ಮಂಗಳೂರು: ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಯ ನಿಲುವು ಸರಿಯಾಗಿದ್ದು ಧಾರ್ಮಿಕ ಕೇಂದ್ರ ಬಗ್ಗೆ ಶ್ರದ್ಧೆ ನಂಬಿಕೆಯನ್ನಿಟ್ಟುಕೊಂಡಿದ್ದು ಹಾಗಾಗಿ ಕ್ಷೇತ್ರಕ್ಕೆ ಅಪಚಾರವಾಗಬಾರದು ನಮ್ಮ ನಿಲುವಾಗಿದೆ,ಈ ಹಿಂದೆ ಎಸ್ ಐಟಿ ತನಿಖೆ ಆದೇಶ ನೀಡಿದಾಗ ಬಿಜೆಪಿ ಮೊದಲಾಗಿ ಸ್ವಾಗತ ಮಾಡಿದ್ದು ಇದೀಗ ತನಿಖಾ ಹಂತದಲ್ಲಿದೆ ಈ ಸಂದರ್ಭದಲ್ಲಿ ಆ ವಿಚಾರ ಬಗ್ಗೆ ಹೇಳಿಕೆ ನೀಡುವುದು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಸರಿಯಲ್ಲವೆಂದರು.ಕಲ್ಲಡ್ಕ ಪ್ರಭಾಕರ ಭಟ್ ನಿಮ್ಮ ಗುರುಗಳು ಪ್ರಶ್ನೆಗೆ ಉತ್ತರಿಸಿದ ಸಂಸದರು ರಾಷ್ಟ್ರೀಯ ವಿಚಾರಧಾರೆ ಯಲ್ಲಿ ಬೆಳೆದು ಬಂದವರು ನಾವು ಹಾಗಾಗಿ ನಮಗೆಲ್ಲ ಭಗವಧ್ವಜ ಗುರು ಸಮಾನವೆಂದರು. ಸೌಜನ್ಯ ವಿಚಾರವಾಗಿ ಮರು ತನಿಖೆಗೆ ಈ ಹಿಂದೆ ಶಾಸಕ ಹರೀಶ್ ಪೂಂಜಾ ಸದನದಲ್ಲಿ ಒತ್ತಾಯ ಮಾಡಿದ್ದರು ಹಾಗಾಗಿ ನಮ್ಮ ಒತ್ತಾಯ ಕೂಡ ಅದೇ ಆಗಿದೆಯೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಸತೀಶ್ ಪ್ರಭು, ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ಎಸ್ಐಟಿ ತನಿಖಾ ಹಂತದಲ್ಲಿರುವಾಗ ಈ ಕ್ಷಣದಲ್ಲಿ ಪ್ರತಿಕ್ರಿಯಿಸುವುದು ಸರಿಯಲ್ಲ | ಸೌಜನ್ಯ ವಿಚಾರ ಮರು ತನಿಖೆಯಾಗಲಿ ಸಂಸದ ಕ್ಯಾ ಚೌಟ
Savistara
Bureau Report
[t4b-ticker]











































