ಚಿತ್ರದುರ್ಗ : ಬಿ.ಎಸ್.ವೈ ಅಭಿಮಾನೋತ್ಸವ ಕಾರ್ಯಕ್ರಮ : ನಿನ್ನೆ ಅದ್ಧೂರಿ ಪುರಪ್ರವೇಶ

Picture of Savistara

Savistara

Bureau Report

ಇಂದು (ಮೇ 9ರಂದು) ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ “ಬಿ.ಎಸ್.ವೈ ಅಭಿಮಾನೋತ್ಸವ” ಬೃಹತ್ ಕಾರ್ಯಕ್ರಮದ ಅಂಗವಾಗಿ, ನಿನ್ನೆ ಚಿತ್ರದುರ್ಗ ನಗರದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ರೈತ ನಾಯಕ ಬಿ. ಎಸ್.‌ ಯಡಿಯೂರಪ್ಪ ಅವರ ಅದ್ಧೂರಿ ಪುರಪ್ರವೇಶ ಕಾರ್ಯಕ್ರಮ ಜರುಗಿತು.

ಕನಕವೃತ್ತದಿಂದ ಮದಕರಿ ವೃತ್ತದವರೆಗೆ ನಡೆದ ಈ ಭವ್ಯ ಮೆರವಣಿಗೆಯಲ್ಲಿ ಸಹಸ್ರಾರು ಅಭಿಮಾನಿಗಳು ಭಾಗವಹಿಸಿ, ತಮ್ಮ ನೆಚ್ಚಿನ ನಾಯಕನಿಗೆ ಹೂಮಳೆಗರೆದು ಜಯಘೋಷಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಐದು ದಶಕಗಳ ಕಾಲ ನಾಡಿನ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕನಿಗೆ ಚಿತ್ರದುರ್ಗದ ಜನತೆ ತೋರಿದ ಈ ಪ್ರೀತಿ ಅಪ್ರತಿಮವಾದುದು.ಈ ಐತಿಹಾಸಿಕ ಕ್ಷಣಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್.‌ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ಸಂಸದ ಬಿ ವೈ ರಾಘವೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕರಾದ ಆರ್.‌ ಅಶೋಕ್‌, ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ,

ಹಿರಿಯ ನಾಯಕರಾದ ಶ್ರೀ ಸಿ. ಟಿ. ರವಿ ಸೇರಿದಂತೆ ಹಲವಾರು ಮಾಜಿ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಹಾಗೂ ಪಕ್ಷದ ಪ್ರಮುಖರು ಸಾಕ್ಷಿಯಾದರು.ಈ ಪುರಪ್ರವೇಶವು ನಾಳೆಯ ಬೃಹತ್ ಅಭಿಮಾನೋತ್ಸವಕ್ಕೆ ಮುನ್ನುಡಿ ಬರೆದಿದ್ದು, ಕೋಟೆ ನಾಡಿನಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.

[t4b-ticker]
error: Content is protected !!