ಮಂಗಳೂರು: ಹೋಟೆಲ್ ಹಾಗೂ ಆಹಾರ ತಯಾರಿಕಾ ಘಟಕಗಳಲ್ಲಿ ಬಳಕೆ ಮಾಡಿದ ಅಡುಗೆ ಎಣ್ಣೆಯನ್ನು ಪೂರೈಸಲಾಗಿದೆ ಬಯೋಡೀಸೆಲ್, ವಿಮಾನ ಇಂಧನ ಮತ್ತು ಸಾಬೂನು ತಯಾರಿಕಾ ಕಂಪನಿಗಳಿಗೆ ಕಳುಹಿಸುವ ಯೋಜನೆ ರೂಪಿಸಲಾಗಿದೆ. ಮುಂದಿನ 3 ತಿಂಗಳೊಳಗೆ ವಿಶೇಷ ಮೊಬೈಲ್ ಮಂಗಳೂರು ಸೇರಿದಂತೆ ರಾಜ್ಯದ 4 ನಗರಗಳಲ್ಲಿ ಈ ಪ್ರಾಯೋಗಿಕ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರಕಟಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡ ಹೋಟೆಲ್‌ಗಳಲ್ಲಿ ಬಳಕೆ ಮಾಡಿದ ಎಣ್ಣೆಯನ್ನು ಸಣ್ಣಪುಟ್ಟ ಕ್ಯಾಂಟೀನ್, ಹೋಟೆಲ್ ನವರು ಕಡಿಮೆ ದರದಲ್ಲಿ ಖರೀದಿಸಿ ಅಡುಗೆಗೆ ಮರು ಬಳಕೆ ಮಾಡುವುದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಎದುರಾಗುವ ಗಂಭೀರ ಅಪಾಯಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಈ ವಿಶೇಷ ಯೋಜನೆ ರೂಪಿಸಿದೆ. ಬಳಸಿದ ಅಡುಗೆ ಎಣ್ಣೆ ಮತ್ತೆ ಮರುಬಳಕೆಗೆ ಸಿಗದಂತೆ ಸರ್ಕಾರವೇ ಎಣ್ಣೆಯನ್ನು ಖರೀದಿಸಿ ಕೈಗಾರಿಕೆಗಳಿಗೆ ಪೂರೈಸಲಿದೆ.

ನಾಲ್ಕು ನಗರಗಳಲ್ಲಿ ಪ್ರಾಯೋಗಿಕ ಜಾರಿ:


ಪ್ರಥಮ ಹಂತದಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಮಂಗಳೂರು, ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ನಗರಗಳಲ್ಲಿ ಆರಂಭವಾಗಿದೆ.


ಇದಕ್ಕಾಗಿ ಹೊಸ ಮೊಬೈಲ್ ಆಪ್ ಮುಂದಿನ ಮೂರು ತಿಂಗಳ ಸಿದ್ಧ ಯೋಜನೆ. ಈ ಆಯಪ್‌ನಲ್ಲಿ ಅಡುಗೆಎಣ್ಣೆ ಕಂಪನಿಗಳು, ಹೋಲ್ಸೇಲ್ ವಿತರಕರು ಮತ್ತು ದೊಡ್ಡ ಹೋಟೆಲ್ ಮತ್ತು ಫುಡ್ ಫ್ಯಾಕ್ಟರಿಗಳು ಎಷ್ಟು ಪ್ರಮಾಣದ ಎಣ್ಣೆ ಸಂಗ್ರಹಿಸಲಾಗಿದೆ. ಇದರಿಂದ ಅಡುಗೆ ಎಣ್ಣೆ ಮರುಬಳಕೆಯನ್ನು ಗಣನೀಯವಾಗಿ ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಖಾದರ್ ಪ್ರಕಟಿಸಿದೆ.

ಆಹಾರ ಸುರಕ್ಷತಾ ಇಲಾಖೆಯು ಪರವಾನಗಿ ಪಡೆದ ಏಜೆನ್ಸಿಗಳ ಮೂಲಕ ನೇರವಾಗಿ ಬಯೋ ಡೀಸೆಲ್, ವಿಮಾನ ಇಂಧನ ಅಥವಾ ಸೋಪ್ ಫ್ಯಾಕ್ಟರಿಗಳಿಗೆ ಎಣ್ಣೆ ತಲುಪಲಿದೆ. ಇದರಿಂದ ಆಹಾರ ತಯಾರಿಕಾ ಘಟಕಗಳಿಗೆ ಉತ್ತಮ ಬೆಲೆ ಸಿಗಲಿದೆ. ಮುಂದಿನ ದಿನಗಳಲ್ಲಿ ಮನೆಗಳಿಂದಲೂ ಬಳಸಿದ ಎಣ್ಣೆಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.











































