ವಿಡಿಯೊ ಹಂಚಿಕೊಂಡು 8 ವರ್ಷಗಳ ನಿರೂಪಣೆಗೆ ವಿದಾಯ ಹೇಳಿದ ಅನುಪಮಾ ಗೌಡ

Picture of Savistara

Savistara

Bureau Report

ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು ತಮ್ಮ 8 ವರ್ಷಗಳ ನಿರೂಪಣೆಯ ಪಯಣಕ್ಕೆ ವಿದಾಯ ಹೇಳಿದ್ದಾರೆ.

ಅನುಬಂಧ ಅವಾರ್ಡ್ಸ್, ಸೀರಿಯಲ್ ಸಂತೆ, ರಾಜ ರಾಣಿ, ಕ್ವಾಟೆ ಕಿಚನ್, ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಕನ್ನಡಿಗರ ನೆಚ್ಚಿನ ನಿರೂಪಕಿಯಲ್ಲಿ ಒಬ್ಬರಾಗಿದ್ದರು.’ಅಕ್ಕ’ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ಅನುಪಮಾ ಕಾಣಿಸಿಕೊಂಡಿದ್ದಾರೆ.ಈಗ ನಿರೂಪಣೆಗೆ ವಿದಾಯ ಹೇಳುತ್ತಿರುವ ಬಗ್ಗೆ ಅನುಪಮಾ ಆನಂದಕುಮಾ‌ರ್ ಎನ್ನುವ ಯುಟ್ಯೂಬ್ ಚಾನೆಲ್‌ನಲ್ಲಿ, ಭಾವುಕ ಮಾತುಗಳನ್ನಾಡಿ ತಮ್ಮಿಷ್ಟದ ವೃತ್ತಿಗೆ ವಿದಾಯ ಹೇಳಿದ್ದಾರೆ.

ವಿಡಿಯೊದಲ್ಲಿ ಹೇಳಿದ್ದೇನು?

‘ನನ್ನ ಪ್ರೀತಿಯ ಕನ್ನಡದ ಮನಸ್ಸುಗಳಿಗೆ ಅನುಪಮಾ ಮಾಡುವ ಪ್ರೀತಿಯ ನಮಸ್ಕಾರ. ಪ್ರತಿ ಕಾರ್ಯಕ್ರಮದಲ್ಲಿ, ಶನಿವಾರ ಮತ್ತು ಭಾನುವಾರ ನಾನು ನಿಮ್ಮನ್ನು ಹೀಗೆ ಸ್ವಾಗತಿಸುತ್ತಿದ್ದೆ. ಆದರೆ ಈಗ ನನ್ನ ಧ್ವನಿ ಹೃದಯದಿಂದ ಬರುತ್ತಿಲ್ಲ. ಏಕೆಂದರೆ ಈ ಮೈಕ್ ಅನ್ನು ಕೆಳಗಿಳಿಸುವ ಸಮಯ ಬಂದಿದೆ. ಇಷ್ಟು ವರ್ಷ ನನ್ನ ತಪ್ಪನ್ನು ತಿದ್ದಿದ ನಿಮಗಾಗಿ ಈ ವಿಡಿಯೊ ಮಾಡಿ 8 ವರ್ಷಗಳ ನಿರೂಪಣೆಯ ಪಯಣವನ್ನು ಮುಗಿಸುವ ಸಮಯ ಬಂದಿದೆ’ ಎಂದು ಭಾವುಕರಾಗಿದ್ದಾರೆ.’2018ರ ಜೂನ್ 22ರಂದು ಸೀರಿಯಲ್ ಸಂತೆಗೆ ಮೊದಲ ನಿರೂಪಣೆ ಮಾಡಿದ್ದೆ. 2026ರ ಮೇ 5ರಂದು ಕೊನೆಯ ಬಾರಿ ನಿರೂಪಣೆ ಮುಗಿಸಿ ವೇದಿಕೆಯಿಂದ ಇಳಿದಿದ್ದೆ. ಶುರುಮಾಡಿದ್ದ ಕಾರ್ಯಕ್ರಮವನ್ನೂ ಪೂರ್ತಿ ಮಾಡಿಲ್ಲ. ಪರಮ್ (ಪರಮೇಶ್ವರ್ ಗುಂಡ್ಕಲ್) ಅವರಿಂದ ನಾನು ನಿರೂಪಣೆ ಮಾಡಲು ಸಾಧ್ಯವಾಯಿತು. ಅವರಿಗೆ ಧನ್ಯವಾದ ಹೇಳುತ್ತೇನೆ. ಆರ್ಥಿಕವಾಗಿ ಸಬಲವಾಗಿರುವುದಕ್ಕೂ ನಿರೂಪಣೆಯೇ ಕಾರಣ’ ಎಂದಿದ್ದಾರೆ.’ಬೇರೆ ಯಾರೋ ಏನೋ ಕಥೆ ಹೇಳುವುದಕ್ಕಿಂದ ನಿರೂಪಣೆ ಬಿಡುವ ವಿಚಾರವನ್ನು ನಾನೇ ಹೇಳುತ್ತಿದ್ದೇನೆ. ನಾನು ನನ್ನೊಳಗಿನ ಕಲಾವಿದೆಗೆ ತೃಪ್ತಿಪಡಿಸಬೇಕು ಎನ್ನುವುದಕ್ಕೆ ಈ ನಿರ್ಧಾರ ಕಾರಣ. ನಿಮ್ಮಿಂದ ತುಂಬಾ ಕಲಿತ್ತಿದ್ದೇನೆ. ತುಂಬಾ ಪ್ರೀತಿ ಕೊಟ್ಟಿದೀರಿ. ಎಲ್ಲರಿಗೂ ಥ್ಯಾಂಕ್ಯೂ.. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತೆ. ಮುಂದೆ ಬೇರೆ ಬೇರೆ ದಾರಿಗಳಿವೆ. ಮುಂದೆ ಜೀವನ ಇನ್ನೂ ಚೆನ್ನಾಗಿದೆ. ಈ ವಿದಾಯಕ್ಕೆ ಇದು ಸರಿಯಾದ ಸಮಯ. ನಿಮ್ಮ ಪ್ರೀತಿಗೆ ನಾನು ಚಿರಋಣಿ. ಮುಂದಿನ ದಿನಗಳಲ್ಲಿ ಸಿಗೋಣ’ ಎಂದು ಭಾವುಕರಾಗಿ ಹೇಳಿದ್ದಾರೆ.

[t4b-ticker]
error: Content is protected !!