ಹೋಮ, ಪೂಜೆಗಳ ಆಡಂಬರವಿಲ್ಲದೆ ಸರಳವಾಗಿ ಕಚೇರಿ ಪ್ರವೇಶಿಸಿದ ಸಚಿವ ಬಸವಂತಪ್ಪ

Picture of Savistara

Savistara

Bureau Report

ಬೆಂಗಳೂರು: ಮುಜರಾಯಿ, ಮೀನುಗಾರಿಕೆ, ಒಳನಾಡು ಸಾರಿಗೆಮತ್ತು ಬಂದರು ಸಚಿವ ಕೆ.ಎಸ್. ಬಸವಂತಪ್ಪ ಅವರು ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ವಿಧಾನಸೌಧದ ಮೂರನೇ ಮಹಡಿಯಲ್ಲಿನ ತಮ್ಮ ಕಚೇರಿಗೆ (ಕೊಠಡಿ ಸಂಖ್ಯೆ: 343) ಪ್ರವೇಶ ಮಾಡಿದರು.

ದಾವಣಗೆರೆಯ ಪೌರಕಾರ್ಮಿಕ ಕುಟುಂಬದ ಅವರು ಬಸವಣ್ಣನ ಹೆಸರಿನಲ್ಲೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸೋಮವಾರ ಹೋಮ, ಪೂಜೆಗಳ ಆಡಂಬರವಿಲ್ಲದೆ ಸರಳವಾಗಿ ಕೊಠಡಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿದರು.ರಾಷ್ಟ್ರ, ರಾಜ್ಯದ ಅನೇಕರ ಭಾವಚಿತ್ರಗಳು ಗೋಡೆಗಳ ಮೇಲೆ ರಾರಾಜಿಸುತ್ತಿದ್ದವು. ಮುಖ್ಯವಾಗಿ ಯಾವುದೇ ಧಾರ್ಮಿಕ ಸಂಕೇತಗಳು ಕಾಣಿಸಲಿಲ್ಲ. ಕೊಠಡಿ ನಿವೀಕರಣಕ್ಕೆ ಹೆಚ್ಚು ಹಣ ಖರ್ಚು ಮಾಡದೆ, ಗೋಡೆ ಕೆಡವದೆ ಹಿಂದೆ ಇದ್ದಂತೆ ಉಳಿಸಿಕೊಂಡಿದ್ದಾರೆ.

[t4b-ticker]
error: Content is protected !!