ಬಿಎಸ್‌ಎನ್‌ಎಲ್‌ನಿಂದ ಉಚಿತ ಹೈ-ಸ್ಪೀಡ್ ಇಂಟರ್‌ನೆಟ್, ಉದ್ಯೋಗಾವಕಾಶ

Picture of Savistara

Savistara

Bureau Report

ಮೈಸೂರು: ಕೇಂದ್ರ ದೂರಸಂಪರ್ಕ ಇಲಾಖೆ ‘ಡಿಜಿಟಲ್ಭಾರತ್ ನಿಧಿ’ (ಡಿಬಿಎನ್) ಯೋಜನೆಯಡಿ ಬಿಎಸ್‌ಎನ್‌ಎಲ್ ಮೈಸೂರು ವಲಯವು ಹಳ್ಳಿಗಳಲ್ಲಿ ಉಚಿತ ಎಫ್‌ಟಿಟಿಎಚ್ ಇಂಟರ್‌ನೆಟ್ ಅಳವಡಿಕೆ ಹಾಗೂ ಗ್ರಾಮೀಣ ಸ್ವಯಂ ಉದ್ಯೋಗ ಅಭಿಯಾನ ಹಮ್ಮಿಕೊಂಡಿದೆ.

ಭಾರತ್‌ನೆಟ್‌ ಯೋಜನೆಯಡಿ ವೈಫೈ ರೌಟರ್ (ಸಿಪಿಇ/ಒಎನ್‌ಟಿ) ಮತ್ತು ಆಪ್ಟಿಕಲ್ ಫೈಬ‌ರ್ ಕೇಬಲ್ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಯಾವುದೇ ಇನ್‌ಸ್ಟಾಲೇಷನ್‌ ಶುಲ್ಕ ಇರುವುದಿಲ್ಲ, ಗ್ರಾಹಕರು ಮಾಸಿಕ ಚಂದಾದಾರಿಕೆ ಪಾವತಿಸಬೇಕು.ಗ್ರಾಮೀಣ ಗ್ರಾಹಕರಿಗೆ ₹ 259 ಮಾಸಿಕ ಪ್ಲಾನ್ ಪರಿಚಯಿಸಲಾಗಿದೆ. ಇದರಲ್ಲಿ 25 ಎಂಬಿಪಿಎಸ್ ವೇಗದ 700 ಜಿಬಿ ಡೇಟಾ, ಅನಿಯಮಿತ ಕರೆಗಳು ಹಾಗೂ ಪ್ರಸಾರ ಭಾರತಿ ಟಿವಿ/ವೇವ್ ಆ್ಯಪ್/ ಬಿಎಸ್ಎನ್‌ಎಲ್-ಸೈಪ್ರೊ ಐಎಫ್‌ಟಿವಿ ಉಚಿತ ಚಾನೆಲ್‌ಗಳು ದೊರೆಯಲಿವೆ.ಗ್ರಾಮೀಣ ಯುವಕರು ‘ಭಾರತ್‌ನೆಟ್ ಉದ್ಯಮಿ’ ಆಗಿ ನೋಂದಾಯಿಸಿಕೊಳ್ಳಬಹುದು ಮತ್ತು ಹಳ್ಳಿಗಳಿಗೆ ಇಂಟರ್‌ನೆಟ್ ಸೇವೆ ಒದಗಿಸುವ ಮೂಲಕ ಆದಾಯ ಗಳಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ .. 0821-2364545, ಮೊಬೈಲ್ ನಂಬರ್.94490 31004 ಸಂಪರ್ಕಿಸಬಹುದು ಎಂದು ಸಹಾಯಕ ಮಹಾಪ್ರಬಂಧಕ (ಮಾರುಕಟ್ಟೆ) ರಾಜೇಂದ್ರಕುಮಾರ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]
error: Content is protected !!