ಗಾನ ಕೋಗಿಲೆ ಎಸ್ ಜಾನಕಿ ನಿಧನ | ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂತಾಪ

Picture of Savistara

Savistara

Bureau Report

ದೇಶ ಕಂಡ ಮೇರು ಗಾಯಕಿ, 6 ದಶಕಗಳ ಕಾಲ ವೈವಿಧ್ಯಮಯ ಹಾಡುಗಳ ಮೂಲಕ ಸಂಗೀತಲೋಕದ ಗಾನಕೋಗಿಲೆಯೆಂಬ ಅಭಿದಾನಕ್ಕೆ ಪಾತ್ರರಾಗಿದ್ದ ಎಸ್. ಜಾನಕಿ ಅವರು ವಿದಿವಶರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ.ಎಳವೆಯಲ್ಲಿಯೇ ಸಂಗೀತದ ಸ್ವರಗಳನ್ನು ಅದ್ಭುತವಾಗಿ ಕಲಿತಿದ್ದ ಜನ್ಮಜಾತ ಹಾಡುಗಾರ್ತಿ ಎಸ್ ಜಾನಕಿ ಅವರು. ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾದವರು. ಅವರಿಗಿದ್ದ ವಿವಿಧ ಭಾಷೆಗಳ ಮೇಲಿನ ಹಿಡಿತ, ನಿಖರವಾದ ಉಚ್ಚಾರಣೆ, ಶಾರೀರದಲ್ಲಿ ಮೂಡಿಬರುತ್ತಿದ್ದ ವೈವಿಧ್ಯಮಯ ಪ್ರಯೋಗಗಳು ಅವರನ್ನು ಅಸಾಮಾನ್ಯ ಗಾಯಕಿಯಾಗಿ ರೂಪಿಸಿದವು. ಎಸ್. ಜಾನಕಿಯವರು ತಾವು ಹಾಡಿದ ಹಾಡುಗಳಿಗೆ ಭಾವ-ಜೀವ ತುಂಬಿದರು. ಭಕ್ತಿಗಾನಗಳ ಮೂಲಕ ಕೋಟ್ಯಂತರ ಮಂದಿ ಆಸ್ತಿಕ ಬಂಧುಗಳ ಹೃದಯದಲ್ಲಿ ಭಕ್ತಿಭಾವಗಳನ್ನು ಸ್ಮರಣಗೊಳಿಸಿದವರು. ಅವರ ನಿರಂತರ ಅಭ್ಯಾಸ, ಕಲಿಯುವಿಕೆಯ ನಿಷ್ಠೆ, ಸರಳತೆ, ಕ್ರಿಯಾಶೀಲ ಜೀವನಶೈಲಿ, ದೈವಭಕ್ತಿ ಯುವಜನತೆಗೆ ಮಾದರಿ.ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಹಾಗೂ ಬಂಧುಮಿತ್ರರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಅಗಲಿದ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಎಂದು ಆ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇವೆಂದು ದತ್ತಾತ್ರೇಯ ಹೊಸಬಾಳೆ ಸರಕಾರ್ಯವಾಹ, ಡಾ। ಪಿ ವಾಮನ್ ಶೆಟ್ಟಿ ಕ್ಷೇತ್ರೀಯ ಸಂಘಚಾಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

[t4b-ticker]
error: Content is protected !!