ಇರಾನ್ ದಾಳಿ ಆತಂಕ: ಕತಾ‌ರ್ ಉಡುಗೊರೆ ನೀಡಿದ್ದ ವಿಮಾನ ಏರದ ಡೊನಾಲ್ಡ್ ಟ್ರಂಪ್

Picture of Savistara

Savistara

Bureau Report

ವಾಷಿಂಗ್ಟನ್: ಟರ್ಕಿಯಲ್ಲಿ ನಡೆದ ನ್ಯಾಟೊ ಶೃಂಗಸಭೆ ಮುಗಿಸಿತಾಲ್ನಾಡಿಗೆ ವಾಪಸ್ ಆಗುವ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಕತಾ‌ರ್ ಉಡುಗೊರೆಯಾಗಿ ನೀಡಿದ್ದ ಹೊಸ ಜೆಟ್ ವಿಮಾನದ ಬದಲು ಹಳೆಯ ಏರ್ ಫೋರ್ಸ್ ಒನ್ ವಿಮಾನವನ್ನು ಏರಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೊಸ ಸಂಘರ್ಷ ಆರಂಭವಾಗಿರುವ ಬೆನ್ನಲ್ಲೇ ಈ ಅನಿರೀಕ್ಷಿತ ‘ಅದಲು-ಬದಲು’ ನಡೆದಿದೆ. ಆದರೆ, ಈ ದಿಢೀರ್ ಬದಲಾವಣೆ ಬಗ್ಗೆ ಶ್ವೇತಭವನ ಹೆಚ್ಚಿನ ಮಾಹಿತಿ ನೀಡಿಲ್ಲ.ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ 747-800 ಜೆಟ್ ವಿಮಾನವನ್ನು ತಮ್ಮ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸುವಂತೆ ಟ್ರಂಪ್‌ ಸೂಚಿಸಿದ್ದರು. ‘ಏರ್ ಪೋರ್ಸ್ ಒನ್’ ವಿಮಾನವನ್ನು ಹಸ್ತಾಂತರಿಸುವವರೆಗೆ ಈ ವಿಮಾನದಲ್ಲಿ ಹಾರಾಟ ನಡೆಸುವುದಾಗಿಯೂ ಟ್ರಂಪ್‌ ಹೇಳಿದ್ದರು. ಕತಾರ್‌ನಂತೆ ವಿಮಾನವನ್ನು ನಿರ್ಮಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದೂ ಹೊಗಳಿದ್ದರು.

ಸುಮಾರು 400 ಮಿಲಿಯನ್ ಅಮೆರಿಕ ಡಾಲರ್ ವ್ಯಯಿಸಿ ಹೊಸ ವಿಮಾನವನ್ನು ನವೀಕರಿಸಲಾಗಿತ್ತು. ಆದರೆ ವಿಮಾನದ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ತಜ್ಞರು ಅಪಸ್ವರ ಎತ್ತಿದ್ದರು. ಹಳೆಯ ಜೆಟ್ ವಿಮಾನಗಳಂತೆ(ಬೋಯಿಂಗ್ ವಿಸಿ-25ಎ) ಕತಾರ್‌ನ ನೀಡಿದ್ದ ಹೊಸ ವಿಮಾನ ಕ್ಷಿಪಣಿ ಪತ್ತೆ ಮತ್ತು ಪ್ರತಿತಂತ್ರ ವ್ಯವಸ್ಥೆಗಳನ್ನು ಹೊಂದಿಲ್ಲ ಎಂದು ಹೇಳಿದ್ದರು.

ಮಂಗಳವಾರ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲಿನ ದಾಳಿಯನ್ನು ಉಲ್ಲೇಖಿಸಿ ಇರಾನ್ ಮೇಲೆ ಅಮೆರಿಕದ ಹೊಸ ದಾಳಿ ನಡೆಸಿತ್ತು. ಅಮೆರಿಕ ದಾಳಿಗೆ ಪತ್ಯುತ್ತರವಾಗಿ ಕತಾರ್ ಮತ್ತು ಬಹರೇನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇರಾನ್‌ನೊಂದಿಗಿನ ಮಧ್ಯಂತರ ಒಪ್ಪಂದ ಮುರಿದು ಬಿದ್ದಿದೆ ಎಂದು ಟ್ರಂಪ್‌ ಹೇಳಿದ್ದರು.ಬುಧವಾರ ನ್ಯಾಟೊ ಶೃಂಗಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟ್ರಂಪ್, ಇರಾನ್‌ ಹಿಟ್‌ಸ್ಟ್‌ನಲ್ಲಿ ನಾನಿರುವುದಾಗಿಯೂ ಹೇಳಿದ್ದಾರೆ.ವಿಮಾನ ‘ಅದಲು-ಬದಲು’ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ಸುರಕ್ಷತೆ ಕಾರಣಗಳನ್ನು ಬೊಟ್ಟು ಮಾಡಿದ್ದಾರೆ.

ಕ್ಷಿಪಣಿ ಪ್ರತಿತಂತ್ರ ವ್ಯವಸ್ಥೆಗಳ ಕೊರತೆಯು ಜೆಟ್ ಅನ್ನು ಬದಲಾಯಿಸಲು ಕಾರಣವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ವಕ್ತಾರ ಸ್ಟೀವನ್ ಚೆಯುಂಗ್, ‘ಹೊಸ ಏರ್ ಫೋರ್ಸ್‌ ಒನ್ ಅತ್ಯಾಧುನಿಕ ವಿಮಾನವಾಗಿದ್ದು, ಅಧ್ಯಕ್ಷರು ಮತ್ತು ಅವರ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉನ್ನತ ಮಟ್ಟದ ಭದ್ರತಾ ಪ್ರೋಟೋಕಾಲ್‌ಗಳನ್ನು ಅಳವಡಿಸಲಾಗಿದೆ. ಟ್ರಂಪ್‌ ಅವರು ಇತ್ತೀಚೆಗೆ ಹೇಳಿದಂತೆ, ಅಮೆರಿಕದ ಅನೇಕ ಶತ್ರುಗಳು ಅವರ ಮೇಲೆ ಕಣ್ಣಿಟ್ಟಿದ್ದಾರೆ. ಆ ಬೆದರಿಕೆಗಳನ್ನು ಎದುರಿಸಲು ನಾವು ಸಿದ್ದರಾಗಿದ್ದೇವೆ’ ಎಂದು ಹೇಳಿದ್ದಾರೆ.ಕತಾರ್ ನೀಡಿದ ಐಷಾರಾಮಿ ಬೋಯಿಂಗ್ 747-800 ವಿಮಾನವು ಬುಧವಾರ ಮುಂಜಾನೆ ಟರ್ಕಿಯಿಂದ ನಿರ್ಗಮಿಸಿ, ಮಧ್ಯಾಹ್ನ ಆರ್‌ಎಎಫ್ ಮಿಲ್ಲೆನ್‌ಹಾಲ್‌ನಲ್ಲಿ ಇಳಿಯಿತು ಎಂದು ಫೈಟ್ ಟ್ರ್ಯಾಕರ್‌ಗಳು ತೋರಿಸಿವೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!