ಬಂಗಾಳದಲ್ಲಿ ಸುವೇಂದು ಸರ್ಕಾರ! ನಮ್ಮ ಸಮುದಾಯವನ್ನು ನಿರ್ಲಕ್ಷಿಸಬೇಡಿ: ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷನ ಹೇಳಿಕೆ ವೈರಲ್!

Picture of Savistara

Savistara

Bureau Report

ಉತ್ತರ ಪ್ರದೇಶ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿ, ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫಿ ಶಹಾಬುದ್ದೀನ್‌ ರಜ್ಜಿ (Maulana Razvi on Suvendu Adhikari) ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

ಪಶ್ಚಿಮ ಬಂಗಾಳದ ಸಿಎಂ ಆಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ ಅವರನ್ನು ನಾವು ಅಭಿನಂದಿಸುತ್ತೇನೆ, ಸುವೇಂದು ಅವರು ರಾಜ್ಯದಲ್ಲಿರುವ ಮುಸ್ಲಿಮರನ್ನು ತಮ್ಮ ಜೊತೆಗೆ ಕರೆದೊಯ್ಯಬೇಕೆಂದು ವಿನಂತಿಸುತ್ತೇನೆಂದು ರಜ್ಜಿ ಹೇಳಿಕೆ ನೀಡಿದ್ದಾರೆ.

ಸಬ್ಬಾ ಸಾಥ್, ಸಬ್ಬಾ ವಿಕಾಸ್ ಮತ್ತು ಸಬ್ಬಾ ವಿಶ್ವಾಸ್‌ ಪಾಲಿಸಿ

ಸಿಎಂ ಸುವೇಂದು ಅಧಿಕಾರಿ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದ ಮೌಲಾನಾ ರಜ್ಜಿ, ಸುವೇಂದು ಅವರು ಬಂಗಾಳದಲ್ಲಿ ಬಿಜೆಪಿಯ ಹೇಳಿಕೆಯಾದ ಸಬ್ಬಾ ಸಾಥ್, ಸಬ್ಬಾ ವಿಕಾಸ್ ಮತ್ತು ಸಬ್ಬಾ ವಿಶ್ವಾಸ್‌ನ್ನು ಪಾಲಿಸುತ್ತಾರೆಂದು ನಾನು ಭಾವಿಸಿದ್ದೇನೆಂದು ಹೇಳಿದ್ದಾರೆ.

ಬಂಗಾಳದಲ್ಲಿ ಮುಸ್ಲಿಮರು ಸುವೇಂದು ಅವರಿಗೆ ಮತ ನೀಡಿದ್ದಾರೋ, ಇಲ್ಲವೋ ಗೊತ್ತಿಲ್ಲ, ಆದರೆ ಅವರೀಗ ಎಲ್ಲಾ ಸಮುದಾಯದ ಮುಖ್ಯಮಂತ್ರಿ ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ ಜನರ ಪರವಾಗಿ ಕೆಲಸ ಮಾಡಲಿ. ಬಂಗಾಳದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ, ಹೀಗಾಗಿ ಬಹುಸಂಖ್ಯಾತ ಸಮಾಜವನ್ನು ನಿರ್ಲಕ್ಷಿಸಬೇಡಿ ಎಂದು ಅವರು ಹೇಳಿದ್ದಾರೆ.

ಮುಸ್ಲಿಮರು ದಾರಿ ತಪ್ಪುವುದಿಲ್ಲ

ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಯನ್ನು ಆಧರಿಸಿ ಭಾರತದಲ್ಲಿರುವ ಮುಸ್ಲಿಮರ ಮೇಲೆ ಹಲ್ಲೆ ನಡೆಸುವುದು ತಪ್ಪಾಗುತ್ತದೆ. ಭಾರತದಲ್ಲಿರುವ ಮುಸ್ಲಿಮರು ಯಾವತ್ತೂ ತಪ್ಪಾದ ದಾರಿಯಲ್ಲಿ ನಡೆಯುವುದಿಲ್ಲವೆಂದು ಮೌಲಾನಾ ಮುಪ್ತಿ ಶಹಾಬುದ್ದೀನ್ ರಜ್ಜಿ ಹೇಳಿಕೆ ನೀಡಿದ್ದಾರೆ,

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!