ಸುಳ್ಯ ವಕೀಲರ ಸಂಘದ ಅಧ್ಯಕ್ಷತೆಯ ಚುನಾವಣೆಯಲ್ಲಿ ಶ್ರೀಹರಿ ಕುಕ್ಕುಡೇಲು ಭರ್ಜರಿ ಗೆಲುವು ಸಾಧಿಸಿದ್ದಾರೆ.
ವಕೀಲರ ಸಂಘದ ಚುನಾವಣೆ ಇಂದು ವಕೀಲರ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆಗೆ ಒಂದು ಸ್ಥಾನಕ್ಕೆ ಶ್ರೀಹರಿ ಕುಕ್ಕುಡೇಲು ಹಾಗೂ ಜಗದೀಶ್ ಡಿ.ಪಿ. ನಾಮಪತ್ರ ಸಲ್ಲಿಸಿದ್ದರು.ಚುನಾವಣೆ ನಡೆದು ಫಲಿತಾಂಶ ಎಣಿಕೆಯಾದಾಗ ಶ್ರೀಹರಿ ಕುಕ್ಕುಡೇಲು 54 ಮತ ಪಡೆದು ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಜಗದೀಶ್ ಡಿ.ಪಿ. 45 ಮತ ಪಡೆದರು. ಒಂದು ಮತ ಅಸಿಂಧು ವಾಗಿತ್ತು.
















































