ಭಾರತದ ಗುರಿ ‘ವಿಶ್ವಗುರು’ ಆಗುವುದು, ‘ಮಹಾಶಕ್ತಿ’ ಅಲ್ಲ: ಮೋಹನ್ ಭಾಗವತ್

Picture of Savistara

Savistara

Bureau Report

ವಾಷಿಂಗ್ಟನ್: ಭಾರತದ ಸಂಸ್ಕೃತಿ, ಪದ್ಧತಿಯು ಯಾವುದೇತಾರತಮ್ಯವಿಲ್ಲದೆ ಎಲ್ಲರಿಗೂ ಸಹಾಯ ಮಾಡುವ ಗುಣಗಳಿಂದ ‘ವಿಶ್ವ ಗುರು’ ಆಗಿ ಗುರುತಿಸಿಕೊಂಡಿದೆ ಹೊರತು, ಪ್ರಪಂಚದ ಮೇಲೆ ತನ್ನ ಅಧಿಕಾರ ತೋರಿಸುವ ‘ಮಹಾಶಕ್ತಿ’ ಆಗಿ ಗುರುತಿಸಿಕೊಂಡಿಲ್ಲ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.

ಟೊರೆಂಟೊದಲ್ಲಿ ಕೆನಾಡದ ಹಿಂದೂ ಸಂಘನೆಗಳು ಆಯೋಜಿಸಿದ ‘ಹಿಂದೂ ವಿಶ್ವ ಬಂಧು – ಜಗತ್ತನ್ನು ಸ್ನೇಹದಿಂದ ಅಪ್ಪಿಕೊಳ್ಳಿ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ನಮ್ಮ ಸಂಸ್ಕೃತಿಯು ಯಾವುದೇ ಒಂದು ದೇಶ, ಮತ ಅಥವಾ ವರ್ಗಕ್ಕೆ ಸೀಮಿತವಾಗಿಲ್ಲ. ಅದು ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಭಾವಿಸುತ್ತದೆ’ ಎಂದಿದ್ದಾರೆ.ಪ್ರಪಂಚದ ಯಾವುದೇ ಮೂಲೆಯಿಂದಲೂ ಭಾರತದಿಂದ ಸಹಾಯ ಕೇಳಿದಾಗಲೆಲ್ಲಾ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದೆ. ಸಹಾಯ ಮಾಡುವ ಗುಣವು ಭಾರತದ ಡಿಎನ್‌ಎನಲ್ಲಿಯೇ ಇದೆ’ ಎಂದು ಹೇಳಿದ್ದಾರೆ.ಸಂತ ಕಬೀರ ದಾಸರ ಸಾಲುಗಳನ್ನು ಉಲ್ಲೇಖಿಸಿದ ಅವರು, ‘ಒಬ್ಬ ವ್ಯಕ್ತಿಯು ಎಷ್ಟೇ ಗ್ರಂಥಗಳನ್ನು ಓದಿ ಪಂಡಿತನಾಗಿದ್ದರೂ ಅವನಿಗೆ ‘ಪ್ರೀತಿ’ ಬಗ್ಗೆ ಅರಿವಿಲ್ಲದಿದ್ದರೆ ಆ ಜ್ಞಾನಕ್ಕೆ ಯಾವುದೇ ಬೆಲೆ ಇರುವುದಿಲ್ಲ’ ಎಂದಿದ್ದಾರೆ.

ನಾವೆಲ್ಲರೂ ಒಂದೆ. ಹಾಗೆಯೇ ಬದುಕಬೇಕು. ವೈವಿಧ್ಯತೆಯಲ್ಲಿ ಏಕತೆ ಎಂಬ ಧೇಯವನ್ನು ಮನಸಾರೆ ಒಪ್ಪಿಕೊಳ್ಳಬೇಕು. ಜ್ಞಾನವುಳ್ಳವರು ವಸುಧೈವ ಕುಟುಂಬದ ಧೇಯವನ್ನು ಸ್ವೀಕರಿಸುತ್ತಾರೆ’ ಎಂದು ಹೇಳಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!