ಶಿಕಾರಿಪುರದ “ರಾಷ್ಟ್ರೋತ್ಥಾನ ಬಳಗ” ವತಿಯಿಂದ “ರಾಷ್ಟ್ರೋತ್ಥಾನ ಪರಿಷತ್” ಸಹಯೋಗದಲ್ಲಿ ಪಟ್ಟಣದ ಮಂಗಳ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ದೇಶದ ಮೇಲೆ ಕಾಂಗ್ರೆಸ್

ನೇತೃತ್ವದ ಇಂದಿರಾ ಗಾಂಧಿ ಸರ್ಕಾರ ತನ್ನ ಸ್ವಾರ್ಥ ಸಾಧನೆಗಾಗಿ ಸಂವಿಧಾನದ ಬುಡಕ್ಕೆ ಕೊಡಲಿ ಪೆಟ್ಟು ನೀಡಿ ಜಾರಿಗೊಳಿಸಿದ್ಧ ಕರಾಳ ತುರ್ತು ಪರಿಸ್ಥಿತಿಗೆ 50 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ತುರ್ತು ಪರಿಸ್ಥಿತಿಯ ಘಟನಾವಳಿಯ

ಇತಿಹಾಸವನ್ನು ಕಣ್ಣಿಗೆ ಕಟ್ಟಿಕೊಡಲು ಮರು ಮುದ್ರಿತ “ಭುಗಿಲು” ಹಾಗೂ “ಕಾಂಗ್ರೆಸ್ ಕರಾಳ ಕಥೆ” ಬಹು ವಿಶೇಷ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಭಾರತಾಂಬೆ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಲಾಯಿತು.

ಈ ಸಂದರ್ಭದಲ್ಲಿ ಗಣ್ಯರಾದ ಶ್ರೀ ಪ್ರೇಮ್ ಕುಮಾರ್ ಅವರು, ಶ್ರೀ ದು.ಗು. ಲಕ್ಷ್ಮಣ್ ಅವರು, ಶ್ರೀ ಅಬ್ಬಯ್ಯ ಮಠ ಅವರು, ಶ್ರೀ ನಾರಾಯಣ ಅವರು,

ಶ್ರೀ ವಿಶ್ವನಾಥ್ ಅವರು, ಶ್ರೀ ಗುರುಮೂರ್ತಿ ಅವರು, ಶ್ರೀ ಪದ್ಧಣ್ಣ ಅವರು ಉಪಸ್ಥಿತರಿದ್ದರು.












































