ಕುಕ್ಕೆ ಸುಬ್ರಹ್ಮಣ್ಯದಲ್ಲಿಂದು ನಾಗರಪಂಚಮಿ ಸಂಭ್ರಮ |ವಿಶೇಷ ನೈವೇದ್ಯ ಸಮರ್ಪಣೆ, ಪೂಜೆ |ಕೃಷ್ಣಾರ್ಜುನ ಯಕ್ಷಗಾನ ಬಯಲಾಟ

Picture of Savistara

Savistara

Bureau Report

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.17ರಂದು ನಾಗರ ಪಂಚಮಿ । ನಿಮಿತ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾಪನಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನಡೆಯಲಿದೆ.

ಮಧ್ಯಾಹ್ನ ಮಹಾಪೂಜೆಯ ನಂತರ ನಾಗಪ್ರತಿಷ್ಠಾಪನಾ ಮಂಟಪದಲ್ಲಿನ ದೇವರಿಗೆ ವಿಶೇಷ ನೈವೇದ್ಯ ಸಮರ್ಪಣೆ ಹಾಗೂ ಪೂಜೆ ನೆರವೇರಲಿದೆ. ಪ್ರಾತಃಕಾಲ ವಿಶೇಷ ಪಂಚಾಮೃತ ಮಹಾಭಿಷೇಕ ಸುಬ್ರಹ್ಮಣ್ಯ ದೇವರಿಗೆ ನಡೆಯಲಿದೆ. ಪ್ರತಿದಿನ ನಡೆಯುವ ಹರಕೆ ಸೇವೆಗಳು ಎಂದಿನಂತೆ ನಡೆಯಲಿದೆ.

ತಾಳಮದ್ದಳೆ ಸೇವೆ: ಶ್ರೀ ದೇಗುಲದಿಂದ ರಥಬೀದಿನೂತನ ಸಭಾಂಗಣದಲ್ಲಿ ಸೋಮವಾರ ಕಲಾವಿದರ ಕುಕ್ಕೆ ಸುಬ್ರಹ್ಮಣ್ಯ ದೇವರು ಕೂಡುವಿಕೆಯಲ್ಲಿ ಕೃಷ್ಣಾರ್ಜುನ ಯಕ್ಷಗಾನ ಬಯಲಾಟ ನೆರವೇರಲಿದೆ. ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗುವ ಯಕ್ಷಗಾನಕ್ಕೆ ಡಾ.ಸತ್ಯನಾರಾಯಣ ಪುಣಿತ್ತಾಯ, ಶ್ರೇಯಾ ರೋಹಿತ್, ನೆಕ್ಕರೆಮೂಲೆ ಗಣೇಶ್ ಭಟ್, ರೋಹಿತ್ ಉಚ್ಚಿಲ, ಮುರಾರಿ ಭಟ್ ಪಂಜಿಗದ್ದೆ ಹಿಮ್ಮೇಳ ಸಹಕಾರ ನೀಡಲಿದ್ದಾರೆ. ರಾಧಾಕೃಷ್ಣ ನಾವುಡ ಮಧೂರು, ಅಕ್ಷಯ್ ಕುಮಾರ್ ಮಾರ್ನಾಡು, ಲಕ್ಷ್ಮಣ ಕುಮಾರ್ ಮರಕಡ, ಮಿಜಾರು ತಿಮ್ಮಪ್ಪ, ಶಂಭಯ್ಯ ಕಂಜರ್ಪಣೆ, ಕಿರಣ್ ಕೊಂಚಾಡಿ, ಶಶಿಕಿರಣ್ ಕಾವು, ವಿಶ್ವಾಸ್ ಕಾವೂರು ಮುಮ್ಮೇಳದಲ್ಲಿ ಕಲಾವಿದರಾಗಿದ್ದಾರೆ. ಬೆಳಗ್ಗೆ ವಿಶೇಷ ಭಜನಾ ಸೇವೆಯೂ ನಡೆಯಲಿದೆ.

[t4b-ticker]
error: Content is protected !!