ಆಪರೇಷನ್​ ಸಿಂಧೂರ: ಪಿಒಕೆ ವಾಪಸ್​ ಪಡೆಯುವ ಕುರಿತು ಮಾತ್ರ ಪಾಕ್​ ಜೊತೆ ಮಾತುಕತೆ- ಮೋದಿ

Picture of Savistara

Savistara

Bureau Report

ಆಪರೇಷನ್​ ಸಿಂಧೂರ ಬಗ್ಗೆ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಪಾಕಿಸ್ತಾನದ ಮೇಲಿನ ಸೇನಾ ಕಾರ್ಯಾಚರಣೆಯ ಶಕ್ತಿಯಾಗಿದ್ದ ಪ್ರಧಾನಿಯ ಹೇಳಿಕೆಗಳು ಮಹತ್ವದ್ದಾಗಿದ್ದು, ದೇಶದ ನಾಗರಿಕರು ಈ ಬಗ್ಗೆ ಕುತೂಹಲ ಹೊಂದಿದ್ದಾರೆ.

LIVE FEED

8:22 PM, 12 May 2025 (IST)ಪಿಒಕೆ ಕುರಿತು ಮಾತ್ರ ಪಾಕ್​ ಜೊತೆ ಮಾತುಕತೆ- ಮೋದಿ

*ಟೆರರ್- ಟ್ರೇಡ್​ ಒಂದೇ ಹಾದಿಯಲ್ಲಿ ನಡೆಯಲು ಸಾಧ್ಯವಿಲ್ಲ

*ಪಾಕಿಸ್ತಾನದ ಮೇಲೆ ಮತ್ತೆ ಭಾರತ ದಾಳಿ ನಡೆಸಿದರೆ ಅದು ಉಗ್ರರ ವಿರುದ್ಧವೇ ಆಗಿರುತ್ತದೆ

*ಇದನ್ನು ವಿಶ್ವರಾಷ್ಟ್ರಗಳು ಅರ್ಥ ಮಾಡಿಕೊಳ್ಳಬೇಕು

*ನಾವು ಪಿಒಕೆ ವಾಪಸ್​ ಕುರಿತು ಮಾತ್ರ ಪಾಕ್​ ಜೊತೆ ಮಾತನಾಡುತ್ತೇವೆ

*ಅದು ಬಿಟ್ಟು ಆ ದೇಶದ ಜೊತೆ ಯಾವುದೇ ಮಾತುಕತೆ ಇಲ್ಲ

_——————————————-

8:20 PM, 12 May 2025 (IST)

ಇದು ಯುದ್ಧಕಾಲವಲ್ಲ, ಆದರೆ ಉಗ್ರವಾದವನ್ನೂ ಸಹಿಸಲ್ಲ- ಪ್ರಧಾನಿ

* ಇದು ಯುದ್ಧಕಾಲವಲ್ಲ, ಆದರೆ ಉಗ್ರವಾದವನ್ನೂ ಸಹಿಸಲ್ಲ

* ಭಯೋತ್ಪಾದನೆ ಮತ್ತೆ ನಡೆದರೆ, ನಾವು ಉತ್ತರಿಸಲಿದ್ದೇವೆ

* ಪಾಕಿಸ್ತಾನಕ್ಕೆ ಉಗ್ರವಾದಿಗಳೇ ಶತ್ರುಗಳು

* ಆ ದೇಶ ಉಳಿಯಬೇಕಾದರೆ, ಮೊದಲು ಉಗ್ರವಾದವನ್ನು ನಿಲ್ಲಿಸಲಿ

* ಇಲ್ಲವಾದಲ್ಲಿ ಆ ದೇಶ ಭೂಪಟದಲ್ಲಿ ಉಳಿಯುವುದಿಲ್ಲ

_————–_—————————-

8:17 PM, 12 May 2025 (IST)

ಪಾಕ್​ನ ಅಣುಬಾಂಬ್​ ದಾಳಿಗೆ ಭಾರತ ಹೆದರಲ್ಲ- ಮೋದಿ

* ಅಣುಬಾಂಬ್​ ದಾಳಿಗೆ ಭಾರತ ಹೆದರಲ್ಲ

* ಪಾಕಿಸ್ತಾನದ ಗೊಡ್ಡು ಬೆದರಿಕೆಗಳಿಗೆ ಬೆದರಲ್ಲ

* ಈ ಬೆದರಿಕೆಗೆ ನಾವು ಈಗಾಗಲೇ ಉತ್ತರ ಕೊಟ್ಟಿದ್ದೇವೆ

* ದೇಶದ ನಾಗರಿಕರನ್ನು ನಾವು ಯಾವುದೇ ಹೆಜ್ಜೆ ಇಡಲು ಸಿದ್ಧ

__——————————————-

8:15 PM, 12 May 2025 (IST)

ಕದನಕ್ಕೆ ಅಲ್ಪವಿರಾಮ ಹಾಕಲಾಗಿದೆ, ಇನ್ನೂ ನಿಂತಿಲ್ಲ- ಮೋದಿ

* ಭಾರತದ ದಾಳಿ ಬಳಿಕ ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಗಿತ್ತು

* ಅದು ಕೂಡ ಮಿಸೈಲ್​, ಡ್ರೋನ್​ಗಳನ್ನು ಹಾರಿ ಬಿಟ್ಟಿತು

* ಆದರೆ, ಅವೆಲ್ಲವನ್ನೂ ನಾವು ಉಡಾಯಿಸಿದೆವು

* ಇದೆಲ್ಲವನ್ನೂ ವಿಶ್ವವೇ ನೋಡಿದೆ

* ಪಾಕ್​ ಡ್ರೋನ್​, ಕ್ಷಿಪಣಿ ಹಾರಿಸಿದರೆ, ಅವರ ತಲೆಯ ಮೇಲೆಯೇ ನಾವು ಹಾರಿಸಿದ್ದೇವೆ

* ಕದನಕ್ಕೆ ಅಲ್ಪವಿರಾಮ ಹಾಕಲಾಗಿದೆ ,ಇನ್ನೂ ನಿಂತಿಲ್ಲ

* ಪಾಕಿಸ್ತಾನ ಮುಂದೆ ದಾಳಿ, ಉಗ್ರವಾದ ನಡೆಸಿದಲ್ಲಿ ನಾವೂ ಭೀಕರ ದಾಳಿ ಮಾಡುತ್ತೇವೆ

*ನಮ್ಮ ಮೂರು ಸೇನಾ ಪಡೆಗಳು ಕಟ್ಟೆಚ್ಚರ ವಹಿಸಿವೆ

*ಭಾರತ ಉಗ್ರವಾದದ ವಿರುದ್ಧವಾಗಿದೆ, ಇದು ಸಂಕೇತವೇ ಆಪರೇಷನ್​ ಸಿಂಧೂರ

___—————————————————

8:11 PM, 12 May 2025 (IST)

ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳನ್ನು ಧ್ವಂಸ ಮಾಡಲಾಗಿದೆ : ಪ್ರಧಾನಿ

*ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳನ್ನು ಧ್ವಂಸ ಮಾಡಲಾಗಿದೆ

*ಜಾಗತಿಕ ಉಗ್ರವಾದದ ವಿಶ್ವವಿದ್ಯಾಲಯಗಳನ್ನು ನಾಶ ಮಾಡಲಾಗಿದೆ

*ಇವುಗಳಿಗೆ ನಮ್ಮ ಭಾರತೀಯ ಸೇನೆ ಕ್ಷಿಪಣಿ ಉಡಾಯಿಸಿ ನಾಶ ಮಾಡಿದೆ

*ಭಾರತದ ದಾಳಿಯಿಂದ ಪಾಕಿಸ್ತಾನ ಹತಾಶೆಗೆ ಬಿದ್ದಿದೆ

_————————————————-

8:08 PM, 12 May 2025 (IST)

ಹೆಣ್ಣು ಮಕ್ಕಳ ಸಿಂಧೂರ ಅಳಿಸಿದವರಿಗೆ ಉತ್ತರ ನೀಡಲಾಗಿದೆ- ಮೋದಿ

*ಹೆಣ್ಣು ಮಕ್ಕಳ ಸಿಂಧೂರ ಅಳಿಸಿದವರಿಗೆ ಉತ್ತರ ಸಿಕ್ಕಿದೆ

*ಉಗ್ರವಾದಿಗಳು ಕನಸಿನಲ್ಲೂ ಊಹಿಸದ ಪ್ರತ್ಯುತ್ತರ ನೀಡಲಾಗಿದೆ

*ಬಹಾವಲ್​ಪುರ, ಮುರಿಡ್ಕೆಯಲ್ಲಿನ ಉಗ್ರ ನೆಲೆಗಳು ನಾಶವಾಗಿವೆ

*ಇಲ್ಲಿಂದ ದೇಶದ ವಿರುದ್ಧ ಮಾಡಿದ ದಾಳಿಗಳಿಗೆ ಉತ್ತರ ನೀಡಲಾಗಿದೆ

__———————————————-

8:05 PM, 12 May 2025 (IST)

ಪಹಲ್ಗಾಮ್​ ದಾಳಿ ಉಗ್ರವಾದದ ಭೀಭತ್ಸದ ಮುಖ

*ಧರ್ಮ ಕೇಳಿ ಉಗ್ರರು ಕುಟುಂಬದ ಎದುರಲ್ಲೇ ದಾಳಿ ಮಾಡಿದರು

*ಪಹಲ್ಗಾಮ್​ ದಾಳಿ ಉಗ್ರವಾದದ ಭೀಭತ್ಸ ಮೆರೆದಿದ್ದಾರೆ

*ಆಪರೇಷನ್​ ಸಿಂಧೂರ್​ ಬರೀ ಕಾರ್ಯಾಚರಣೆಯಲ್ಲ

*ಇದು ಭಾರತದ ಕೋಟ್ಯಂತರ ಜನರ ಪ್ರತೀಕಾರವಾಗಿದೆ

__——————————————-

8:02 PM, 12 May 2025 (IST)

ಸೇನೆಯ ಪರಾಕ್ರಮ ಕೊಂಡಾಡಿದ ಪ್ರಧಾನಿ ಮೋದಿ

*ದೇಶದ ಜನತೆಯ ಪರವಾಗಿ ಸೇನೆಗೆ ಸೆಲ್ಯೂಟ್​

*ಸೇನೆಯ ವೀರತ್ವ, ಪರಾಕ್ರಮ, ಧೈರ್ಯವನ್ನು ಕೊಂಡಾಡಿದ ಮೋದಿ

__———————————————-



[t4b-ticker]
error: Content is protected !!