ಸುಳ್ಯ :ಪಂಜ ಗ್ರಾಮ ಪಂಚಾಯತ್ ಗ್ರಾಮ ಸಭೆ |’ ಸಾರ್ವಜನಿಕರ ಆಕ್ರೋಶದ ಬಿರುಗಾಳಿ!’: ಆಸ್ಪತ್ರೆಗೆ ವೈದ್ಯರಿಲ್ಲ, ನಿರಂತರ ವಿದ್ಯುತ್ ಕಡಿತಕ್ಕೆ ಗ್ರಾಮಸ್ಥರು ಗರಂ!

Picture of Savistara

Savistara

Bureau Report

ಪಂಜ ಗ್ರಾಮ ಪಂಚಾಯತ್ ನ2026-27ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಸೆ.1 ರಂದು ಪಂಜ ಗ್ರಾ.ಪಂ. ಕಛೇರಿ ಸಭಾಂಗಣದಲ್ಲಿ ನಡೆಯಿತು.ನೋಡೆಲ್‌ ಅಧಿಕಾರಿಯಾಗಿಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿ ದೇವರಾಜ್‌ ಮುದ್ಲಾಜೆ ಪಾಲ್ಗೊಂಡಿದ್ದರು.

ಅನಿಯಮಿತ ವಿದ್ಯುತ್ ಕಡಿತ, ವಿದ್ಯುತ್ ಲೈನ್ ಕೆಳಗಡೆ ಗಿಡ ನೆಡ ಬಾರದು, ಸರಕಾರಿ ಆಸ್ಪತ್ರೆಗೆ ವೈದ್ಯರ ನೇಮಿಸಿ, ರಸ್ತೆ ದುರಸ್ತಿ, ಬೀದಿ ನಾಯಿ ಹಾವಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೌಚಾಲಯ ಸಮಸ್ಯೆಯಿಂದ ಪರಿಸರದವರಿಗೆ ತೊಂದರೆ, ಕಸ್ತೂರಿ ರಂಗನ್ ಜಾರಿಗೆ ವಿರೋಧ ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆಯಿತು.

ಸುವರ್ಣಿನಿ ಎನ್ ಎಸ್,ಚಂದ್ರಶೇಖರ್ ಶಾಸ್ತ್ರಿ, ದಾಮೋದರ ನೇರಳ, ಲಿಗೋಧರ ಆಚಾರ್ಯ, ಲಕ್ಷ್ಮಣ ಗೌಡ ಬೊಳ್ಳಾಜೆ, ರವಿ ಬಿ ನಾಗತೀರ್ಥ, ಪುರುಷೋತ್ತಮ ಮುಡೂರು, ಕುಸುಮಾಧರ ಕೆರೆಯಡ್ಕ, ಶಿವರಾಮಯ್ಯ ಕರ್ಮಾಜೆ, ನಾರಾಯಣ ಕೃಷ್ಣ ನಗರ, ಜಿನ್ನಪ್ಪ ಕೋಟಿಯಡ್ಕ ಮೊದಲಾದವರು ವಿವಿಧ ಬೇಡಿಕೆ,ಗ್ರಾಮಾಭಿವೃದ್ಧಿ ಕುರಿತು ಮಾತನಾಡಿದರು.ಗ್ರಾಮ ಪಂಚಾಯತ್ ಆಡಳಿತಾಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀಮತಿ ಚೈತ್ರ ಎಸ್.ಆರ್. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕೀರ್ತಿ ಪ್ರಸಾದ್ ಸಿ.ಎಂ. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು, ಇಲಾಖಾ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೃಷ್ಣಪ್ಪ ಬಿ.ಟಿ., ಸ್ವಾಗತಿಸಿದರು. ಸಿಬ್ಬಂದಿ ಗೀತಾ ಚಿದ್ದಲ್ಲು ವರದಿ ವಾಚಿಸಿದರು. ಪಿ ಡಿ ಒ ಕೀರ್ತಿ ಪ್ರಸಾದ್ ಸಿ ಎಂ ವಂದಿಸಿದರು.

[t4b-ticker]
error: Content is protected !!