ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಹೇಳಿಕೆಗೆ ಆಕ್ರೋಶ: ಹಿರಿಯ ನಾಯಕರ ವಿರುದ್ಧ ಮಾತಾಡಿದ ವಿಡಿಯೋ ವೈರಲ್​

Picture of Savistara

Savistara

Bureau Report

​ಸುಬ್ರಹ್ಮಣ್ಯ: ವಿಶ್ವಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸ ಮತ್ತು ಪಾವಿತ್ರ್ಯತೆಗೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಿರುವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ನಡೆ ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೇವಳದ ಅಧ್ಯಕ್ಷರಾಗಿರುವ ಶ್ರೀ ಹರೀಶ್ ಇಂಜಾಡಿ ತಮ್ಮ ರಾಜಕೀಯ ಪಕ್ಷದ ಹಿರಿಯ ನಾಯಕರ ವಿರುದ್ಧವೇ ಬಹಿರಂಗವಾಗಿ ಮಾತುಗಳನ್ನಾಡಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ​ಹಿರಿಯ ನಾಯಕರ ವಿರುದ್ಧ ಮಾತು ವಿಡಿಯೋ ವೈರಲ್​ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ದೇವಳದ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಮಾನಾಥ್ ರೈ ಹಾಗೂ ವಿಧಾನಸಭಾ ಸಭಾಪತಿ ಆಗಿದ್ದ ಪ್ರಸ್ತುತ ಅರೋಗ್ಯ ಸಚಿವರಾಗಿರುವ ಯು.ಟಿ. ಖಾದರ್ ಅವರ ಹೆಸರನ್ನು ಪ್ರಸ್ತಾಪಿಸುತ್ತಾ, “ಅವರ ಬಳಿ ಹೋಗುವಾಗ ಜಾಗ್ರತೆಯಿಂದ ಹೋಗಬೇಕು, ಅವರೊಳಗೆ ಸುಮಾರು ಉಂಟು…” ಎಂಬರ್ಥದಲ್ಲಿ ಮಾತನಾಡಿದ್ದಾರೆ. ತಮಗೆ ಅಧಿಕಾರ ನೀಡಿದ ಪಕ್ಷದ ಶಾಸಕರು, ಸಚಿವರು ಹಾಗೂ ಹಿರಿಯ ನಾಯಕರನ್ನೇ ಸಾರ್ವಜನಿಕವಾಗಿ ಈ ರೀತಿ ಮಾತಾಡುವ ಮೂಲಕ ​ಧಾರ್ಮಿಕ ಕೇಂದ್ರ ದ ಅಧ್ಯಕ್ಷರಾಗಿ ತಾವೊಬ್ಬರು ರಾಜಕೀಯ ಪಕ್ಷದ ನಾಯಕ ತೊರ್ಪಡಿಸಿದ್ದಾರೆಂದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.​ದೇವಸ್ಥಾನವೆಂಬುದು ಕೋಟ್ಯಂತರ ಭಕ್ತರ ಧಾರ್ಮಿಕ ಶ್ರದ್ಧೆಯ ಕೇಂದ್ರ ಆದರೆ ರಾಜಕೀಯ ಅಖಾಡವಾಗಬಾರದು. ಪ್ರಸ್ತುತ ದೇವಳದ ವ್ಯವಸ್ಥೆಯಲ್ಲಿ ಬದಲಾವಣೆಗೆ ಅವಕಾಶವಿದೆ ಮುಜರಾಯಿ ದೇವಸ್ಥಾನ ಅಧ್ಯಕ್ಷರಾಗಿದ್ದವರು ಪಕ್ಷದ ವ್ಯಾಪ್ತಿ ಮೀರಿ ಕಾರ್ಯ ನಿರ್ವಹಿಸಬೇಕೆಂಬ ನಿಯಮವಿದೆ ಆದರೆ ಸ್ವಪಕ್ಷದವರ ವಿರುದ್ಧವೇ ಮುಜುಗರ ತರುವಂತೆ ಮಾತನಾಡಿದ ಧೋರಣೆ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಕ್ಕೆ ಸುಬ್ರಮಣ್ಯದಲ್ಲಿ ​ದೇವಸ್ಥಾನದ ಆಡಳಿತದಲ್ಲಿ ಇಂದು ಸಾವಿರಾರು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿವೆ.​ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತರ ಮೂಲಸೌಕರ್ಯ, ಕುಡಿಯುವ ನೀರು, ಸ್ವಚ್ಛತೆ ಮತ್ತು ಸುರಕ್ಷತೆಯ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಒತ್ತು ನೀಡುವಂತೆ ಭಕ್ತರು ಒತ್ತಾಯಿಸಿದ್ದಾರೆ.

[t4b-ticker]
error: Content is protected !!