ಯೋಜನೆಯ ಹಣ ಪಡೆಯುವ ಲಕ್ಷಾಂತರ ಮಹಿಳೆಯರಿಗೆ ಬಿಗ್ ಶಾಕ್! ಜಾರಿಯಾಯ್ತು ಹೊಸ ಕಠಿಣ ನಿಯಮ!

Picture of Savistara

Savistara

Bureau Report

​ಮಂಡ್ಯ: ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ‘ಗೃಹಲಕ್ಷ್ಮಿ’ಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಯೋಜನೆಗೆ ನೋಂದಾಯಿತ ಮೊಬೈಲ್ ಸಿಮ್ ಕಾರ್ಡ್ (SIM card) ಇನ್ನು ಮುಂದೆ ಕಡ್ಡಾಯವಾಗಿ ಮನೆಯ ಯಜಮಾನಿಯ ಹೆಸರಿನಲ್ಲೇ ಇರಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಹಾಗೂ ಎಂಎಲ್‌ಸಿ ದಿನೇಶ್ ಗೂಳಿಗೌಡ ಸ್ಪಷ್ಟಪಡಿಸಿದ್ದಾರೆ.​

ಕೋಟಿಗಟ್ಟಲೆ ಹಣ ದುರುಪಯೋಗ:ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆಂತರಿಕ ತನಿಖೆ ವೇಳೆ ಸುಮಾರು 1.99 ಲಕ್ಷ ಫಲಾನುಭವಿ ಮಹಿಳೆಯರು ಮರಣ ಹೊಂದಿದ್ದರೂ, ಅವರ ಖಾತೆಗಳಿಗೆ ನಿಯಮಿತವಾಗಿ ₹117 ಕೋಟಿಗೂ ಹೆಚ್ಚು ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು.

ಅಷ್ಟೇ ಅಲ್ಲದೆ, ಮಹಿಳೆಯರಿಗೆ ಸಿಗಬೇಕಾದ ಹಣ ಪತಿಯ ಖಾತೆಗಳಿಗೆ ವರ್ಗಾವಣೆಯಾಗುತ್ತಿದ್ದುದು ಹಾಗೂ ಹೊರರಾಜ್ಯದ ನಿವಾಸಿಗಳು ಅಕ್ರಮವಾಗಿ ಲಾಭ ಪಡೆಯುತ್ತಿರುವುದು ಪತ್ತೆಯಾಗಿತ್ತು. ಈ ಗಂಭೀರ ಲೋಪಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗಮನ ಸೆಳೆದು, ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.​

ನೈಜ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ:ಅರ್ಹ ಮತ್ತು ನೈಜ ಮಹಿಳೆಯರಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪಲಿ ಎಂಬ ಉದ್ದೇಶದಿಂದ ‘ಯಜಮಾನಿ ಹೆಸರಿನ ಸಿಮ್’ ನಿಯಮವನ್ನು ಜಾರಿಗೆ ತರಲಾಗಿದೆ. ಈ ಸುಧಾರಣೆಯಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದಿದ್ದು, ಪ್ರಸ್ತುತ ರಾಜ್ಯದ 1 ಕೋಟಿ 24 ಲಕ್ಷ ನೈಜ ಫಲಾನುಭವಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಸೌಲಭ್ಯ ಸಿಗುತ್ತಿದೆ.​

ಶೀಘ್ರದಲ್ಲೇ 33ನೇ ಕಂತಿನ ಹಣ ಬಿಡುಗಡೆ:ಇದುವರೆಗೆ ಪ್ರತಿಯೊಬ್ಬ ಅರ್ಹ ಮಹಿಳೆಗೆ ತಲಾ ₹64,000 ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ತಲುಪಿಸಲಾಗಿದೆ. ಈಗಾಗಲೇ ಆಗಸ್ಟ್‌ವರೆಗಿನ ಕಂತುಗಳು ಪಾವತಿಯಾಗಿದ್ದು, 33ನೇ ಕಂತಿನ ಒಟ್ಟು ₹2,480 ಕೋಟಿ ಅನುದಾನಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಈ ಮೊತ್ತವು ಶೀಘ್ರದಲ್ಲೇ ಎಲ್ಲಾ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!