ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧ್ವನಿ ಮತ್ತು ಬೆಳಕು ಅಳವಡಿಕೆ ಹಾಗೂ ನಿರ್ವಹಣೆ ಸಂಬಂಧಿತ ಅನೇಕ ಸಮಸ್ಯೆಗಳ ಕುರಿತು ಜಿಲ್ಲಾಧ್ಯಕ್ಷ ಧನರಾಜ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಮಹೇಶ್ ಬೋಳಾರ್ ಅವರು ಶಾಸಕರ ಗಮನಕ್ಕೆ ತಂದಿದ್ದರು.ಇದಕ್ಕೆ ಸಂಬಂಧಿಸಿ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಮಾನ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಒತ್ತಾಯಿಸಿದರು.ಮಳೆಗಾಲದಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲದೆ ಈಗಾಗಲೇ ನಷ್ಟ ಅನುಭವಿಸಿರುವ ಸೌಂಡ್ಸ್ ಅಂಡ್ ಲೈಟ್ಸ್ ಮಾಲೀಕರು ಮತ್ತು ಕಾರ್ಮಿಕರು, ಮುಂಬರುವ ಗಣೇಶ ಚತುರ್ಥಿ, ನವರಾತ್ರಿ ಸೇರಿದಂತೆ ಹಬ್ಬ-ಹರಿದಿನಗಳಲ್ಲಿ ತಮ್ಮ ಉದ್ಯಮವನ್ನು ನಿರ್ವಹಿಸಲು ನಿರೀಕ್ಷೆಯಲ್ಲಿದ್ದಾರೆ. ನಿರ್ವಹಣೆಯ ಸಂದರ್ಭದಲ್ಲಿ ಎದುರಾಗುತ್ತಿರುವ ಅಡೆತಡೆಗಳು ಮತ್ತು ಅಸ್ಪಷ್ಟ ಮಾರ್ಗಸೂಚಿಗಳು ಈ ಉದ್ಯಮವನ್ನು ಕಷ್ಟಕರ ಸ್ಥಿತಿಗೆ ತಳ್ಳುತ್ತಿವೆ.ಈ ಕ್ಷೇತ್ರದಲ್ಲಿ ಸುಮಾರು 6000 ಕ್ಕಿಂತಲೂ ಅಧಿಕ ಕಾರ್ಮಿಕರು ಅವರ ಜೀವನೋಪಾಯ ಮಾಡಿಕೊಂಡು, ಉದ್ಯಮದ ಮೇಲೆಯೇ ಅವಲಂಬಿತವಾಗಿದೆ. ಶಾಸಕರು ಸರ್ಕಾರವು ಈ ಉದ್ಯಮಕ್ಕೆ ರಕ್ಷಣೆಯನ್ನು ಒದಗಿಸಿ, ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗೃಹಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಜಿಲ್ಲೆಗೆ ಭೇಟಿ ನೀಡಿ ಸಂಬಂಧಿತ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸೌಂಡ್ & ಲೈಟ್ ಉದ್ಯಮದ ಸಮಸ್ಯೆ ಬಗೆಹರಿಸಲು ಗೃಹಸಚಿವರಿಗೆ ಒತ್ತಾಯ – ಶಾಸಕ ಕಿಶೋರ್ ಕುಮಾರ್
Savistara
Bureau Report
[t4b-ticker]











































