ಪಾಸ್‌ಪೋರ್ಟ್‌ ಶುಲ್ಕ ಹೆಚ್ಚಿಸಿದ ಕೇಂದ್ರ ಸರ್ಕಾರ: ಜುಲೈ 1ರಿಂದಲೇ ಜಾರಿ

Picture of Savistara

Savistara

Bureau Report

ನವದೆಹಲಿ: ಕೇಂದ್ರ ಸರ್ಕಾರವು 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಸ್‌ಪೋರ್ಟ್ ಶುಲ್ಕವನ್ನು ಹೆಚ್ಚಿಸಿದೆ.

ಪಾಸ್‌ಪೋರ್ಟ್ ಪ್ರಮುಖವಾಗಿ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು ಭಾರತೀಯ ಪೌರತ್ವದ ಪುರಾವೆಯಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ ಮರುದಿನವೇ ಈ ಪರಿಷ್ಕೃತ ಶುಲ್ಕದ ಪಟ್ಟಿಯನ್ನು ಪ್ರಕಟಿಸಲಾಗಿದೆ.ಹೊಸ ದರಗಳು ಇಂತಿವೆ: ಕಳೆದುಹೋದ ಅಥವಾ ಹಾನಿಗೊಳಗಾದ ಪಾಸ್‌ಪೋರ್ಟ್‌ಗಳ ಬದಲಿಗೆ ಹೊಸದನ್ನು ಪಡೆಯಲು ಬಯಸುವ ಅರ್ಜಿದಾರರು ಸಹ ಇನ್ಮುಂದೆ ಗಣನೀಯವಾಗಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಳೆದುಹೋದ ಅಥವಾ ಹಾನಿಗೊಳಗಾದ 36 ಪುಟಗಳ ಪಾಸ್‌ಪೋರ್ಟ್ ಬದಲಿಗೆ ಹೊಸದು ಪಡೆಯಲು ಸಾಮಾನ್ಯ ಯೋಜನೆಯಡಿ ₹5,000 ಮತ್ತು ತತ್ಕಾಲ್ ಅಡಿಯಲ್ಲಿ ₹7,500 ವೆಚ್ಚವಾಗಲಿದೆ. ಅದೇ ರೀತಿ, 60 ಪುಟಗಳ ಪಾಸ್‌ಪೋರ್ಟ್‌ಗೆ ಕ್ರಮವಾಗಿ ₹6,000 ಮತ್ತು ₹8,500 ವೆಚ್ಚವಾಗಲಿದೆ.18 ವರ್ಷದೊಳಗಿನ ಅರ್ಜಿದಾರರಿಗೆ ಹೊಸ ಅಥವಾ ಮರುಹಂಚಿಕೆ ಮಾಡಲಾದ 36 ಪುಟಗಳ ಪಾಸ್‌ಪೋರ್ಟ್‌ಗೆ ಸಾಮಾನ್ಯ ಯೋಜನೆಯಡಿ ₹1,750 ಮತ್ತು ತತ್ಕಾಲ್ ಅಡಿಯಲ್ಲಿ ₹4,250 ವೆಚ್ಚವಾಗಲಿದೆ. ಅಪ್ರಾಪ್ತ ವಯಸ್ಕರಿಗೆ ಕಳೆದುಹೋದ ಅಥವಾ ಹಾನಿಗೊಳಗಾದ ಪಾಸ್‌ಪೋರ್ಟ್ ಬದಲಿಸಲು ಸಾಮಾನ್ಯ ವಿಭಾಗದ ಅಡಿಯಲ್ಲಿ ₹4,250 ಮತ್ತು ತತ್ಕಾಲ್ ಅಡಿಯಲ್ಲಿ ₹6,750 ಶುಲ್ಕವನ್ನು ನಿಗದಿಪಡಿಸಲಾಗಿದೆ.ಜುಲೈ 1ರಂದು ಅಥವಾ ಅದರ ನಂತರ ಸಲ್ಲಿಕೆಯಾಗುವ ಎಲ್ಲಾ ಪಾಸ್‌ಪೋರ್ಟ್‌ ಅರ್ಜಿಗಳಿಗೆ ಈ ಪರಿಷ್ಕೃತ ಶುಲ್ಕ ಅನ್ವಯಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

2012ರಲ್ಲಿ ಪಾಸ್‌ಪೋರ್ಟ್ ಶುಲ್ಕ ಪರಿಷ್ಕರಣೆ ಮಾಡಲಾಗಿತ್ತು. ಆಗ ಸರ್ಕಾರವು ಪ್ರಮಾಣಿತ 36 ಪುಟಗಳ ಪಾಸ್‌ಪೋರ್ಟ್ ಶುಲ್ಕವನ್ನು ₹1,000ದಿಂದ ₹1,500ಕ್ಕೆ ಮತ್ತು ತತ್ಕಾಲ್ ಶುಲ್ಕವನ್ನು ₹2,500ದಿಂದ ₹3,500ಕ್ಕೆ ಹೆಚ್ಚಿಸಿತ್ತು.

[t4b-ticker]
error: Content is protected !!