ವಂದೇ ಮಾತರಂ ಬಳಿಕವೇ ರಾಷ್ಟ್ರಗೀತೆ: ಸರ್ಕಾರಿ ಸಮಾರಂಭಗಳಿಗೆ ಹೊಸ ಪ್ರೋಟೋಕಾಲ್

Picture of Savistara

Savistara

Bureau Report

ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯನ್ನು ಹಾಡುವ ಕ್ರಮದ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.ಇನ್ನು ಮುಂದೆ ಸರ್ಕಾರಿ ಸಮಾರಂಭಗಳಲ್ಲಿ ಮೊದಲು ‘ವಂದೇ ಮಾತರಂ’ ಹಾಡಿ ಅಥವಾ ನುಡಿಸಿ, ಬಳಿಕ ರಾಷ್ಟ್ರಗೀತೆಯಾದ ‘ಜನಗಣಮನ’ವನ್ನು ಹಾಡಬೇಕು ಅಥವಾ ಪ್ಲೇ ಮಾಡಬೇಕು ಎಂದು ಸೂಚಿಸಲಾಗಿದೆ.

ರಾಜ್ಯಗೀತೆಗೆ ಮೊದಲ ಆದ್ಯತೆ

ರಾಜ್ಯ ಸರ್ಕಾರಗಳ ಅಧಿಕೃತ ಕಾರ್ಯಕ್ರಮಗಳಲ್ಲಿ ಮೊದಲು ಆಯಾ ರಾಜ್ಯದ ಗೀತೆ, ನಂತರ ‘ವಂದೇ ಮಾತರಂ’ ಹಾಗೂ ಕೊನೆಯಲ್ಲಿ ಜನಗಣಮನ’ ಹಾಡುವ ಅಥವಾ ನುಡಿಸುವ ಕ್ರಮವನ್ನು ಅನುಸರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಕರ್ನಾಟಕದಲ್ಲಿ ‘ಜಯ ಭಾರತ ಜನನಿಯ ತನುಜಾತೆ’ ಬಳಿಕ ಉಳಿದ ಎರಡು ಗೀತೆಗಳನ್ನು ಹಾಡಬೇಕು.

ಸರಿಯಾದ ಸಾಹಿತ್ಯ, ಉಚ್ಚಾರಣೆ ಕಡ್ಡಾಯ

ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವಾಗ ಮೂಲ ಸಾಹಿತ್ಯ ಹಾಗೂ ಸರಿಯಾದ ಉಚ್ಚಾರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವಾಲಯ ಸೂಚಿಸಿದೆ. ಇದಕ್ಕಾಗಿ ಅಧಿಕೃತ ಸಾಹಿತ್ಯ ಮತ್ತು ಮಾರ್ಗಸೂಚಿಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!