RAINFALL HAVOC – ಮುಂಗಾರು ಅಂತ್ಯದಲ್ಲಿ ರಾಜ್ಯಾದ್ಯಂತ ಸಿಡಿಲಬ್ಬರ: ಸಾವು-ನೋವಿಗೆ ಕಾರಣವಾದ ವರುಣನ ಆರ್ಭಟ ಹೇಗಿದೆ?

Picture of Savistara

Savistara

Bureau Report

ಬೆಂಗಳೂರು: ಮುಂಗಾರು ಹಂಗಾಮಿನ ಅಂತ್ಯದ ವೇಳೆಯಲ್ಲಿ ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಗುರುವಾರ ಮೂವರು ಮೃತಪಟ್ಟು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.​

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆಯಲ್ಲಿ ಹೊಲದಲ್ಲಿ ಸೂರ್ಯಕಾಂತಿ ರಾಶಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಕಾಟಾಪುರದ ಭರಮಪ್ಪ ಯಲ್ಲಪ್ಪ ಖಂಡೇಕರ (25) ಹಾಗೂ ಐಹೊಳೆಯ ರಾಮವ್ವ ದ್ಯಾಮಪ್ಪ ಹೊಳಗಿ (65) ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಮೀನಿನಲ್ಲಿ ಜೋಳ ಬಿತ್ತನೆ ಮಾಡುತ್ತಿದ್ದ ದ್ವಾವಣ್ಣ (35) ಎಂಬುವರು ಸಿಡಿಲಿಗೆ ಬಲಿಯಾಗಿದ್ದು, ಅಯ್ಯಪ್ಪ ಯಮನಪ್ಪ ಭೋವಿ ಗಂಭೀರವಾಗಿ ಗಾಯಗೊಂಡಿದ್ದಾರೆ.​

ಕರಾವಳಿಯಲ್ಲಿ ತಂಪೆರೆದ ಮಳೆ & ಹವಾಮಾನ ಮುನ್ಸೂಚನೆ:​

ತಾಪಮಾನ ಕುಸಿತ: ಕಳೆದ ಒಂದೆರಡು ವಾರಗಳಿಂದ ಭಾರಿ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದ್ದು, ವಾತಾವರಣ ತಂಪಾಗಿದೆ. ಗರಿಷ್ಠ ತಾಪಮಾನ 33.7 ಡಿ.ಸೆ.ಯಿಂದ 30.1 ಡಿ.ಸೆ.ಗೆ ಕುಸಿದಿದೆ.​

ವಾಯುಭಾರ ಕುಸಿತ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದ ಅರಬ್ಬಿ ಸಮುದ್ರದ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.

​ಮುಂದಿನ ದಿನಗಳ ಮುನ್ಸೂಚನೆ: ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ ಸೆಪ್ಟೆಂಬರ್ 26ರ ತನಕ ಅಲ್ಲಲ್ಲಿ ಹಗುರ ಮಳೆಯಾಗಲಿದ್ದು, ಸೆಪ್ಟೆಂಬರ್ 29ರಿಂದ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

[t4b-ticker]
error: Content is protected !!