ದೇಗುಲ ಹುಂಡಿಗೆ ಸಿಸಿ ಕ್ಯಾಮೆರಾ | ಅಯೋಧ್ಯೆ ರಾಮಮಂದಿರ ಕಾಣಿಕೆ ಲೂಟಿ ಬೆನ್ನಲ್ಲೆ ರಾಜ್ಯದಲ್ಲೂ ಕಣ್ಣಾವಳು

Picture of Savistara

Savistara

Bureau Report

ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿಯಂತಹ ಘಟನೆ ರಾಜ್ಯದಲ್ಲಿಯೂ ಮರುಕಳಿಸದಿರಲು ಮುಂಜಾಗ್ರತೆ ಕ್ರಮವಾಗಿ ಮುಜರಾಯಿ ಇಲಾಖೆಯ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಈ ಕುರಿತು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಗುರುವಾರ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರೇ ಈ ವಿಷಯ ತಿಳಿಸಿದರು.ಸೇರಿದಂತೆ “ಸಿಸಿ ಕ್ಯಾಮೆರಾಗಳನ್ನು ಕಾಣಿಕೆ ಹುಂಡಿ ಇರುವ ಸ್ಥಳವೂ ದೇವಸ್ಥಾನದ ಸ್ಥಾನದ ಒಳಾಂಗಣದಲ್ಲಿ ಎಲ್ಲೆಡೆ ಅಳವಡಿಸಬೇಕು. ಈ ಕ್ಯಾಮೆರಾಗಳು ದಿನದ 24 ಗಂಟೆಯೂ

ಕಾರ್ಯನಿರ್ವಹಿಸಬೇಕು. ಹುಂಡಿಯ ಬೀಗ ಎಣಿಕೆ ತೆಗೆಯುವುದರಿಂದ ಮೊದಲ್ಗೊಂಡು ಕಾಣಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಕ್ಯಾಮೆರಾ ನಿಗಾದಲ್ಲೇ ಮಾಡಬೇಕು. ಈ ಕುರಿತು ಮುಜರಾಯಿ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ,” ಎಂದು ಹೇಳಿದರು.ಸಿಸಿಟಿವಿ ದೃಶ್ಯಾವಳಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗಳು ಹಾಗೂ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿರುವಂತೆ ವ್ಯವಸ್ಥೆ ಮಾಡಲಾಗು ವುದು,” ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.“ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ದೇಣಿಗೆಯಾಗಿ ನೀಡಿದ ಹಣ, ಚಿನ್ನ, ಬೆಳ್ಳಿ ಇತ್ಯಾದಿಗಳ ದುರ್ಬಳಕೆ ಪ್ರಕರಣದಿಂದ ನಮ್ಮೆಲ್ಲರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಇದೊಂದು ಅವಮಾನಕರ ವಿಷಯವಾಗಿದೆ. ಕರ್ನಾಟಕದಲ್ಲಿ ಇಂತಹ ಘಟನೆ ನಡೆಯಬಾರದೆಂಬ ಉದ್ದೇಶದಿಂದಲೇ ಮುಜರಾಯಿ ದೇವಾಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ದೇವಸ್ಥಾನಗಳ ಹುಂಡಿ ಹಣದ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ,” ಎಂದರು.

[t4b-ticker]
error: Content is protected !!