ಬೆಂಗಳೂರು: ಜನರು ಹೆಚ್ಚಾಗಿ ಭೇಟಿ ನೀಡುವ ಹೊಟೇಲ್, ಮೆಡಿಕಲ್ ಶಾಪ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಗುಣಮಟ್ಟದ ಆಹಾರ, ಸೇವೆ ದೊರೆಯದೇ ಹೋದಲ್ಲಿ ದೂರು ನೀಡಲು QR ಕೋಡ್ ರೂಪದಲ್ಲಿ ಹೊಸ ವ್ಯವಸ್ಥೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.ಸಾರ್ವಜನಿಕರ ಅನುಕೂಲಕ್ಕೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಕಳಪೆ ಆಹಾರ ವಿತರಣೆ, ಇನ್ನಿತರ ದೂರುಗಳನ್ನು ನೇರವಾಗಿ ನೀಡಬಹುದಾಗಿದೆ. ಜನರ ದೂರುಗಳು ಬೇಗನೆ ಅಧಿಕಾರಿಗಳಿಗೆ ತಲುಪುವಂತೆ ಮಾಡಲು ಸರ್ಕಾರ ಈ ಕ್ರಮ ಜಾರಿಗೆ ಚಿಂತನೆ ನಡೆಸಿರುವುದಾಗಿದೆ.ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿರುವುದಾಗಿದೆ. ರಾಜ್ಯದ ಹಲವು ಹೊಟೇಲ್‌ಗಳು ಕಳಪೆ, ಕೊಳೆತ ಆಹಾರ ನೀಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆ ಸರ್ಕಾರ ಆ ಕ್ರಮಕ್ಕೆ ಮುಂದಾಗಿದೆ.
ಕಳಪೆ ಗುಣಮಟ್ಟದ ಆಹಾರ ನೀಡಿದಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ದೂರು ದಾಖಲಿಸುವ ವ್ಯವಸ್ಥೆ ಜಾರಿಗೆ ಮುಂದಾದ ರಾಜ್ಯ ಸರ್ಕಾರ
Savistara
Bureau Report
[t4b-ticker]














































