ಸುಳ್ಯ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಏಕ್ ಪೇಡ್ ಮಾ ಕೆ ನಾಮ್ – ತಾಯಿಯ ಹೆಸರಿನಲ್ಲಿ ಒಂದು ಗಿಡ’ ಅಭಿಯಾನದ ಅಂಗವಾಗಿ ಸುಳ್ಯದ ಹಳೇಗೇಟ್ ಬೂತ್ ವ್ಯಾಪ್ತಿಯ ಛತ್ರಪತಿ ನಗರದಲ್ಲಿ ಇಂದು ಗಿಡ ನೆಡುವ ಕಾರ್ಯಕ್ರಮ ನಡೆಯಿತು.ಶಂಕರ ರಾವ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗಿಡ ನೆಟ್ಟರು.

ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಕುಸುಮಾಧರ ಎ.ಟಿ, ವಿನಯಕುಮಾರ್ ಕಂದಡ್ಕ, ಅವಿನಾಶ್ ಕುರುಂಜಿ, ನಾರಾಯಣ ಎಸ್.ಎಂ, ರಮೇಶ್, ಶಿವನಾಥ್ ರಾವ್, ಬೂತ್ ಅಧ್ಯಕ್ಷ ಶ್ರೀನಿವಾಸ ಮಾಸ್ಟರ್, ಚಿದಾನಂದ ವಿದ್ಯಾನಗರ, ಬುದ್ಧ ನಾಯಕ್, ಶಶಿಕಲಾ, ಪುಷ್ಪ ಮೇದಪ್ಪ, ಶಂಕರ ರಾವ್, ಸಚಿನ್, ಕಿಶನ್, ಗೌತಮ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮೊದಲಿಗೆ ಬೂತ್ ಅಧ್ಯಕ್ಷ ಶ್ರೀನಿವಾಸ ಮಾಸ್ಟರ್ ಅವರ ಮನೆಗೆ ಭೇಟಿ ನೀಡಿದ ಸಂಸದರು ಸ್ಥಳೀಯರೊಂದಿಗೆ ಚರ್ಚಿಸಿದರು.
















































