ಬೆಂಗಳೂರು ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ತನಿಖೆ ಚುರುಕುಗೊಂಡಿದ್ದು, ಬೆಂಗಳೂರು, ತುಮಕೂರು ಮತ್ತು ಆಂಧ್ರಪ್ರದೇಶದ ರೆಸಾರ್ಟ್‌ಗಳಲ್ಲಿ ಪರೀಕ್ಷೆ ಬರೆಸಿರುವ ಸ್ಫೋಟಕ ಸಂಗತಿ ಬಯಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ (KPSC) ಪ್ರಭಾವಿ ವ್ಯಕ್ತಿಯೊಬ್ಬರಿಗೆ ಸೇರಿದ ರಾಜಾಜಿನಗರದ ಖಾಸಗಿ ಕಚೇರಿಯಲ್ಲೇ ನೇಮಕಾತಿ ಅಕ್ರಮದ ಡೀಲ್ ನಡೆದಿತ್ತು. ವಂಚಕರು ಮುನ್ನವೇ ಅಭ್ಯರ್ಥಿಗಳಿಂದ ತಲಾ 40 ಲಕ್ಷದಿಂದ 80 ಲಕ್ಷ ರೂ.ವರೆಗೆ ಹಣ ಪಡೆದು ವ್ಯವಹಾರ ಕುದುರಿಸಲಾಗಿತ್ತು.
ಹಣ ಕೊಟ್ಟ ಅಭ್ಯರ್ಥಿಗಳಿಗೆ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿ ಯಾವುದೇ ಉತ್ತರ ಬರೆಯದ OMR ಶೀಟ್‌ಗಳನ್ನು ಖಾಲಿ ಕೊಟ್ಟು ಬಂದಿದ್ದ ವಿಚಾರ ಬೆಳಕಿಗೆ ಬಂದಿದೆ.ಪರೀಕ್ಷೆಯ ನಂತರ ಆ ಖಾಲಿ OMR ಶೀಟ್‌ಗಳನ್ನು ಪ್ರತ್ಯೇಕಿಸಿ ಬೆಂಗಳೂರಿನ ರಾಜರಾಜೇಶ್ವರಿ ನಗರ, ತುಮಕೂರು ಜಿಲ್ಲೆಯ ದೇವರಾಯನದುರ್ಗ ಮತ್ತು ಆಂಧ್ರದ ಅನಂತಪುರದ ರೆಸಾರ್ಟ್‌ಗೆ ತರಿಸಿ ಅಭ್ಯರ್ಥಿಗಳಿಂದ ಉತ್ತರ ಬರೆಸಲಾಗಿತ್ತು. ಮತ್ತೆ ಕೆಲ ಅಭ್ಯರ್ಥಿಗಳಿಗೆ ನಾಲ್ಕು ದಿನ ಮುಂಚಿತವಾಗಿ ಶೇ.60ರಷ್ಟು ಪ್ರಶ್ನೆಗಳನ್ನು ಕೊಟ್ಟು ಪರೀಕ್ಷೆಗೆ ಅನುಕೂಲಿಸಿ, ಪರೀಕ್ಷೆ ಬರೆಯುವುದು ತನಿಖೆಯಲ್ಲಿ ಗೊತ್ತಾಗಿದೆ.
ಬಸವರಾಜ್ ಕನ್ನಾಳಿ, ಜ್ಞಾನೇಂದ್ರಕುಮಾರ್ – ಇವರೇ ಕಿಂಗ್‌ಪಿನ್?
ಸಿಐಡಿ ತನಿಖೆಯಲ್ಲಿ ವಿಚಾರಣೆ ವೇಳೆ ತಮ್ಮ ವಿರುದ್ಧದ ಆರೋಪಗಳ ಸಂಬಂಧ ಸ್ಪಷ್ಟನೆ ನೀಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಗಂಗ್ವಾರ್, “ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದಲ್ಲಿ ನನ್ನ ನೇರ ತಪ್ಪೇನೂ ಇಲ್ಲ. ಎಲ್ಲಾ ಅಕ್ರಮಗಳಿಗೂ ಮಧ್ಯವರ್ತಿ ಬಸವರಾಜ್ ಕನ್ನಾಳಿಯೇ ಮುಖ್ಯ ರೂವಾರಿ. ನಾನು ಯಾವುದೇ ಅಭ್ಯರ್ಥಿಗಳ ಜತೆ ನೇರವಾಗಿ ಮಾತನಾಡಿಲ್ಲ ಅಥವಾ ಮುಖಾಮುಖಿ ಭೇಟಿಗೆ ಅವಕಾಶ ನೀಡಿಲ್ಲ. ಅಭ್ಯರ್ಥಿಗಳೊಂದಿಗೆ ಹಣಕಾಸಿನ ವ್ಯವಹಾರ ಹಾಗೂ ಮಾತುಕತೆ ನಡೆಸಿದ್ದೆಲ್ಲವೂ ಬಸವರಾಜ್ ಕನ್ನಾಳಿಯೇ. ಆತ ಹೇಳಿದಂತೆ ನಾನು ಕೆಲಸ ಮಾಡಿದ್ದೇನೆ ಅಷ್ಟೇ” ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಸಂಪೂರ್ಣವಾಗಿ ನಿಬಂಧ ಬೆಂಗಳೂರಿನ ಜಯಮಹಲ್ ನಲ್ಲಿರುವ ಮನೆ ಹಾಗೂ ನಗರದ ವಿವಿಧ ಹೋಟೆಲ್‌ಗಳಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದು ಎಂದು ಜ್ಞಾನೇಂದ್ರಕುಮಾರ್ ಸಿಐಡಿ ಅಧಿಕಾರಿಗಳ ಎದುರು ಹೇಳಿದ್ದಾರೆ.
ಆಸ್ತಿ, ಆಭರಣ ಮಾರಿ ಹಣ ನೀಡಿದ್ದರು!
ಬೇಕಾದಷ್ಟು ಜನ ಹಣ ನೀಡಿದ್ದರು, ಅಭ್ಯರ್ಥಿಗಳು ತಮ್ಮ ಜಮೀನು ಮಾರಿ, ಮನೆ ಮತ್ತೆ ಆಭರಣ ಅಡವಿಟ್ಟು ಹಣ ಹೊಂದಿಸಿ ಮಧ್ಯವರ್ತಿಗಳಿಗೆ ಕೊಟ್ಟಿದ್ದಾರೆ. ಅಂತಿಮವಾಗಿ ಬೇಕಾದಷ್ಟು ಹಣ ಕಳೆದುಕೊಂಡು ಕೆಲವರು ನೊಂದಿರುವ ಬಗ್ಗೆ ವರದಿಯಾಗಿದೆ

















































