‘ವಿದೇಶದಲ್ಲಿ ಮದುವೆ, ಚಿನ್ನ ಖರೀದಿ ಯಾಕೆ ಬೇಡ?’: ವಿಡಿಯೋ ಮೂಲಕ ಕಾರಣ ಬಿಚ್ಚಿಟ್ಟ ಪ್ರಧಾನಿ ಮೋದಿ!

Picture of Savistara

Savistara

Bureau Report

​ಹೊಸದಿಲ್ಲಿ: ದೇಶದ ಆರ್ಥಿಕ ಸ್ವಾವಲಂಬನೆ ಹಾಗೂ ಪ್ರಗತಿಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಅನಗತ್ಯವಾಗಿ ವಿದೇಶಕ್ಕೆ ಪ್ರವಾಸ ತೆರಳುವುದು, ವಿದೇಶಗಳಲ್ಲಿ ಅದ್ಧೂರಿ ವಿವಾಹವಾಗುವುದು ಹಾಗೂ ಹೆಚ್ಚು ಚಿನ್ನ ಖರೀದಿಸುವುದನ್ನು ತಡೆದು ದೇಶದ ಆರ್ಥಿಕತೆಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.​

ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳಿರುವ ವೇಳೆಯಲ್ಲಿ ಹಂಚಿಕೊಂಡ ಸೆಲ್ಫಿ ವಿಡಿಯೋದಲ್ಲಿ, ಭಾರತವು ಶೇ. 7.8ರಷ್ಟು ಬಲಿಷ್ಠ ಆರ್ಥಿಕ ಬೆಳವಣಿಗೆ ಸಾಧಿಸಿರುವುದನ್ನು ಉಲ್ಲೇಖಿಸಿದರು. ವಿದೇಶಿ ವಿವಾಹ ಹಾಗೂ ಚಿನ್ನದ ಮೇಲಿನ ವೆಚ್ಚವನ್ನು ಕಡಿಮೆ ಮಾಡುವುದರಿಂದ ವಿದೇಶಿ ವಿನಿಮಯ ದರ ಉಳಿತಾಯವಾಗಿ, ಭಾರತೀಯ ಉದ್ಯಮಗಳಿಗೆ ನೇರ ಲಾಭ ಸಿಗಲಿದೆ ಹಾಗೂ ಸ್ವದೇಶಿ ಉತ್ಪನ್ನಗಳಿಗೆ ಶಕ್ತಿ ಸಿಗಲಿದೆ ಎಂಬುದು ಈ ಮನವಿಯ ಹಿಂದಿನ ಪ್ರಮುಖ ಕಾರಣವಾಗಿದೆ.

​”ನಾವು ಸ್ವದೇಶಿ ಮತ್ತು ಸ್ವಾವಲಂಬನೆಗೆ ಎಷ್ಟು ಹೆಚ್ಚಿನ ಒತ್ತು ನೀಡುತ್ತೇವೆಯೋ, ಸ್ವಾತಂತ್ರ್ಯದ 100 ವರ್ಷಗಳು (2047) ಪೂರ್ಣಗೊಳ್ಳುವ ವೇಳೆಗೆ ನಮ್ಮ ಯುವ ಪೀಳಿಗೆಗೆ ‘ವಿಕಸಿತ ಭಾರತ’ವನ್ನು ನೀಡಲು ಸಾಧ್ಯವಾಗುತ್ತದೆ” ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ದೇಶದಲ್ಲಿ ಸುಳ್ಳುಗಳನ್ನು ಹರಡುತ್ತಿರುವ ವಿಮರ್ಶಕರ ನಡೆಗೆ ಪ್ರತ್ಯುತ್ತರ ನೀಡಿದ ಅವರು, ಸವಾಲುಗಳ ನಡುವೆಯೂ ಭಾರತ ಆರ್ಥಿಕವಾಗಿ ವೇಗವಾಗಿ ಮುನ್ನುಗ್ಗುತ್ತಿದೆ ಎಂದಿದ್ದಾರೆ.

[t4b-ticker]
error: Content is protected !!