ಶಿಶಿಲದಲ್ಲಿ ಭಾರಿ ಮಳೆ |ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ಜರಿದು ರಸ್ತೆ ಬಂದ್

Picture of Savistara

Savistara

Bureau Report

ಶಿಶಿಲ: ಇಂದು (ಆ. 5)ಸಂಜೆ ಪ್ರಾರಂಭವಾದ ಮಳೆ ಎಡೆಬಿಡದೆ ಬರುತ್ತಿದ್ದು ಶಿಶಿಲ ಪರಿಸರದಲ್ಲಿ ಆತಂಕದ ಸನ್ನಿವೇಶ ನಿರ್ಮಾಣವಾಗಿದೆ.ಶಿಶಿಲೇಶ್ವರ ದೇವಸ್ಥಾನದೊಳಗೆ ನೀರು ನುಗ್ಗಿ ಪರಿಸ್ಥಿತಿ ಹದಗೆಟ್ಟಿರುತ್ತದೆ. ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ರಸ್ತೆಗೆ ಜರಿದು ಅರಸಿನಮಕ್ಕಿ- ಶಿಶಿಲ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ಬರ್ಗುಳ ಎಂಬಲ್ಲಿ ಅರಣ್ಯದಿಂದ ಬರುವ ನೀರು ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿ ಹೊಳೆಯಂತಾಗಿ ವಾಹನ ಸಂಚರಿಸಲು ಆಗದಂತ ಪರಿಸ್ಥಿತಿ ಉಂಟಾಗಿದೆ. ಮುಚ್ಚಿರಡ್ಕ ಕೃಷ್ಣಪ್ಪ ಗೌಡರವರ ಮನೆಯ ಬಳಿ ಗುಡ್ಡ ಜರಿದು ಮನೆಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ರಸ್ತೆ ಹಳ್ಳ ತೋಡುಗಳು ನೀರಿನಿಂದ ತುಂಬಿವೆ.

ಪರಿಸ್ಥಿತಿಯನ್ನು ನಿಭಾಯಿಸಲು ಗ್ರಾ.ಪಂ. ಅಧ್ಯಕ್ಷ ಸುಧೀನ್, ಶೌರ್ಯ ವಿಪತ್ತು ನಿರ್ವಹಣಾ ತಂಡ, ಗ್ರಾ.ಪಂ ಹಾಗೂ ಗ್ರಾಮಸ್ಥರು ಶ್ರಮಿಸುತ್ತಿದ್ದಾರೆ. ರಸ್ತೆಗೆ ಬಿದ್ದ ಮಣ್ಣನ್ನು ತೆಗೆಯಲು ಹಿಟಾಚಿ ಮೂಲಕ ಪ್ರಯತ್ನಿಸಲಾಗುತ್ತಿದೆ.ಅರಸಿನಮಕ್ಕಿಯಿಂದ ಬೂಡುಮುಗೇರು ಕಡೆ ಬರುವಲ್ಲಿ ಕೂಡಾ ಬರೆ ಜರಿದು ರಸ್ತೆಗೆ ಮಣ್ಣು ಬಿದ್ದಿದ್ದೆ. ಪಟ್ರಮೆ ಮಸೀದಿ ಬಳಿ ನದಿ ನೀರು ರಸ್ತೆಗೆ ಬಂದಿರುತ್ತದೆ. ಮಣಿಯೇರು ರಸ್ತೆ, ಕೂಟೇಲು ಬಳಿ ನೀರು ತುಂಬಿ ಸಂಪರ್ಕ ಕಡಿದಿದೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!