ಎಸ್‌ಐಆ‌ರ್: ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

Picture of Savistara

Savistara

Bureau Report

ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ‘ಎನ್ಯುಮರೇಷನ್ ಫಾರ್ಮ್’ ಅನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನ ಹಮ್ಮಿಕೊಂಡಿದೆ. ಇದೀಗ ಗ್ರೇಟ‌ರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಕೂಡ ಈ ಫಾರ್ಮ್ ಭರ್ತಿಗೆ ಆದೇಶ ಹೊರಡಿಸಿದೆ.

ಹಾಗಾದರೆ, ಈ ಎನ್ನುಮರೇಷನ್ ಫಾರ್ಮ್ ಅನ್ನು ಭರ್ತಿ ಮಾಡುವುದು ಹೇಗೆ? ಎಂಬ ಹಂತ-ಹಂತವಾದ ಮಾಹಿತಿ ಇಲ್ಲಿದೆ.

  • ಹಂತ – 1

ಮೊದಲ ಭಾಗದಲ್ಲಿ ಮತದಾರರ ವಿಳಾಸ, ಹೆಸರು, ಭಾವಚಿತ್ರ, ಮೊಬೈಲ್ ಸಂಖ್ಯೆ, ಎಪಿಕ್ ಸಂಖ್ಯೆ, ಮತಗಟ್ಟೆಯ ವಿಳಾಸವಿರುತ್ತದೆ.ಒಂದು ವೇಳೆ ನಿಮ್ಮ ಭಾವಚಿತ್ರ ಹಳೆಯದಾಗಿದ್ದರೆ, ಅಸ್ಪಷ್ಟವಾಗಿದ್ದರೆ, ಹೊಸ ಭಾವಚಿತ್ರವನ್ನು ಒದಗಿಸಬೇಕಾಗುತ್ತದೆ.ಒಂದು ವೇಳೆ ಹಳೆಯ ಭಾವಚಿತ್ರ ಸರಿಯಾಗಿದ್ದರೆ, ಹೊಸ ಭಾವಚಿತ್ರ ನೀಡದೆಯೇ ಮುಂದುವರಿಯಬಹುದು.

  • ಹಂತ – 2

2002ರ ಸಾಲಿನ ಮತದಾರರ ಪಟ್ಟಿಯಲ್ಲಿರುವಂತೆ, ಕೇಳಲಾದ ದಾಖಲೆಗಳನ್ನು ಭರ್ತಿ ಮಾಡಬೇಕು. 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಣಿಯಾಗಿದ್ದರೆ, ಮಾತ್ರ ಮೊದಲ ಪಟ್ಟಿಯಲ್ಲಿ ನಿಮ್ಮ ಮಾಹಿತಿ ಭರ್ತಿ ಮಾಡಬೇಕು.ಒಂದು ವೇಳೆ 2002ರಲ್ಲಿ ಮತದಾನ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಣಿಯಾಗದಿದ್ದರೆ, 2 ನೇ ಭಾಗದಲ್ಲಿ ನಿಮ್ಮ ಮನೆಯ ಸದಸ್ಯರ ವಿವರವನ್ನು ಭರ್ತಿ ಮಾಡಬೇಕು.(2002 ರ ಮತದಾನದ ಪಟ್ಟಿಯ ವಿವರಗಳು ನಿಮ್ಮ ಮತಗಟ್ಟೆಯ ಅಧಿಕಾರಿಗಳ ಬಳಿ ಲಭ್ಯವಿರುತ್ತದೆ. ಅಥವಾ ಮುಖ್ಯ ಚುನಾವಣಾಧಿಕಾರಿಯವರ ಅಧಿಕೃತ ಜಾಲತಾಣ ‘ceo.karnataka.gov.in’ ನಲ್ಲಿ ನಿಮ್ಮ ಮಾಹಿತಿ ಲಭ್ಯವಿರುತ್ತದೆ.)

  • ಹಂತ 3

ಇದರಲ್ಲಿ ನಿಮ್ಮ ಪ್ರಸ್ತುತ ವಿವರಗಳನ್ನು ನಮೂದಿಸಬೇಕು. ಜನ್ಮ ದಿನಾಂಕವನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಮೊಬೈಲ್‌ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ನಮೂದಿಸುವುದು ಐಚ್ಛಿಕವಾಗಿರುತ್ತದೆ. ಪೋಷಕರು ಅಥವಾ ಮದುವೆಯಾಗಿದ್ದರೆ, ಗಂಡ-ಹೆಂಡತಿಯ ಹೆಸರು ನಮೂದಿಸಿ. ಅವರ ವೋಟರ್ ಐಡಿ ಸಂಖ್ಯೆ ಇದ್ದರೆ ನಮೂದಿಸಬಹುದು. (ಕಡ್ಡಾಯವಲ್ಲ).

  • ಹಂತ 4

ನಮೂದಿಸಿರುವ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ ಸಹಿ ಹಾಕಿ ಅಥವಾ ಹೆಬ್ಬೆರಳಿನ ಗುರುತು ನೀಡಿ. (ನಿಮ್ಮ ಪರವಾಗಿ ನಿಮ್ಮ ಕುಟುಂಬದ ಯಾರಾದರೂ ವಯಸ್ಕ ಸದಸ್ಯರು ನಿಮ್ಮ ಸಂಬಂಧವನ್ನು ನಮೂದಿಸಿ ಸಹಿ ಮಾಡಬಹುದು)ಭರ್ತಿಯಾದ ಫಾರ್ಮ್ ಅನ್ನು ನಿಮ್ಮ ಸ್ಥಳೀಯ ಮಟ್ಟದ ಮತಗಟ್ಟೆಯ ಅಧಿಕಾರಿಗೆ ನೀಡಬೇಕು. ಅವರು ಅಧಿಕೃತವಾಗಿ ಸಹಿ pಮಾಡುತ್ತಾರೆ. ಬಳಿಕ ದಾಖಲೆಗಾಗಿ ಒಂದು ಫಾರ್ಮ್ ಪ್ರತಿ ಅವರ ಬಳಿ ಇಟ್ಟುಕೊಂಡು, ಮತ್ತೊಂದು ಪ್ರತಿಯನ್ನು ನಿಮಗೆ ನೀಡುತ್ತಾರೆ. ಇದನ್ನು ಭದ್ರವಾಗಿ ಎತ್ತಿಟ್ಟುಕೊಳ್ಳುವುದು ಉತ್ತಮ.

ವಿಶೇಷ ಸೂಚನೆ: ಎನ್ಯುಮರೇಷನ್ ಫಾರ್ಮ್ ಜೊತೆಗೆ ಯಾವುದೇ ದಾಖಲೆ ಒದಗಿಸುವಂತಿಲ್ಲ.

[t4b-ticker]
error: Content is protected !!