ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ : ಪೊಲೀಸ್ ನೋಟಿಸಿಗೆ ಉತ್ತರಿಸಲು ಕಾಲಾವಕಾಶ ಕೇಳಿದ ಕಲ್ಲಡ್ಕ ಪ್ರಭಾಕರ ಭಟ್

Picture of Savistara

Savistara

Bureau Report

ಮಂಗಳೂರು, ಸೆ.26: అబ్దులా ರಹಿಮಾನ್ಹತ್ಯೆ ಪ್ರಕರಣದಲ್ಲಿ ಬಂಟ್ವಾಳ ಪೊಲೀಸರು ಹೇಳಿಕೆ ಪಡೆಯಲು ನೀಡಿದ್ದ ನೋಟೀಸಿಗೆ ಉತ್ತರಿಸಲು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆ. ನಿಗದಿತ ಕಾರ್ಯಕ್ರಮ ಇರುವುದರಿಂದ ವಿಚಾರಣೆಗೆ ಹಾಜರಾಗಲು ಒಂದು ತಿಂಗಳ ಸಮಯ ಬೇಕೆಂದು ಕೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.

ಸೆ.26ರ ಇಂದು ಪೂರ್ವಾಹ್ನ ಕಲ್ಲಡ್ಕದ ಮನೆಯಲ್ಲಿ ಪೊಲೀಸರು ಹೇಳಿಕೆ ಪಡೆಯಲಿದ್ದಾರೆಂದು ನೋಟಿಸ್‌ ನೀಡಲಾಗಿತ್ತು. ಜಿಲ್ಲಾ ಪೊಲೀಸರು ಕೂಡ ಸಾಕ್ಷ್ಯ ಹೇಳಿಕೆಗಾಗಿ ನೋಟಿಸ್‌ ನೀಡಿದ್ದಾಗಿ ದೃಢಪಡಿಸಿದ್ದರು. ಆದರೆ, ಒಂದೇ ದಿನ ಇರುವಾಗ ನೋಟಿಸ್ ನೀಡಿದ್ದರಿಂದಲೋ ಏನೋ ವಿಚಾರಣೆಗೆ ಹಾಜರಾಗಲು ಪ್ರಭಾಕರ ಭಟ್ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು 30 ದಿನಗಳ ಕಾಲಾವಕಾಶ ಕೇಳಿದ್ದಾರೆಂಬ ಮಾಹಿತಿ ಇದೆ.ಪೂರ್ವ ನಿರ್ಧರಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ 30 ದಿನಗಳ ಕಾಲಾವಕಾಶ ಕೇಳಿದ್ದಾರೆಂದು ಸಂಘ ಪರಿವಾರದ ಮೂಲಗಳು ತಿಳಿಸಿವೆ. ಪೊಲೀಸರು ಇದಕ್ಕೆ ಅನುಮತಿಸಿದ್ದು ವಿಚಾರಣೆಗೆ ಕಾಲಾವಕಾಶ ನೀಡಿದ್ದಾರೆಂದು ತಿಳಿದುಬಂದಿದೆ.

[t4b-ticker]
error: Content is protected !!