ಲೋಕಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಸಭಾಧ್ಯಕ್ಷರಿಗೆ ಡಿಎಂಕೆ ಮನವಿ; ಕಾಂಗ್ರೆಸ್ ನೊಂದಿಗೆ ಮೈತ್ರಿ ಕೊನೆಗೊಂಡಿದೆ ಎಂದು ಸಭಾಧ್ಯಕ್ಷರಿಗೆ ಕನಿಮೋಳಿ ಪತ್ರ

Picture of Savistara

Savistara

Bureau Report

ಹೊಸದಿಲ್ಲಿ ಮೇ 7: ಲೋಕಸಭೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಪಕ್ಷದ ಸಂಸತ್ ಸದಸ್ಯೆ ಕನಿಮೋಳಿ ಕರುಣಾನಿಧಿ ಅವರು ಲೋಕಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.ಕಾಂಗ್ರೆಸ್‌ನೊಂದಿಗಿನ ಡಿಎಂಕೆಯ ಮೈತ್ರಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸದಸ್ಯರೊಂದಿಗೆ ಡಿಎಂಕೆ ಸದಸ್ಯರು ಅಕ್ಕಪಕ್ಕ ಕುಳಿತುಕೊಳ್ಳುವ ಪ್ರಸ್ತುತ ಆಸನ ವ್ಯವಸ್ಥೆಯನ್ನು ಬದಲಾಯಿಸುವಂತೆ ಅವರು ಮನವಿ ಮಾಡಿದ್ದಾರೆ.’ಬದಲಾದ ರಾಜಕೀಯ ಪರಿಸ್ಥಿತಿ ಮತ್ತು ಕಾಂಗ್ರೆಸ್‌ನೊಂದಿಗಿನ ನಮ್ಮಮೈತ್ರಿ ಕೊನೆಗೊಂಡಿರುವುದರಿಂದ, ನಮ್ಮ ಸದಸ್ಯರು ಸದನದಲ್ಲಿ ಅವರ ಜೊತೆಗೆ ಪ್ರಸ್ತುತ ಆಸನ ವ್ಯವಸ್ಥೆಯನ್ನು ಮುಂದುವರಿಸುವುದು ಸೂಕ್ತವಲ್ಲ’ ಎಂದು ಕನಿಮೋಳಿ ಪತ್ರದಲ್ಲಿ ತಿಳಿಸಿದ್ದಾರೆ.ಡಿಎಂಕೆ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಪ್ರತ್ಯೇಕ ಆಸನಗಳನ್ನು ಹಂಚಿಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಭಾಧ್ಯಕ್ಷರನ್ನು ಕೋರಿದ್ದಾರೆ. ಈ ಕುರಿತು ತಮ್ಮಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಸಭಾಧ್ಯಕ್ಷರನ್ನು ಕನಿಮೋಳಿ ವಿನಂತಿಸಿದ್ದಾರೆ.

[t4b-ticker]
error: Content is protected !!