ನವದೆಹಲಿ: ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆಚುನಾವಣೆಗಳ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಸೋಮವಾರ ಪ್ರಕಟಿಸಿದ್ದಾರೆ.
ಹಿರಿಯ ಹಾಗೂ ಯುವ ನಾಯಕರನ್ನು ಹೊಂದಿರುವ ಈ ಹೊಸ ಪಟ್ಟಿಯಲ್ಲಿ ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ನೇಮಕ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಪಕ್ಷ ತಿಳಿಸಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನಾ) ಬಿ.ಎಲ್. ಸಂತೋಷ್ ಅವರು ಮುಂದುವರೆದಿದ್ದಾರೆ. ಕರ್ನಾಟಕದ ಪ್ರೊ. ಎಂ. ನಾಗರಾಜ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಯ ಜವಾಬ್ದಾರಿ ನೀಡಲಾಗಿದೆ.ಪಕ್ಷದ ಸಂಘಟನಾತ್ಮಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ. ಇನ್ನು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ.
ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದ್ದು, 13 ರಾಷ್ಟ್ರೀಯ ಉಪಾಧ್ಯಕ್ಷರ ಪೈಕಿ 6 ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಜೊತೆಗೆ ಒಬ್ಬರು ಪ್ರಧಾನ ಕಾರ್ಯದರ್ಶಿ ಹಾಗೂ ನಾಲ್ವರು ಕಾರ್ಯದರ್ಶಿ ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಮುಸ್ಲಿಂ ಸಮುದಾಯದ ನಾಯಕರಿಗೂ ಅವಕಾಶ ಕಲ್ಪಿಸಲಾಗಿದೆ.ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದ್ದು, ಕೇರಳ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳ ನಾಯಕರಿಗೆ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಹುದ್ದೆಗಳಲ್ಲಿ ಆದ್ಯತೆ ನೀಡಲಾಗಿದೆ.
ಎಎಪಿ ತೊರೆದಿದ್ದ ಸಂದೀಪ್ ಪಾಠಕ್ ಅವರಿಗೆ ರಾಷ್ಟ್ರೀಯ ಕಾರ್ಯದರ್ಶಿ ಜವಾಬ್ದಾರಿ ವಹಿಸಲಾಗಿದ್ದರೆ, ಸಂಬಿತ್ ಪಾತ್ರ ಅವರನ್ನು ಈಶಾನ್ಯ ರಾಜ್ಯಗಳ ಸಂಯೋಜಕರನ್ನಾಗಿ ನೇಮಿಸಲಾಗಿದೆ.
ರಾಷ್ಟ್ರೀಯ ಉಪಾಧ್ಯಕ್ಷರು: ವಸುಂಧರಾ ರಾಜೇ (ರಾಜಸ್ಥಾನ),ತೀರಥ್ ಸಿಂಗ್ ರಾವತ್ (ಉತ್ತರಾಖಂಡ), ರಾಮ್ ಮಾಧವ್ (ದೆಹಲಿ), ಬೈಜಯಂತ್ ಜಯ್ ಪಂಡಾ (ಒಡಿಶಾ), ಡಿ. ಪುರಂದೇಶ್ವರಿ (ಆಂಧ್ರಪ್ರದೇಶ), ರೇಖಾ ವರ್ಮಾ (ಉತ್ತರ ಪ್ರದೇಶ), ವರ್ಷಾಬೆನ್ ನರೇಂದ್ರಭಾಯಿ ದೋಶಿ (ಗುಜರಾತ್), ಡಾ. ಭಾರತಿ ಪ್ರವೀಣ್ ಪವಾರ್ (ಮಹಾರಾಷ್ಟ್ರ), ಸರ್ದಾರ್ ಮನಪ್ರೀತ್ ಸಿಂಗ್ ಬಾದಲ್ (ಪಂಜಾಬ್), ಲಾಲ್ ಸಿಂಗ್ ಆರ್ಯ (ಮಧ್ಯಪ್ರದೇಶ), ಪ್ರೊ. ಎಂ. ನಾಗರಾಜ (ಕರ್ನಾಟಕ), ಪ್ರೊ. ತಾರಿಖ್ ಮನ್ಸೂರ್ (ಉತ್ತರ ಪ್ರದೇಶ) ಹಾಗೂ ಡಾ. ಮಧುಚಂದ್ರಾ ಕರ್ (ಪಶ್ಚಿಮ ಬಂಗಾಳ) ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳು:
ವಿನೋದ್ ತಾವೆ, ಸುನಿಲ್ ಬನ್ಸಲ್, ಬಿಪ್ಲಬ್ ಕುಮಾರ್ ದೇವ್, ಸ್ಮೃತಿ ಇರಾನಿ, ಡಾ. ಸತೀಶ್ ಪೂನಿಯಾ, ಗಜೇಂದ್ರ ಪಟೇಲ್, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಕೆ.ಸುರೇಂದ್ರನ್, ಅನಿಲ್ ಆಂಟೋನಿ, ರೋಹನ್ ಗುಪ್ತಾ ಸೇರಿದಂತೆ 16 ಜನರಿಗೆ ಜವಾಬ್ದಾರಿ ನೀಡಲಾಗಿದೆ.
ಇತರ ಪ್ರಮುಖ ನೇಮಕಾತಿಗಳು…
ರಾಷ್ಟ್ರೀಯ ಖಜಾಂಚಿ: ಪಿಯೂಷ್ ಗೋಯಲ್ರಾಷ್ಟ್ರೀಯ ಸಹ ಖಜಾಂಚಿ: ರಾಜೇಶ್ ಮಂಗಲ್‌ಕೇಂದ್ರ ಕಚೇರಿ ಉಸ್ತುವಾರಿ: ತರುಣ್ ಚುಗ್ ಸಾಮಾಜಿಕ ಜಾಲತಾಣ ಸಂಚಾಲಕ: ದೀಪಕ್ ಮ್ಹಾಸ್ಕಿಮಾಧ್ಯಮ ಸಂಚಾಲಕ: ಅನಿಲ್ ಬಲೂನಿ
ವಿವಿಧ ಮೋರ್ಚಾಗಳ ಅಧ್ಯಕ್ಷರು…
ಯುವ ಮೋರ್ಚಾ: ಡಾ. ಹೇಮಂಗ್ ಜೋಶಿಮಹಿಳಾ ಮೋರ್ಚಾ: ರೂಪ್ ಕುಮಾರಿ ಚೌಧರಿಒಬಿಸಿ ಮೋರ್ಚಾ: ಅಮರ್‌ಪಾಲ್ ಮೌರ್ಯಕಿಸಾನ್ ಮೋರ್ಚಾ: ಬನ್ಸಿಲಾಲ್ ಗುರ್ಜರ್ಎಸ್‌ಸಿ ಮೋರ್ಚಾ: ಶಿವೇಶ್ ಕುಮಾರ್ ರಾಮ್ಎಸ್‌ಟಿ ಮೋರ್ಚಾ: ಡಾ. ಮನ್ನಾಲಾಲ್ ರಾವತ್ಅಲ್ಪಸಂಖ್ಯಾತ ಮೋರ್ಚಾ: ಕುನ್ವರ್ ಬಾಸಿತ್ ಅಲಿ













































