UT ಖಾದರ್ ಸುಳ್ಯ ಅಭಿನಂದನಾ ಕಾರ್ಯಕ್ರಮ | ಬಿಜೆಪಿ ಪ್ರಮುಖರ ಉಪಸ್ಥಿತಿ ಬಗ್ಗೆ ಕಾರ್ಯಕರ್ತರ ಅಸಮಾಧಾನ

Picture of Savistara

Savistara

Bureau Report

ಸುಳ್ಯ :ರಾಜ್ಯ ಅರೋಗ್ಯ ಮಂತ್ರಿ ಯು.ಟಿ ಖಾದರ್ ಸಚಿವರಾದ ಹಿನ್ನಲೆಯಲ್ಲಿ ಸುಳ್ಯದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಬಗ್ಗೆ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ,ಸುಳ್ಯ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಿರುವರೆಂದು ಸನ್ಮಾನ ಕಾರ್ಯಕ್ರಮ ವೆಂದು ಪ್ರಶ್ನಿಸಿದ್ದಾರೆ, ಡಿಸಿಸಿ,ಕ್ಯಾಂಪ್ಕೋ ನಿರ್ದೇಶಕರು,ಸಹಕಾರಿ ಸಂಘ ಅಧ್ಯಕ್ಷರುಗಳು ಭಾಗವಹಿಸುವ ಔಚಿತ್ಯ ವಿತ್ತೆ? ಸುಳ್ಯದ ಶಾಸಕರಾಗಿ 5 ಬಾರಿ ಆಯ್ಕೆಯಾಗಿ ಕ್ಷೇತ್ರಕ್ಕೆ ಬಸ್ ನಿಲ್ದಾಣ,

ಡಿಫೋ,ಸರ್ಕಾರಿ ಆಸ್ಪತ್ರೆ ಮೆಲ್ದರ್ಜೆ, ಪದವಿ ಕಾಲೇಜ್ ಹೀಗೆ ಆನೇಕ ಅಭಿವೃದ್ಧಿ ಮಾಡಿದ ಅಂಗಾರ ರಿಗೆ ಪಕ್ಷತೀತವಾಗಿ ಎಷ್ಟು ಸನ್ಮಾನ ಮಾಡಿದ್ದೀರಿ? ನೀವು ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಆಗತ್ಯ,ಸಕ್ರಿಯತೆ ಬಗ್ಗೆ ಬಿಜೆಪಿ ಪ್ರಮುಖರೇ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ಜಿಲ್ಲಾ ಬಿಜೆಪಿ ಪ್ರಮುಖರ ಗಮನ ಸೆಳೆದಿದ್ದಾರೆ.

ನಾವೆಲ್ಲ ಎಸ್ ಆರ್ ಐ ಮನೆ ಸಂಪರ್ಕ ನೀವೆಲ್ಲ ಅಗತ್ಯವಿಲ್ಲದ ಕಾರ್ಯಕ್ರಮದಲ್ಲಿ ಸಕ್ರಿಯ ಇದು ಯಾಕೆ ವೆಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೆಲ ದಿನಗಳ ಹಿಂದೇ ಐವರ್ನಾಡು ಲ್ಲಿ ನಡೆದ ಗುದ್ದಲಿ ಪೂಜೆ ಮತ್ತು ಸಭಾಭವನ ಉದ್ಘಾಟನೆ ವಿಚಾರವಾಗಿ ಶಾಸಕಿ ಭಾಗೀರಥಿ ಮುರುಳ್ಯ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು ನೇರವಾಗಿ ಪ್ರಮುಖರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರೂ ಇದೀಗ ಸುಳ್ಯದಂತ ಬಿಜೆಪಿ ಭದ್ರಕೋಟೆಯಲ್ಲಿ ಪದೇ ಪದೇ ಈ ರೀತಿ ಘಟನೆ ನಡೆಯುತ್ತಿರುವುದು ಬಿಜೆಪಿ ನಾಯಕರಿಗೆ ಚಿಂತೆಗೀಡು ಮಾಡುವಂತಾಗಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!