ಕೇವಲ 10 ದಿನಗಳಲ್ಲಿ ಮೂವರು ಯುವತಿಯರ ಅನುಮಾನಾಸ್ಪದ ಸಾವು! ಓಯೋ ಹೋಟೆಲ್‌ಗಳ ಕೊಠಡಿಗಳಲ್ಲಿ ನಿಜವಾಗಿ ನಡೆಯುತ್ತಿರುವುದೇನು?

Picture of Savistara

Savistara

Bureau Report

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ OYO ಹೋಟೆಲ್‌ಗಳ ಸುತ್ತಮುತ್ತ ಆತಂಕಕಾರಿ ಘಟನೆಗಳು ವರದಿಯಾಗುತ್ತಿವೆ. ಕೇವಲ 10 ದಿನಗಳ ಅವಧಿಯಲ್ಲಿ ನಗರದ ವಿವಿಧ ಪ್ರದೇಶಗಳ ಹೋಟೆಲ್‌ಗಳಲ್ಲಿ ಮೂವರು ಯುವತಿಯರು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಈ ಘಟನೆಗಳ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಅತಿಥಿಗಳ ಗುರುತಿನ ಪರಿಶೀಲನೆ, ಸಿಸಿಟಿವಿ ಮೇಲ್ವಿಚಾರಣೆ ಹಾಗೂ ಭದ್ರತಾ ನಿಯಮಗಳ ಪಾಲನೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.​

10 ದಿನಗಳಲ್ಲಿ ಮೂವರ ಸಾವು:ನಗರದಲ್ಲಿ ಸತತವಾಗಿ ಬೆಳಕಿಗೆ ಬರುತ್ತಿರುವ ಈ ಘಟನೆಗಳು ಪೊಲೀಸರನ್ನೂ ಬೆಚ್ಚಿಬೀಳಿಸಿವೆ. ಸೆಪ್ಟೆಂಬರ್ 21ರಂದು, ಮಾದಾಪುರ ವ್ಯಾಪ್ತಿಯ OYO ಹೋಟೆಲ್‌ಗೆ ತೆರಳಿದ್ದ ವಿಶಾಖಪಟ್ಟಣಂ ಮೂಲದ ಶಾರೋನ್ ನಿಖಿತಾ ಎಂಬ ಯುವತಿ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಪ್ರಿಯಕರನೊಂದಿಗೆ ಹೋಟೆಲ್‌ಗೆ ಬಂದಿದ್ದ ಅವರು ಮಧ್ಯರಾತ್ರಿ ಕೊಲೆಯಾಗಿದ್ದಾರೆ ಎಂದು ವರದಿಯಾಗಿದೆ.​ಸೆಪ್ಟೆಂಬರ್ 29ರಂದು, ಎಸ್‌ಆರ್ ನಗರ ಪ್ರದೇಶದ OYO ಹೋಟೆಲ್‌ನಲ್ಲಿ ವಿಕಾರಾಬಾದ್ ಮೂಲದ ಬಿ. ಶಿರೀಷಾ ಎಂಬ ಮಹಿಳೆ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಶ್ರೀನಿವಾಸ್ ಎಂಬ ವ್ಯಕ್ತಿಯೊಂದಿಗೆ ಹೋಟೆಲ್‌ಗೆ ಚೆಕ್-ಇನ್ ಆಗಿದ್ದರು. ಆದರೆ ಇಬ್ಬರೂ ‘ಗಣೇಶ್’ ಮತ್ತು ‘ದುರ್ಗಾ’ ಎಂಬ ಹೆಸರಿನ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ OYO ಹೋಟೆಲ್‌ನಲ್ಲಿ ಕೊಠಡಿ ಪಡೆದಿರುವುದು ಹೈದರಾಬಾದ್ ನಗರದ ಭದ್ರತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.​

ಇನ್ನು ಅಕ್ಟೋಬರ್ 2ರಂದು, ಗಾಂಧಿ ಜಯಂತಿಯಂದೇ ಹನಮಕೊಂಡ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಕೋಮಟಿ ಸೃಜನಾ ಎಂಬ ಯುವತಿ ಮಿಯಾಪುರದ ಹೋಟೆಲ್‌ನಲ್ಲಿ ಮೃತಪಟ್ಟಿದ್ದಾರೆ. ಅವರು ಮೃತಪಟ್ಟ ಹಲವು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೀಗೆ ಕೇವಲ 10 ದಿನಗಳ ಅವಧಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಮೂವರು ಯುವತಿಯರು ಮೃತಪಟ್ಟಿರುವುದು ಆತಂಕ ಹೆಚ್ಚಿಸಿದೆ.​

OYO ಹೋಟೆಲ್‌ಗಳಲ್ಲಿ ಭದ್ರತೆಯ ಪ್ರಶ್ನೆ:ನಿಯಮಗಳ ಪ್ರಕಾರ ಹೋಟೆಲ್‌ಗೆ ಬರುವ ಪ್ರತಿಯೊಬ್ಬ ಅತಿಥಿಯ ವಿವರಗಳನ್ನು ಸಮರ್ಪಕವಾಗಿ ದಾಖಲಿಸಬೇಕು. ಸರ್ಕಾರಿ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಪ್ರವೇಶ ನೋಂದಣಿ ಪುಸ್ತಕವನ್ನು ನಿರ್ವಹಿಸಬೇಕು. ಆದರೆ ಹಣದ ಆಸೆಯಿಂದ ಕೆಲವು ಹೋಟೆಲ್‌ಗಳ ಆಡಳಿತ ಮಂಡಳಿಗಳು ಈ ಭದ್ರತಾ ನಿಯಮಗಳನ್ನು ಗಾಳಿಗೆ ತೂರುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.​

ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಸಿದ್ಧತೆ:ಸರಣಿ ಘಟನೆಗಳ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಿಯಮಗಳನ್ನು ಪಾಲಿಸದ OYO ಹೋಟೆಲ್‌ಗಳ ಲೈಸೆನ್ಸ್ ರದ್ದುಪಡಿಸುವುದರ ಜೊತೆಗೆ, ಹೋಟೆಲ್ ಮಾಲೀಕರು ಮತ್ತು ನಿರ್ವಾಹಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!