ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆ ಪತ್ರಿಕೆ; ತೀವ್ರ ಆಕ್ರೋಶ

Picture of Savistara

Savistara

Bureau Report

ನಾರ್ವೆ, ಮೇ 19: ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿಗತಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಭೇಟಿಯ ವೇಳೆ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ನಾರ್ವೆಯ ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿದ ವ್ಯಂಗ್ಯಚಿತ್ರವು ಜನಾಂಗೀಯ ದ್ವೇಷದ ಆರೋಪಕ್ಕೆ ಗುರಿಯಾಗಿದೆ. ಬಿಜೆಪಿ ನಾಯಕ ಮೋದಿಯವರನ್ನು ‘ಹಾವಾಡಿಗ’ನಂತೆ ಚಿತ್ರಿಸಿರುವ ಈ ಕಾರ್ಟೂನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.ಪ್ರಧಾನಿ ಮೋದಿ ಓಸೋಗೆ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು ನಾರ್ವೆಯ ‘ಆಪ್ಟನ್‌ಪೋಸ್ಟನ್’ ಎಂಬ ಪತ್ರಿಕೆಯು ಒಂದು ಲೇಖನದೊಂದಿಗೆ ಈ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು. ಇದರಲ್ಲಿ ಮೋದಿಯವರನ್ನು ಹಾವಾಡಿಗನ ರೂಪದಲ್ಲಿ ತೋರಿಸಲಾಗಿದ್ದು, ಹಾವಿನ ಬದಲು ಪೆಟ್ರೋಲ್ ಬಂಕಿನ ಇಂಧನ ಪೈಪ್ ಅನ್ನು ಅವರು ನಿಯಂತ್ರಿಸುತ್ತಿರುವಂತೆ ಚಿತ್ರಿಸಲಾಗಿದೆ.

ಭಾರತವು ನಾರ್ವೆ ಕಡೆಗೆ ಯಾಕೆ ಒಲವು ತೋರುತ್ತಿದೆ ಎಂಬ ಬಗ್ಗೆ ಈ ಲೇಖನ ವಿಶ್ಲೇಷಿಸಿತ್ತು.ಈ ವ್ಯಂಗ್ಯಚಿತ್ರವು ವೈರಲ್ ಆಗುತ್ತಿದ್ದಂತೆಯೇ ಜನರು ನಾರ್ವೆ ಪತ್ರಿಕೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಭಾರತವನ್ನು ಕೇವಲ ಹಾವಾಡಿಗರು ಮತ್ತು ಮೂಢನಂಬಿಕೆಗಳ ನಾಡು ಎಂದು ಹಳೆಯ ಕಾಲದ ದೃಷ್ಟಿಕೋನದಲ್ಲಿ ಬಿಂಬಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.ಆಧುನಿಕ ಭಾರತವು ತಂತ್ರಜ್ಞಾನ ಮತ್ತು ಆರ್ಥಿಕತೆಯಲ್ಲಿ ಮುನ್ನಡೆಯುತ್ತಿದ್ದರೂ, ಇನ್ನೂ ಹಳೆಯ ‘ಸ್ನೇಕ್ ಚಾರ್ಮರ್’ ಬಿಂಬವನ್ನು ಬಳಸುವುದು ವರ್ಣಭೇದ ನೀತಿಯ ಲಕ್ಷಣ ಎಂದು ಕೆಲವರು ಆಕ್ಷೇಪಿಸಿದ್ದಾರೆ.”ಭಾರತವನ್ನು ಈ ರೀತಿ ಹಳೆಯ ಮಾದರಿಯಲ್ಲಿ ಚಿತ್ರಿಸುವುದು ಪತ್ರಿಕೆಯ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ,” ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!