ಸುಳ್ಯ: ಜಯನಗರದ ಮಿಲಿಟರಿ ಗ್ರೌಂಡ್ ನಿವಾಸಿಗಳ ಅಡಿಸ್ಥಳ ದಾಖಲುಗೊಳಿಸುವ ವಿಚಾರವಾಗಿ ಕಳೆದ 12 ವರ್ಷಗಳಿಂದ ನಿವಾಸಿಗಳು ಹೋರಾಟ ನಡೆಸುತ್ತಿದ್ದು, ಈ ಸಂಬಂಧ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸ್ಥಳ ವೀಕ್ಷಣೆ ನಡೆಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕಡತ ಪರಿಶೀಲನೆ ಹಂತದಲ್ಲಿರುವ ಈ ಪ್ರಕರಣದ ಬಗ್ಗೆ ಸಂಸದರು, ಪುತ್ತೂರು ಸಹಾಯಕ ಆಯುಕ್ತರು, ಸುಳ್ಯ ತಹಶೀಲ್ದಾರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತು ಇಲಾಖಾಧಿಕಾರಿಗಳ ಜೊತೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಂಸದರು, ತಕ್ಷಣ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕಡತ ಪರಿಶೀಲನೆ ನಡೆಸಿ, ಅಡಿಸ್ಥಳ ಮಂಜೂರು ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದವರು:
ಪುತ್ತೂರು ಸಹಾಯಕ ಆಯುಕ್ತೆ ಶ್ರೀಮತಿ ಸ್ಟೆಲ್ಲಾ ವರ್ಗೀಸ್, ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ, ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್, ತಾಲೂಕು ಭೂ ಮಾಪಕ ಜಗದೀಶ, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್, ಉಪ ತಹಶೀಲ್ದಾರ್ ಚಂದ್ರಶೇಖರ್, ನಗರ ಪಂಚಾಯತ್ ಇಂಜಿನಿಯರ್ ವೆಂಕಟೇಶ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್. ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ,ನಗರ ಬಿಜೆಪಿ ಅಧ್ಯಕ್ಷ ಕುಸುಮಾಧರ ಎ.ಟಿ,ಕಾರ್ಯದರ್ಶಿ ನಾರಾಯಣ ಶಾಂತಿನಗರಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪುಷ್ಪಾ ಮೇದಪ್ಪ,ಮಂಡಲ ಉಪಾಧ್ಯಕ್ಷ ಶಿವಾನಂದ ಕುಕ್ಕುo ಬಳ, ಜಯನಗರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ಕೆ.ಆರ್, ಜಯನಗರ ಹಕ್ಕೊತ್ತಾಯ ಸಮಿತಿ ಸಂಚಾಲಕ ಹಾಗೂ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಿ. ಜಗನ್ನಾಥ್ ಜಯನಗರ, ರಾಧಾಕೃಷ್ಣ ನಾಯಕ್ ಕೆ.ವಿ. ಜಯನಗರ ಹಾಗೂ ಊರಿನ ಪ್ರಮುಖರು ಉಪಸ್ತಿತರಿದ್ದರು

















































