ಸಿಎಂ ವಿಜಯ್ ಅಮೆರಿಕದ ಅಧ್ಯಕ್ಷರಾದರೂ ಆಗಬಹುದು: ಪಳನಿಸ್ವಾಮಿ ಲೇವಡಿ

Picture of Savistara

Savistara

Bureau Report

ಕೊಯಮತ್ತೂರು: ತಮಿಳುನಾಡಿನ ಆಡಳಿತಾರೂಢ ಟಿವಿಕೆ ಪಕ್ಷದ ಸಾರ್ವಜನಿಕ ಪ್ರಚಾರ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಚಾರ್ಟಡ್್ರ ವಿಮಾನ ಪ್ರಯಾಣದ ಕುರಿತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವ್ಯಂಗ್ಯವಾಡಿದೆ.

ಟಿವಿಕೆ ಬೆಂಬಲಿಗರು ಸಿಎಂ ವಿಜಯ್‌ ಅವರನ್ನು ಭವಿಷ್ಯದ ಪ್ರಧಾನಿ ಎಂದು ಬಿಂಬಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ವಿಜಯ್ ಅವರು ಮುಂದೊಂದು ದಿನ ಅಮೆರಿಕದ ಅಧ್ಯಕ್ಷರಾದರೂ ಆಗಬಹುದು. ಅದರಲ್ಲಿ ತಪ್ಪೇನೂ ಇಲ್ಲ. ಅದು ಅವರ ಇಷ್ಟ’ ಎಂದು ಕಾಲೆಳೆದಿದ್ದಾರೆ.ಆದಾಗ್ಯೂ, ಸಾಮಾಜಿಕ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರದ ಪ್ರಚಾರದ ಶೈಲಿಯನ್ನು ದೂರಿದ ಪಳನಿಸ್ವಾಮಿ, ‘ಟಿವಿಕೆ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ‘ರೀಲ್ಸ್’ ಹಂಚಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಇದು ಹೆಚ್ಚು ದಿನ ನಡೆಯುವುದಿಲ್ಲ’ ಎಂದಿದ್ದಾರೆ.ವಿಜಯ್‌ ಅವರನ್ನು ‘ದುಬಾರಿ ಮುಖ್ಯಮಂತ್ರಿ’ ಎಂದು ಬಣ್ಣಿಸಿದ ಅವರು, ‘ಪ್ರಸ್ತುತ ಆಡಳಿತದ ವೆಚ್ಚವನ್ನು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಡಳಿತಕ್ಕೆ ಹೋಲಿಸಿ ವ್ಯತ್ಯಾಸವನ್ನು ಬೆಟ್ಟು ಮಾಡಿದ್ದಾರೆ.

ಅಮ್ಮ (ಜಯಲಲಿತಾ) ಅವರ ಆಡಳಿತಾವಧಿಯಲ್ಲಿ ವೆಚ್ಚ ಕಡಿಮೆ ಮಾಡಲು ವಿಡಿಯೊ ಕಾನ್ಸರೆನ್ಸಿಂಗ್ ಮೂಲಕ ಯೋಜನೆಗಳನ್ನು ಉದ್ಘಾಟಿಸಲಾಗುತ್ತಿತ್ತು. ಆದರೆ, ವಿಜಯ್ ಅವರು ಚಾರ್ಟಡ್್ರ ವಿಮಾನದಲ್ಲಿ ಓಡಾಟ ನಡೆಸುವ ಮೂಲಕ ತಾವೊಬ್ಬ ಬಡ ರೈತ ಎಂದು ಬಿಂಬಿಸಿಕೊಳ್ಳುತ್ತಿರುವುದು ವಿಪರ್ಯಾಸ’ ಎಂದು ಗುಡುಗಿದ್ದಾರೆ.ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕೊಯಮತ್ತೂರಿನಲ್ಲೇ ಒಂದೇ ತಿಂಗಳಲ್ಲಿ ಒಂಬತ್ತು ಕೊಲೆ ಪ್ರಕರಣಗಳು ವರದಿಯಾಗಿವೆ. 110 ದಿನಗಳಲ್ಲೇ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಎಲ್ಲಿ ನೋಡಿದರೂ ಕೊಲೆ, ದರೋಡೆ ಹಾಗೂ ಸಂಘರ್ಷಗಳು ಹೆಚ್ಚುತ್ತಿವೆ ಎಂದು ಕಿಡಿಕಾರಿದ್ದಾರೆ.ಆರ್ಥಿಕ ಬೆಂಬಲವಿಲ್ಲದೆ ವಿಜಯ್ ಅವರು 110ರ ನಿಯಮದಡಿಯಲ್ಲಿ ಬೇಜವಾಬ್ದಾರಿಯಿಂದ ಯೋಜನೆಗಳನ್ನು ಘೋಷಿಸುತ್ತಿದ್ದಾರೆ ಎಂದು ಪಳನಿಸ್ವಾಮಿ ಆರೋಪಿಸಿದ್ದಾರೆ.ಅಕ್ಕಿ, ಸಕ್ಕರೆ ಮತ್ತು ಖಾದ್ಯ ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳಲ್ಲಿನ ತೀವ್ರ ಏರಿಕೆ ಬಗ್ಗೆ ಧ್ವನಿಗೂಡಿಸಿದ ಅವರು, ಹಣದುಬ್ಬರ ನಿಯಂತ್ರಿಸಲು ಸರ್ಕಾರ ಯಾವುದೇ ದೃಢವಾದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!