯವರಾಗಿದ್ದು, ದೇಶ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದು ದೆಹಲಿಯಲ್ಲಿ ನೆಲೆಸಿದರು.

ಹಳೆಯ ದೆಹಲಿಯ ಎಂಸಿಡಿ ಪ್ರಾಥಮಿಕ ಶಾಲೆಯಲ್ಲೇ ಓದಿದ ಇವರು, ಬಾಲ್ಯದಿಂದಲೂ ಆರ್‌ಎಸ್‌ಎಸ್ (RSS) ಸಿದ್ಧಾಂತದಿಂದ ಪ್ರಭಾವಿತರಾಗಿದ್ದರು. 1990ರಲ್ಲಿ ವಿಶ್ವ ಹಿಂದೂ ಪರಿಷತ್‌ನಲ್ಲಿ ಕೆಲಸ ಆರಂಭಿಸಿದ ಇವರು, ನಂತರ ಬಿಜೆಪಿ ಯುವ ಮೋರ್ಚಾ ಮೂಲಕ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. 2007ರಲ್ಲಿ ರೋಹಿಣಿಯಿಂದ ಮೊದಲ ಬಾರಿಗೆ ಕೌನ್ಸಿಲರ್ ಆಗಿ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೆ ರೋಹಿಣಿ ವಲಯದ ಅಧ್ಯಕ್ಷರಾಗಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಪಾಲಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಪಾಲಿಕೆಯಲ್ಲಿ ಬಿಜೆಪಿಯ ಬಲ ಎಷ್ಟು?

ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಹಾದಿ ಸುಗಮವಾಗಿತ್ತು. ದೆಹಲಿ ಪಾಲಿಕೆಯ ಒಟ್ಟು 273 ಮತಗಳ ಪೈಕಿ (ಕೌನ್ಸಿಲರ್‌ಗಳು, ಶಾಸಕರು ಮತ್ತು ಸಂಸದರನ್ನೂ ಒಳಗೊಂಡಂತೆ) ಗೆಲ್ಲಲು ಕೇವಲ 137 ಮತಗಳು ಬೇಕಿದ್ದವು. ಆದರೆ, ಬಿಜೆಪಿಯು 156 ಸದಸ್ಯರ ಬೆಂಬಲದೊಂದಿಗೆ ಸ್ಪಷ್ಟ ಬಹುಮತ ಹೊಂದಿತ್ತು. ಕಾಂಗ್ರೆಸ್ ಕೇವಲ 9 ಮತಗಳಿಗೆ ಸೀಮಿತವಾಗಿದ್ದರೆ, ಎಎಪಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಬಿಜೆಪಿಗೆ ಲಾಭದಾಯಕವಾಯಿತು.

ಮುಂದಿರುವ ಸವಾಲುಗಳೇನು?

ದೆಹಲಿ ಮೇಯರ್ ಹುದ್ದೆ ಮುಳ್ಳಿನ ಹಾಸಿಗೆಯಿದ್ದಂತೆ. ಕಸದ ವಿಲೇವಾರಿ, ಮಾಲಿನ್ಯ ನಿಯಂತ್ರಣ ಮತ್ತು ಪಾಲಿಕೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು ವಾಹಿ ಅವರ ಮುಂದಿರುವ ದೊಡ್ಡ ಸವಾಲುಗಳು ಎಂದು ಹೇಳಬಹುದಾಗಿದೆ,

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!