PM ಮೋದಿ ಫೋಟೊಗೆ ನಿತ್ಯ ಸಿಹಿ ನೈವೇದ್ಯ ಅರ್ಪಿಸುವ ಸುನೀಲ್ ಶೆಟ್ಟಿ ಮೊಮ್ಮಗಳು!

Picture of Savistara

Savistara

Bureau Report

ಬಾಲಿವುಡ್‌ನ ಹಿರಿಯ ನಟ ಸುನೀಲ್ ಶೆಟ್ಟಿ ತಮ್ಮ 15 ತಿಂಗಳ ಮುದ್ದಾದ ಮೊಮ್ಮಗಳು ಇವಾರಾ (ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್. ರಾಹುಲ್ ಪುತ್ರಿ) ಕುರಿತು ಅತ್ಯಂತ ಆಸಕ್ತಿದಾಯಕ ಮತ್ತು ಅಪರೂಪದ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪುಟ್ಟ ಮಗುವಿಗೆ ಇರುವ ಒಲವು ಕುರಿತು ನಟ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಫೋಟೋಗೆ ನಿತ್ಯ ನೈವೇದ್ಯ!

87ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಸುನೀಲ್ ಶೆಟ್ಟಿ, ‘ಒಮ್ಮೆ ವಿಮಾನ ನಿಲ್ದಾಣದಲ್ಲಿದ್ದಾಗ ಇವಾರಾಳ ಪಾಲಕಿ (ನ್ಯಾನಿ) ಪ್ರಧಾನಿ ಮೋದಿ ಅವರನ್ನು ತೋರಿಸಿ ಪರಿಚಯಿಸಿದ್ದರು. ಅಂದಿನಿಂದ ಆ ಪುಟ್ಟ ಮಗುವಿನ ನಡವಳಿಕೆಯಲ್ಲಿ ಅಚ್ಚರಿಯ ಬದಲಾವಣೆ ಕಂಡಿದೆ. ಇವಾರಾ ಪ್ರತಿದಿನ ಬೆಳಿಗ್ಗೆ ಸಾಯಿಬಾಬಾ ಅವರ ಪುಸ್ತಕವನ್ನು ತೆರೆಯುತ್ತಾಳೆ. ಅದರಲ್ಲಿ ಮೋದಿ ಅವರ ಫೋಟೊ ಕೂಡ ಇದೆ. ಅದನ್ನು ನೋಡಿ ‘ಮೋದಿ ಜೀ’ ಎನ್ನುತ್ತಾಳೆ. ಅಷ್ಟೇ ಅಲ್ಲದೆ, ಮನೆಯಲ್ಲಿರುವ ಗಣೇಶನ ಮೂರ್ತಿಯ ಮುಂದಿಟ್ಟಿರುವ ಸಿಹಿಯನ್ನು ತಂದು ಮೋದಿ ಅವರ ಫೋಟೊಗೆ ಅರ್ಪಿಸುತ್ತಾಳೆ ಎಂದಿದ್ದಾರೆ.“ಈ ಅಭ್ಯಾಸವನ್ನು ಮಗುವಿಗೆ ಅವಳ ಪೋಷಕರಾಗಲಿ ಅಥವಾ ಕುಟುಂಬದವರಾಗಲಿ ಯಾರೂ ಕಲಿಸಿಕೊಟ್ಟಿಲ್ಲ. ಅವಳಾಗಿಯೇ ಇದನ್ನು ಮಾಡುತ್ತಿದ್ದಾಳೆ, ಹಾಗಾಗಿ ಅವರಲ್ಲಿ ಏನೋ ಒಂದು ‘ಮ್ಯಾಜಿಕಲ್’ ಶಕ್ತಿ ಇದೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.

ಇದೀಗ ಸುನೀಲ್‌ ಶೆಟ್ಟಿ ಮಾತನಾಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ನಟನ ಹೇಳಿಕೆಗಳು ಟ್ರೋಲ್‌ಗೆ ಗುರಿಯಾಗಿವೆ.

ರಾಜಕೀಯವಲ್ಲ, ನಾಯಕತ್ವದ ಅಭಿಮಾನಿ ನಾನು’

ಪ್ರಧಾನಿ ಮೋದಿ ಅವರ ಮೇಲಿನ ತಮ್ಮ ಅಭಿಮಾನವನ್ನು ಪುನರುಚ್ಚರಿಸಿದ ನಟ, ‘ನಾನು ಯಾವಾಗಲೂ ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ. ನಾನಿಲ್ಲಿ ಯಾವುದೇ ರಾಜಕೀಯ ಪಕ್ಷದ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ಒಬ್ಬ ನಾಯಕನ ಬಗ್ಗೆ ಮಾತನಾಡುತ್ತಿದ್ದೇನೆ. ಒಬ್ಬ ನಾಯಕ ನನ್ನನ್ನು ಆಕರ್ಷಿಸಿದರೆ, ನಾನು ಅವರ ಅಭಿಮಾನಿಯಾಗುತ್ತೇನೆ. ದೇಶವನ್ನು ಎಷ್ಟು ಪ್ರೀತಿಸುತ್ತೇನೋ, ಅಷ್ಟೇ ಈ ನಾಯಕನನ್ನೂ ಗೌರವಿಸುತ್ತೇನೆ’ ಎಂದು ಹೇಳಿದ್ದಾರೆ.

ಮೊಮ್ಮಗಳೇ ‘ಮನೆಯ ಲಕ್ಷ್ಮಿ’

ಮೊಮ್ಮಗಳ ಮೇಲಿನ ಅಪಾರ ಪ್ರೀತಿಯ ಬಗ್ಗೆಯೂ ಮಾತನಾಡಿದ ಸುನೀಲ್ ಶೆಟ್ಟಿ, ‘ಅವಳು ಅಥಿಯಾ ತರಹವೇ ಇದ್ದಾಳೆ. ಇನ್ನೂ ಹೇಳಬೇಕೆಂದರೆ ಅಥಿಯಾಳ 2.0 ವರ್ಷನ್! ಪ್ರತಿದಿನ ಬೆಳಿಗ್ಗೆ 5:30 ರಿಂದ 7 ರವರೆಗೆ ಜಿಮ್ ಮುಗಿಸಿ ಬಂದ ತಕ್ಷಣ ನಾನು ಅವಳೊಂದಿಗೆ ಸಮಯ ಕಳೆಯುತ್ತೇನೆ. ಇದು ನನ್ನ ಜೀವನದ ಅತ್ಯಂತ ಸಂತೋಷದ ಅವಧಿ. ಕೆಲಸದ ನಡುವೆಯೂ ಅವಳನ್ನು ನೋಡಲು ಮನೆಗೆ ಓಡಿಬರಬೇಕು ಎನಿಸುತ್ತದೆ. ಅವಳೇ ನಮ್ಮ ‘ಘರ್ ಕಿ ಲಕ್ಷ್ಮಿ’ (ಮನೆಯ ಲಕ್ಷ್ಮಿ)’ ಎಂದು ಭಾವುಕರಾಗಿದ್ದಾರೆ.

[t4b-ticker]
error: Content is protected !!