ಇರಾನ್ ವಿರುದ್ಧ ಮೂರನೇ ಸುತ್ತಿನ ದಾಳಿ ಆರಂಭಿಸಿದ ಅಮೆರಿಕ

Picture of Savistara

Savistara

Bureau Report

ವಾಷಿಂಗ್ಟನ್, ಜು. 12: ಹಾರ್ಮುಝ್ ಜಲಸಂಧಿಯಲ್ಲಿ ಸೈಪ್ರಸ್ ಧ್ವಜ ಹೊತ್ತ ಕಂಟೇನರ್ ಹಡಗಿನ ಮೇಲೆ ಇರಾನ್‌ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದಾಳಿ ನಡೆಸಿದೆ ಎಂದು ಆರೋಪಿಸಿರುವ ಅಮೆರಿಕ, ಅದಕ್ಕೆ ಪ್ರತಿಯಾಗಿ ಇರಾನ್ ವಿರುದ್ಧ ಮೂರನೇ ಸುತ್ತಿನ ದಾಳಿಯನ್ನು ಆರಂಭಿಸಿರುವುದಾಗಿ ಅಮೆರಿಕ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ ಎಂದು Aljazeera ವರದಿ ಮಾಡಿದೆ.IRGC ನಡೆಸಿದ ದಾಳಿಯಿಂದ ಕಂಟೇನರ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಂಜಿನ್ ಗೆ ಹಾನಿಯಾಗಿದೆ. ಇದರಿಂದ ಹಡಗು ತನ್ನ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗಿಲ್ಲ. ಘಟನೆಯಲ್ಲಿ ಹಡಗಿನ ಒಬ್ಬ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು CENTCOM ಹೇಳಿದೆ.

ವಾಣಿಜ್ಯ ಹಡಗುಗಳ ಮೇಲಿನ ಹಿಂದಿನ ದಾಳಿಗಳಿಗೆ ಹೊಣೆಗಾರಿಕೆಯನ್ನು ಒಪ್ಪಿಕೊಂಡ ನಂತರ, 2026ರ ಜೂನ್ 16ರಂದು ಸಹಿ ಮಾಡಲಾದ ಶಾಂತಿ ಒಪ್ಪಂದದ ಬದ್ಧತೆಯನ್ನು ಪ್ರದರ್ಶಿಸಲು ಇರಾನ್ ಗೆ ಮತ್ತೊಂದು ಅವಕಾಶ ನೀಡಲಾಗಿತ್ತು. ಆದರೆ, ಆ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಇರಾನ್ ಮತ್ತೆ ವಿಫಲವಾಗಿದೆ ಎಂದು CENTCOM ಆರೋಪಿಸಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ವಾಣಿಜ್ಯ ಹಡಗುಗಳು ಸಿಬ್ಬಂದಿ ಹಾಗೂ ಹಾರ್ಮುಝ್ ಜಲಸಂಧಿಯಲ್ಲಿ ಮುಕ್ತವಾಗಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಕ್ರಮವನ್ನು ಅಮೆರಿಕ ಮುಂದುವರಿಸಿದೆ. ಈ ಮೂಲಕ ಇರಾನ್ ಭಾರೀ ಬೆಲೆ ತೆರಲಿದೆ ಎಂದು CENTCOM ತಿಳಿಸಿದೆ.

[t4b-ticker]
error: Content is protected !!