ಸುಳ್ಯ ಕ್ಷೇತ್ರದಲ್ಲಿ ವಿವಿಧ ಸೇತುವೆ ಕಾಮಗಾರಿಗಳಿಗೆ 5 ಕೋಟಿ ಅನುದಾನ ಬಿಡುಗಡೆ

Picture of Savistara

Savistara

Bureau Report

ಸುಳ್ಯ: ಶಾಸಕರ ಶಿಫಾರಸ್ಸಿನ ಮೇರೆಗೆ ಸುಳ್ಯ ಮತ್ತು ಕಡಬ ತಾಲ್ಲೂಕಿನ ಜಿಲ್ಲಾ ಪಂಚಾಯತ್ ಮುಖ್ಯ ರಸ್ತೆ ಮತ್ತು ಲೊಕೋಪಯೋಗಿ ರಸ್ತೆಗಳಲ್ಲಿ ಶಿಥಿಲಗೊಂಡಿರುವ 5 ಸೇತುವೆಗಳ ಅಭಿವೃದ್ಧಿಗೆ 5ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಸುಳ್ಯ ತಾಲೂಕಿನ

ನಡುಗಲ್ಲು-ಹರಿಹರ-ಪಲ್ಲತಡ್ಕ ಬಾಳುಗೋಡು ರಸ್ತೆಯ ಕಿ.ಮೀ 10.75 ರಲ್ಲಿ ಪದಕ ಎಂಬಲ್ಲಿ ಸೇತುವೆ ನಿರ್ಮಾಣಕದಕೆ 1.75 ಕೋಟಿ, ಮಡಪ್ಪಾಡಿ ಗ್ರಾಮದ ಸೇವಾಜೆ-ಮಡಪ್ಪಾಡಿ-ಕಂದ್ರಪ್ಪಾಡಿ-ಗುತ್ತಿಗಾರು ರಸ್ತೆಯ ಕಿ.ಮೀ 11.70ರ ಮೆಟ್ಟಿನಡ್ಕ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 1.50 ಕೋಟಿ ಮಂಡೆಕೋಲು ಗ್ರಾಮದ ಸುಳ್ಯ-ಕಾಂತಮಂಗಲ- ಅಜ್ಜಾವರ-ಮಂಡೆಕೋಲು- ಕನ್ಯಾನ ರಸ್ತೆಯ ಕಿ.ಮೀ 8.50 ರಲ್ಲಿ ತೋಟಂಪ್ಪಾಡಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 60 ಲಕ್ಷ ಸುಳ್ಯ ತಾಲೂಕು ಪುಳಿಕುಕ್ಕು-ಎಡಮಂಗಲ- ಅಲೆಕ್ಕಾಡಿ ರಸ್ತೆಯ ಕಿ.ಮೀ 2.50 ರಲ್ಲಿ ಡೆಕ್ಕಳ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ (ಹಾನಿಗೊಳಗಾದ ಕಿರಿದಾದ ಸೇತುವೆ ಬದಲಿಗೆ) 25 ಲಕ್ಷ, ಪೈಚಾರು-ಬೆಳ್ಳಾರೆ-ಸವಣೂರು-ಕುದ್ಮಾರು-ಅಲಂಕಾರು-ಸುಬ್ರಹ್ಮಣ್ಯ ರಸ್ತೆಯ ಕಿ.ಮೀ 3.50 ರಲ್ಲಿ ಸೇತುವೆ ನಿರ್ಮಾಣಕ್ಕೆ 90 ಲಕ್ಷ ಬಿಡುಗಡೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!