ಪುತ್ತೂರು: ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ. ಅವರು ಪಿ.ಹೆಚ್.ಡಿ. ಪದವಿಯನ್ನು ಪಡೆದುಕೊಂಡಿದ್ದಾರೆ.’ಎ ಕ್ರಿಟಿಕಲ್ ಸ್ಟಡಿ ಆನ್ ರೆಸಲ್ಯೂಷನ್ ಆಫ್ ಕಮರ್ಷಿಯಲ್ ಡಿಸ್ಪ್ಯೂಟ್ಸ್ ಇನ್ ರಿಯಲ್ ಎಸ್ಟೇಟ್ ಸೆಕ್ಟರ್ ಥ್ರೂ ಎಡಿಆರ್ ಮೆಕ್ಯಾನಿಸಂ’ ಎಂಬ ವಿಷಯದ ಕುರಿತು ತಮ್ಮ ಮಹಾಪ್ರಬಂಧವನ್ನು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (KSLU) ಸಲ್ಲಿಸಿ, ಪದವಿಯನ್ನು ಪಡೆದಿದ್ದಾರೆ.ಮಂಗಳೂರಿನ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಾರನಾಥ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಪೂರ್ಣಗೊಳಿಸಿದ್ದಾರೆ.ಡಾ. ಅಕ್ಷತಾ ಎ.ಪಿ. ಅವರು 2019-20 ರಿಂದ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರು ಕಬಕ ನಿವಾಸಿ. ಎಸ್.ಡಿ.ಎಂ. ಪಿ.ಯು. ಕಾಲೇಜು ಉಜಿರೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ರಾಜೇಶ್ ಕಲ್ಬೆಟ್ಟು ಅವರ ಪತ್ನಿ. ಕಡಬದ ನಿವೃತ್ತ ಮೆಸ್ಕಾಂ ಇಂಜಿನಿಯರ್ ಅಣ್ಣಿ ಗೌಡ ಪಣೆಮಜಲು ಮತ್ತು ಶ್ರೀಮತಿ ದುರ್ಗಾವತಿ ಅವರ ಪುತ್ರಿ ಹಾಗೂ ಬೆಳ್ತಂಗಡಿ ತಾಲೂಕು ಮಲವಂತಿಗೆಯ ಕುಂಞಿಯಣ್ಣ ಗೌಡ ಕಲ್ಬೆಟ್ಟು ಮತ್ತು ಶ್ರೀಮತಿ ಜಾನಕಿ ಅವರ ಸೊಸೆ.
ಪುತ್ತೂರು : ಪುತ್ತೂರಿನ ವಿವೇಕಾನಂದ ಕಾನೂನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ. ಅವರಿಗೆ ಪಿ.ಹೆಚ್.ಡಿ. ಪದವಿ
Savistara
Bureau Report
[t4b-ticker]

















































