ರಾಜ್ಯಸಭೆಯಲ್ಲೂ ವಕ್ಫ್​ ತಿದ್ದುಪಡಿ ವಿಧೇಯಕ ಅಂಗೀಕಾರ: ಅಂದುಕೊಂಡಿದ್ದನ್ನು ಸಾಧಿಸಿದ ಮೋದಿ ಸರ್ಕಾರ

Picture of Savistara

Savistara

Bureau Report

ರಾತ್ರಿ ಒಂದು ಗಂಟೆವರೆಗೂ ಚರ್ಚೆ ನಡೆದು, ಬಳಿಕ ವಿದೇಯಕ ಅನುಮೋದನೆಗೆ ಮತಕ್ಕೆ ಹಾಕಲಾಯಿತು. ಪ್ರತಿಪಕ್ಷಗಳು ಡಿವಿಸನ್​ ಆಫ್​ ವೋಟ್​ ಕೇಳಿದ್ದರಿಂದ ತಲೆ ಎಣಿಕೆ ಮೂಲಕ ಅಂಗೀಕಾರ ಪಡೆದುಕೊಳ್ಳಲಾಯಿತು.

ನವದೆಹಲಿ: ಬುಧವಾರ ತಡರಾತ್ರಿ ಎರಡು ಗಂಟಗೆ ವಕ್ಫ್​ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಪಾಸ್​ ಆಗಿತ್ತು. ಇನ್ನು ಗುರುವಾರ ತಡರಾತ್ರಿ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ(Waqf Amendment Bill) ಗೂ ಅಂಗೀಕಾರ ಪಡೆದುಕೊಳ್ಳಲಾಯಿತು.ಕೇಂದ್ರ ಸರ್ಕಾರ ಮಂಡಿಸಿದ ವಕ್ಫ್​​ ತಿದ್ದುಪಡಿ ವಿಧೇಯಕ 2025ರ ಪರ 128 ಮತಗಳು ಬಂದರೆ ವಿರೋಧವಾಗಿ 95 ಮತಗಳು ಬಂದವು.ರಾಜ್ಯಸಭೆಯಲ್ಲೂ ಕೂಡಾ ವಿಧೇಯಕಕ್ಕೆ ಹಲವು ತಿದ್ದುಪಡಿಗಳನ್ನು ಮಂಡಿಸಲಾಯಿತು. ಸದಸ್ಯರು ಮಂಡಿಸಿದ ತಿದ್ದುಪಡಿಗಳು ಅಂಗೀಕಾರ ಆದರೆ, ಕೆಲವು ಅಂಗೀಕಾರ ಪಡೆಯಲು ವಿಫಲವಾದವು.ನಿನ್ನೆಯಂತೆಯೇ ರಾಜ್ಯಸಭೆಯಲ್ಲೂ ಮ್ಯಾರಾಥಾನ್​ ಚರ್ಚೆಗಳು ನಡೆದವು. ರಾತ್ರಿ ಒಂದು ಗಂಟೆವರೆಗೂ ಚರ್ಚೆ ನಡೆದು, ಬಳಿಕ ವಿದೇಯಕ ಅನುಮೋದನೆಗೆ ಮತಕ್ಕೆ ಹಾಕಲಾಯಿತು. ಪ್ರತಿಪಕ್ಷಗಳು ಡಿವಿಸನ್​ ಆಫ್​ ವೋಟ್​ ಕೇಳಿದ್ದರಿಂದ ತಲೆ ಎಣಿಕೆ ಮೂಲಕ ಅಂಗೀಕಾರ ಪಡೆದುಕೊಳ್ಳಲಾಯಿತು.

ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡ ಬಳಿಕ ಗುರುವಾರ ರಾಜ್ಯಸಭೆಯಲ್ಲೂ ವಕ್ಫ್​​ (ತಿದ್ದುಪಡಿ) ಮಸೂದೆ 2025 ಅನ್ನು ಅಲ್ಪ ಸಂಖ್ಯಾತ ಖಾತೆ ಸಚಿವ ಕಿರಣ್​ ರಿಜಿಜು ಮಂಡಿಸಿದರು.ವಕ್ಫ್​ ತಿದ್ದುಪಡಿಗಳ ವಿಧೇಯಕ ಮಂಡನೆ ಮಾಡಿದ ಬಳಿಕ ಮಾತನಾಡಿದ ಸಚಿವ ರಿಜಿಜು ಈ ಮಸೂದೆಯು ಮುಸ್ಲಿಮರ ವಿರುದ್ಧವಾಗಿಲ್ಲ. ಅವರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ಇದು ವಕ್ಫ್ ಆಸ್ತಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು, ಸಮಸ್ಯೆಗಳನ್ನು ಪರಿಹರಿಸಲು, ಪಾರದರ್ಶಕತೆಯನ್ನು ಕಾಪಾಡಲು, ತಂತ್ರಜ್ಞಾನ-ಚಾಲಿತ ನಿರ್ವಹಣೆಯನ್ನು ಉದ್ದೇಶದಿಂದ ಪರಿಚಯಿಸಲಾಗಿದೆ ಎಂದು ವಿಧೇಯಕದ ಅನಿವಾರ್ಯತೆ ಮತ್ತು ಉದ್ದೇಶವನ್ನು ರಾಜ್ಯಸಭೆಗೆ ವಿವರಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಹಾಗೂ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ, ವಕ್ಫ್ ಮಸೂದೆ ಸಂವಿಧಾನದ ಮೇಲಿನ ದಾಳಿ ಇದು ಎಂದು ಆರೋಪಿಸಿದರು. ಈ ವಿಧೇಯಕ ಸಮಾಜವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿಡುವ ಬಿಜೆಪಿಯ ತಂತ್ರದ ಭಾಗ ಇದು ಆಕ್ರೋಶ ಹೊರಹಾಕಿದರು.ರಾಜ್ಯಸಭೆಯಲ್ಲಿ ಬಿಜೆಪಿಯ 98 ಸಂಸದರು, ಮಿತ್ರಪಕ್ಷ ಜೆಡಿಯು ಪಕ್ಷದ ನಾಲ್ವರು, ಎನ್‌ಸಿಪಿಯ ಮೂವರು, ಟಿಡಿಪಿಯ ಇಬ್ಬರು ಮತ್ತು ಆರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಎನ್‌ಡಿಎ ಮೈತ್ರಿಕೂಟದ 125 ಸಂಸದರಿದ್ದಾರೆ. ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್‌ನ 27 ಸಂಸದರು, ತೃಣಮೂಲ ಕಾಂಗ್ರೆಸ್‌ನ 13 ಸೇರಿದಂತೆ 88 ಸಂಸದರನ್ನು ಹೊಂದಿದೆ. ನವೀನ್ ಪಟ್ನಾಯಕ್ ನೇತೃತ್ವದ BJD ಪಕ್ಷವು 7 ಸಂಸದರನ್ನು ಹೊಂದಿದೆ.

ಸಾರ್ವಜನಿಕ ಕ್ಷಮೆಗೆ ಖರ್ಗೆ ಆಗ್ರಹ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮತಿಯಿಲ್ಲದೇ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪ ಮಾಡಿದ್ದರು. ಇದಕ್ಕೆ ರಾಜ್ಯಸಭೆ ಚರ್ಚೆ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ ಠಾಕೂರ್ ಅವರು ತಮ್ಮ ಹೇಳಿಕೆಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!