ಕೆಆ‌ರ್ ಐಡಿಎಲ್‌ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರಿ? ನಿಮಗೆ ಬೇರೆ ಸಂಸ್ಥೆಗಳಿಲ್ಲವೇ? 4-5 ಬಾರಿ ಗೆದ್ದಾಗ ಪ್ರಬುದ್ಧತೆ ಬರುತ್ತದೆ, ಶಾಸಕ ಅಶೋಕೆ ರೈ ಬಗ್ಗೆ ಸಚಿವ ಖಾದ‌ರ್ ಟಾಂಗ್

Picture of Savistara

Savistara

Bureau Report

ಮಂಗಳೂರು, ಸೆ.2: ಕೆಆರ್ ಐಡಿಎಲ್ ಅಧಿಕಾರಿಗಳು ಹತ್ತುಶೇಕಡಾ ಕಮಿಷನ್‌ ಪಡೆಯುತ್ತಿರುವ ಬಗ್ಗೆ ಆರೋಪ ಮಾಡಿದ್ದ ಶಾಸಕ ಅಶೋಕ್ ರೈ ಬಗ್ಗೆಯೇ ಸಚಿವ ಯು.ಟಿ ಖಾದ‌ರ್ ಪ್ರಶ್ನೆ ಮಾಡಿದ್ದಾರೆ. ಶಾಸಕರು ಯಾಕೆ ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರಿ? ಯಾಕೆ ಶಾಸಕರುಗಳು ಅವರಿಗೆ ಗುತ್ತಿಗೆ ಕೊಡೋದು? ಬೇರೆಲ್ಲ ಗುತ್ತಿಗೆ ಸಂಸ್ಥೆ ಇರುವಾಗ ಅಲ್ಲಿಗೆ ಯಾಕೆ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಖಾದರ್, ಶಾಸಕರು ಈ ಸಂಸ್ಥೆಗೆ ಯಾಕೆ ಟೆಂಡ‌ರ್ ಕೊಡಬೇಕು. ಸ್ವತಃ ಪಿಡಬ್ಲ್ಯುಡಿ ಇಲಾಖೆಗೆ ಟೆಂಡ‌ರ್ ಕೊಡೋದು. ಕೆಆರ್ ಐ ಡಿಎಲ್ ನಲ್ಲಿ ಸಿಬ್ಬಂದಿ ಕೊರತೆ ಇದೆ. ಬೇರೆ ಬೇರೆ ಅಧಿಕೃತ ಸಂಸ್ಥೆ ಇರುವಾಗ ಈ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡಬೇಕು ಎಂದು ಪ್ರಶ್ನಿಸಿದರು. ನಾಲ್ಕು ಐದು ಬಾರಿ ಗೆದ್ದಾಗ ಮಾತ್ರ ಪ್ರಭುದ್ಧತೆ ಬರುತ್ತದೆ. ಯಾರೋ ಬಂದು ದೂರು ನೀಡಿದ ಕೂಡಲೇ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇವರಿಗೆ ಮಾಹಿತಿ ನೀಡಿದವರೇ ಸರಿ ಇಲ್ಲ ಅನ್ನೋದು ತನಿಖೆಯಲ್ಲಿ ಗೊತ್ತಾಗುತ್ತೆ. ಆದರೂ ಅಶೋಕ್ ಕುಮಾರ್ ರೈ ಭ್ರಷ್ಟಾಚಾರ ಆರೋಪದ ಬಗ್ಗೆ ತುರ್ತಾಗಿ ಸ್ಪಂದಿಸಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.ಎಸ್‌ಐಆ‌ರ್ ಎರಡನೇ ಹಂತದ ವೆರಿಫಿಕೇಶನ್ ವಿಚಾರದ ಪ್ರಶ್ನೆಗೆ, ಅಧಿಕಾರಿಗಳು ಮತದಾರರನ್ನು ಮತಪಟ್ಟಿಗೆ ಸೇರಿಸಲು ಒತ್ತನ್ನು ಕೊಡಬೇಕು. ವಿದೇಶದಲ್ಲಿ ಇರುವವರನ್ನು ಮತದಾನ ವಂಚಿತರನ್ನಾಗಿ ಮಾಡಬಾರದು. ಇವರಿಗಾಗಿ ಪ್ರತ್ಯೇಕ ಏಕರೂಪದ ಸಿಸ್ಟಮ್ ಜಾರಿಗೆ ತರಬೇಕು. ಅಧಿಕಾರಿಗಳು ಉತ್ತಮ ಕೆಲಸವನ್ನು ನನ್ನ ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದು ಖಾದರ್ ಹೇಳಿದರು.

ಮಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯಿಂದ ದಾಳಿ ಮುಂದುವರಿಸಲಾಗಿದೆ. ಬೇಕರಿ ಅಂಗಡಿ ಗುರಿಯಾಗಿಸಿ ದಾಳಿ ನಡೆಸಿದ್ದು ಎರಡು ಬೇಕರಿ ಘಟಕಗಳನ್ನು ಬಂದ್ ಮಾಡಿ ಇತರ ಘಟಕಗಳಿಗೆ ನೋಟಿಸ್ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಮೈಸೂರು ನಗರದಲ್ಲಿ ತಪಾಸಣೆ ತೀವ್ರ ಮಾಡುತ್ತೇವೆ. ಬೇಕರಿ, ಅಂಗಡಿ ಸೇರಿ ಆಹಾರ ತಯಾರಿ ಕೇಂದ್ರಗಳನ್ನು ಕ್ಲೀನ್ ಮಾಡಿ ಸ್ವಚ್ಛತೆ ಇಟ್ಟುಕೊಳ್ಳಬೇಕು. ಯಾರೂ ಇನ್ಸುಲೆನ್ಸ್ ಮಾಡಿದ್ರೂ ಕಾಪಾಡೋಕೆ ಆಗಲ್ಲ. ಕ್ಯೂ ಆರ್ ಕೋಡ್ ಮೂಲಕ ದೂರು ಬಂದ್ರೆ ಅಧಿಕಾರಿಗಳು ತಪಾಸಣೆ ಮಾಡುತ್ತಾರೆ.ಪಿಜಿ ನಡೆಸುವವರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಗ್ರಾಹಕರಿಗೆ ಮೋಸ ಆಗುವಂತೆ ವರ್ತನೆ ಮಾಡಬಾರದು. ಮೊದಲ ಬಾರಿಗೆ ದಂಡವನ್ನು ವಿಧಿಸುತ್ತಿದ್ದು ಮುಂದಿನ ಬಾರಿ ಯಾವುದೇ ಕ್ಷಮೆ ಇರೋದಿಲ್ಲ. ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!