ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಸೂಕ್ತನಾ? ಪ್ರತಾಪ್ ಸಿಂಹ ಪ್ರಶ್ನೆ

Picture of Savistara

Savistara

Bureau Report

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ನಿಯೋಜನೆ ವಿಚಾರವಾಗಿ ಮಾತನಾಡಿದ್ದಾರೆ.

ಮೈಸೂರು : ಧಾರ್ಮಿಕ ಸಂಕೇತವಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಸೂಕ್ತ ವ್ಯಕ್ತಿ ಆಗುತ್ತಾರಾ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ನಿಯೋಜನೆ ವಿಚಾರವಾಗಿ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಲಾ ಬಿಟ್ಟರೆ ಬೇರೆ ಯಾರೂ ದೇವರಿಲ್ಲ ಎನ್ನುತ್ತದೆ ಇಸ್ಲಾಂ. ಹಾಗಾದರೆ ಬಾನು ಮುಷ್ತಾಕ್‌ ಹೇಗೆ ತಾಯಿ ಚಾಮುಂಡಿಯನ್ನು ದೇವರು ಎಂದು ಒಪ್ಪಿಕೊಳ್ಳುತ್ತಾರೆ. ಅವರ ಧರ್ಮ ಅವರ ಮಾತನ್ನು ಒಪ್ಪುತ್ತಾ?. ಕಾಂತಾರದ ರಿಷಬ್ ಶೆಟ್ಟರಿಗೆ ರಾಷ್ಟ್ರೀಯ ಪ್ರಶಸ್ತಿ ಬಂತು. ಅವರನ್ನು ದಸರಾ ಉದ್ಘಾಟನೆಗೆ ಕರೆಯುತ್ತೀರಾ? ಪ್ರಶಸ್ತಿ ಬಂದವರನ್ನೆಲ್ಲಾ ದಸರಾ ಉದ್ಘಾಟನೆಗೆ ಕರೆಯಲು ಆಗುತ್ತಾ? ಕಾಂತಾರ ಹಿಂದೂ ಧರ್ಮಕ್ಕೆ ಪೂರಕ ಸಿನಿಮಾ. ಅದರ ನಿರ್ದೇಶಕ, ನಟ ರಿಷಬ್. ಅವರನ್ನು ಕರೆಯುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಬಾನು ಮುಷ್ತಾಕ್​​ಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದ್ಯಾ? ಬಾನು ಮುಷ್ತಾಕ್ ಚಾಮುಂಡಿ ಭಕ್ತೆ ಎಂದು ಹೇಳಿದ್ದಾರಾ? ಭಕ್ತಿ ಭಾವದಿಂದ ಮಾಡುವ ಆಚರಣೆ ದಸರಾವಾಗಿದೆ. ತಾಯಿ ಚಾಮುಂಡಿ ಮೇಲೆ ಭಕ್ತಿ ತೋರ್ಪಡಿಸುವ ಹಬ್ಬ ಇದು. ಧಾರ್ಮಿಕ ಸಂಕೇತವಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ ವ್ಯಕ್ತಿ ಆಗುತ್ತಾರಾ? ಇದು ನನ್ನ ಪ್ರಶ್ನೆ ಎಂದಿದ್ದಾರೆ.ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್​​ರನ್ನು ಘೋಷಿಸಿ. ಯಾರ ತಕಾರರೂ ಇಲ್ಲ. ಭಾನು ಮುಷ್ತಾಕ್​​ ಬಗ್ಗೆ ನಮಗೆ ಹೆಮ್ಮೆ ಇದೆ. ಮುಸ್ಲಿಂಮರು ಎನ್ನುವ ಕಾರಣಕ್ಕೆ ನಾನು ಅಪಸ್ವರ ಎತ್ತುತ್ತಿಲ್ಲ. ಬಾನು ಮುಷ್ತಾಕ್ ಅವರ ಸಾಹಿತ್ಯದ ಬಗ್ಗೆ ಗೌರವವಿದೆ. ದಸರಾ ಇದು ಜಾತ್ಯತೀತತೆಯ ಪ್ರತೀಕ ಅಲ್ಲ. ಇದು ಧಾರ್ಮಿಕ ಆಚರಣೆ ಎಂದು ಹೇಳಿದರು.

ದಸರಾ ಶೇ.100 ರಷ್ಟು ಧಾರ್ಮಿಕ ಆಚರಣೆ. ದುರ್ಗಾ ಪೂಜೆ, ನವರಾತ್ರಿ ಉತ್ಸವ ಇರುತ್ತದೆ. ಇದು ಧಾರ್ಮಿಕ ಹಬ್ಬ. ಯದುವಂಶ ಆರಂಭಿಸಿದ ಧಾರ್ಮಿಕ ಹಬ್ಬ ಇದು. ಇದು ಜಾತ್ಯಾತೀತ ಪ್ರತೀಕ ಅಲ್ಲ. ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.ಬರಗೂರು ರಾಮಚಂದ್ರಪ್ಪ ದಸರಾ ಉದ್ಘಾಟನೆಗೆ ಬಂದು ನಾನು ದೀಪ ಹಚ್ಚುವುದಿಲ್ಲ, ದೇವಸ್ಥಾನಕ್ಕೆ ಹೋಗಲ್ಲ ಅಂದರು. ಇದು ದಸರಾಗೆ ಮಾಡಿದ ಅಪಮಾನ ಅಲ್ವಾ? ಹಿಂದೂ ಧಾರ್ಮಿಕ ನಂಬಿಕೆ ವಿರೋಧಿಗಳನ್ನೇ ಯಾಕೆ ಸಿದ್ದರಾಮಯ್ಯ ಕರೆಯುತ್ತಾರೆ? ಮಹಾರಾಜರ ಮೇಲಿನ ದ್ವೇಷವನ್ನು ಸಿದ್ದರಾಮಯ್ಯ ಬಗೆ ಬಗೆಯಾಗಿ ತೀರಿಸಿಕೊಳ್ಳುತ್ತಿದ್ದಾರೆ. ಮಹಾರಾಜರ ಪರಂಪರೆಯನ್ನು ಸಿದ್ದರಾಮಯ್ಯ ಹೀಗೆ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸಲಿ: ಕಳೆದ ಒಂದು ತಿಂಗಳಿಂದ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಸ್ಥಳದ್ದೇ ಚರ್ಚೆ ನಡೆಯುತ್ತಿದೆ. ಆದರೆ ಒಂದೂ ಕಡೆಯೂ ಸಣ್ಣ ಮೂಳೆಯೂ ಸಿಗಲಿಲ್ಲ. ಇದೆಲ್ಲ ವ್ಯವಸ್ಥಿತ ಪಿತೂರಿ ಅಂತ ಸ್ಪಷ್ಟವಾಗುತ್ತಿದೆ ಎಂದರು.

ಅನಾಮಿಕ ವ್ಯಕ್ತಿನೇ ತನ್ನನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಒಪ್ಪಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆದ ಘಟನೆ ನೋಡಿದಾಗ ದೊಡ್ಡ ಪಿತೂರಿ ಮಾಡಿದ್ದಾರೆ ಅನಿಸುತ್ತದೆ. ಇದಕ್ಕಾಗಿ ಪ್ರಕರಣದ ತನಿಖೆಯನ್ನು ಎನ್ಐಎಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.ಎಸ್‌ಡಿಪಿಐಗೂ ಹಾಗೂ ಧರ್ಮಸ್ಥಳಕ್ಕೂ ಏನು ಸಂಬಂಧ? ಯಾಕಾಗಿ ಅವರು ಇಷ್ಟೆಲ್ಲ ಮಾಡುತ್ತಿದ್ದಾರೆ. ಒಬ್ಬೊಬ್ಬರೂ ಕ್ರಮೇಣ ಬೆತ್ತಲಾಗುತ್ತಿದ್ದಾರೆ. ಹಾಗಾಗಿ ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಒತ್ತಾಯಿಸಿದರು.ಆನ್​ಲೈನ್ ಗೇಮ್​​ನಿಂದ ರಾಜ್ಯದ ಆದಾಯಕ್ಕೆ ನಷ್ಟ ಎಂಬ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರ ಮಕ್ಕಳು ಹಾಳಾದರೆ ಅವರಿಗೆ ಏನು? ಅವರಿಗೆ ಆದಾಯ ಬೇಕು ಅಷ್ಟೇ. ಡ್ರೀಮ್ ಲೆವನ್ ರೂಪದ ಎಲ್ಲಾ ಗೇಮ್ ಬ್ಯಾನ್ ಮಾಡಬೇಕು ಎಂದು ಹೇಳಿದರು.

ಪ್ರಿಯಾಂಕ್​ ಖರ್ಗೆ ಬಾಯಲ್ಲಿ ದಲಿತ ಎನ್ನುತ್ತಾ ಬೆಂಗಳೂರಿನ ಸದಾಶಿವನಗರದಲ್ಲಿ ಅರಾಮಾಗಿ ಇದ್ದಾರೆ. ಅವರಿಗೆ ಬಡ ಕುಟುಂಬದ ಸ್ಥಿತಿ ಏನು ಗೊತ್ತು? ಆದಾಯ ಹೆಚ್ಚು ಬೇಕಾದರೆ ವೇಶ್ಯಾವಾಟಿಕೆಯನ್ನು ಕಾನೂನು ಬದ್ಧ ಮಾಡಲಿ ಬಿಡಿ. ಅದರಿಂದಲೂ ಹೆಚ್ಚು ಆದಾಯ ಬರುತ್ತೆ ಎಂದು ಪ್ರತಾಪ್​ ಸಿಂಹ ಕಿಡಿಕಾರಿದರು.ಆರ್​​ಎಸ್​​ಎಸ್ ಗಾಳಿ ತಮ್ಮತ್ತ ಸುಳಿಯಬಾರದು ಎಂಬ ಸಚಿವ ಖರ್ಗೆ ಟ್ವಿಟ್‌ಗೆ ತಿರುಗೇಟು ನೀಡಿದ ಪ್ರತಾಪ್‌ಸಿಂಹ, ಸ್ಕೂಲ್, ಕಾಲೇಜ್ ಮೆಟ್ಟಿಲು ದಾಟದ ಪ್ರಿಯಾಂಕ್​ ಖರ್ಗೆಗೆ ಆರ್‌ಎಸ್​​ಎಸ್ ಬಗ್ಗೆ ಏನು ಗೊತ್ತು? ದೇಶ ಕಟ್ಟಿದ ನೂರಾರು ನಾಯಕರನ್ನು ಸೃಷ್ಟಿ ಮಾಡಿದ್ದು ಆರ್​​ಎಸ್‌ಎಸ್ ಎಂದರು.ದೇಶ ಆಳುವ ನಾಯಕರಿಗೆ ಸಂಸ್ಕಾರ, ಜ್ಞಾನ ತುಂಬಿದ್ದು ಆರ್‌ಎಸ್ಎಸ್​​. ನೆಹರು ದೇಶಕ್ಕೆ ಕೊಡುಗೆ ನೀಡುವುದಕ್ಕಿಂತ ನಷ್ಟ ಮಾಡಿದ್ದೇ ಹೆಚ್ಚು. ಪ್ರಿಯಾಂಕ್​ ಖರ್ಗೆಗೆ ಕನಿಷ್ಠ ಜ್ಞಾನವೂ ಇಲ್ಲ. ಮೈಸೂರು ಮಹಾರಾಜರನ್ನು ನಾವು ದಿನ ಸ್ಮರಿಸುತ್ತೇವೆ. ಕಲಬುರಗಿ ಆಳಿದ ಸುಲ್ತಾನರು, ನವಾಬರು ಕೊಟ್ಟ ಕೊಡುಗೆ ಏನು?. ಸುಲ್ತಾನ್, ನವಾಬರ ನಂತರ ಬಂದ ಸುಲ್ತಾನ್, ನವಾಬರೇ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್​ ಖರ್ಗೆ ಎಂದು ವ್ಯಂಗ್ಯವಾಡಿದರು.

ಮೂಗು ಹಿಡಿದುಕೊಂಡು ವಿಷ ಗಾಳಿ ಕುಡಿಯುತ್ತಾ ಕಲಬುರಗಿಯಲ್ಲಿ ಓಡಾಡಬೇಕು. ಆ ಪರಿಸ್ಥಿತಿ ಸೃಷ್ಟಿ ಮಾಡಿದ್ದು ಇವತ್ತಿನ ನವಾಬರು, ಸುಲ್ತಾನರಾದ ಖರ್ಗೆ ಫ್ಯಾಮಿಲಿಯವರು. ಪ್ರಿಯಾಂಕ್​ ಖರ್ಗೆ, ಸಂತೋಷ್ ಲಾಡ್ ಬರೀ ಔಟ್ ಆಫ್ ಸಿಲೆಬಸ್ ಮಾತನಾಡುತ್ತಾರೆ. ಕಾಗೆ ಥರ ಯಾವಾಗಲೂ ಬರೀ ಕಾಕಾ ಎನ್ನುವುದಷ್ಟೇ ಪ್ರಿಯಾಂಕ್​ ಖರ್ಗೆ, ಸಂತೋಷ್ ಲಾಡ್ ಕೆಲಸ ಎಂದು ಲೇವಡಿ ಮಾಡಿದರು.

[t4b-ticker]
error: Content is protected !!