ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಬಾರದೆಂದು ಸಂವಿಧಾನದಲ್ಲಿದೆಯೇ? : ಸಚಿವ ಸಂತೋಷ ಲಾಡ್

Picture of Savistara

Savistara

Bureau Report

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನ ಕರೆಯಬಾರದೆಂದು ಸಂವಿಧಾನದಲ್ಲಿದೆಯೇ ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.

ಬಳ್ಳಾರಿ: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಬಾರದೆಂದು ಸಂವಿಧಾನದಲ್ಲಿ ಇದೆಯೇ?. ಎಲ್ಲದಕ್ಕೂ ಆಕ್ಷೇಪ ಮಾಡ್ತಾ ಹೋದ್ರೆ ಏನು ಮಾಡಬೇಕು? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಚಿವ ಸಂತೋಷ ಲಾಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಂಡೂರಿನಲ್ಲಿ ನುಲಿಯ ಚಂದಯ್ಯನವರ 918ನೇ ಜಯಂತಿಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಅತೀ ಹೆಚ್ಚು ದೇಣಿಗೆ ನೀಡಿದವರು ಯಾರು? ಅಜೀಂ ಪ್ರೇಮ್​​ ಜಿ ಫೌಂಡೇಶನ್​​ನಿಂದ ಎರಡುವರೆ ಲಕ್ಷ ಕೋಟಿ ಹಣ ನೀಡಿದ್ದಾರೆ. ಅವರು ಯಾವ ಸಮಾಜದವರು. ಬಡವರ ಅನುಕೂಲಕ್ಕೆ ಹಣ ಕೊಟ್ಟವರು ಯಾವ ಸಮಾಜದವರು. ಸಂವಿಧಾನದಲ್ಲಿ ಯಾರನ್ನೂ ಮಾಡಬಾರದು ಎಂದಿಲ್ಲ, ಸರ್ಕಾರದ ತೀರ್ಮಾನವನ್ನು ಎಲ್ಲರೂ ಸ್ವಾಗತ ಮಾಡಬೇಕು. ಈ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿಗಳನ್ನು ಉದ್ಘಾಟನೆಗೆ ಕರೆಸುತ್ತಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅಬ್ದುಲ್ ಕಾಲಂ ರಾಷ್ಟ್ರಪತಿಯಾಗಿದ್ದಾಗ ನಾವು ವಿರೋಧ ಮಾಡಿದ್ವಾ? ಕಲಾಂ ಹಿಂದೂ ವಿರೋಧಿಯಲ್ಲ ಎಂದು ಸಮರ್ಥನೆ ಮಾಡ್ತಾರೆ. ಬಾನು ಮುಷ್ತಾಕ್ ಹೇಗೆ ಹಿಂದೂ ವಿರೋಧಿಯಾಗ್ತಾರೆ? ಎಂದರು.ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗಿದ್ರೆನೀವೇಕೆ ಪಾಕಿಸ್ತಾನಕ್ಕೆ ಕೇಕ್ ತಿನ್ನೋಕೆ ಹೋಗ್ತೀರಾ? ಇದರ ಬಗ್ಗೆ ಮಾತನಾಡುತ್ತಾರಾ? ಎಲ್ಲದಕ್ಕೂ ಟೀಕೆ ಮಾಡುತ್ತಿದ್ದರೆ ಇದಕ್ಕೆ ಏನು ಅರ್ಥ ಇದೆ ಎಂದು ಪ್ರಶ್ನಿಸಿದರು.ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆರ್​​ಎಸ್ಎಸ್ ಹಾಡು ಹಾಡಿರುವುದರ ಬಗ್ಗೆ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ. ಧರ್ಮಸ್ಥಳ ಪ್ರಕರಣದ ಕುರಿತು ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಪ್ರದರ್ಶನ ಮಾಡ್ತಿದೆ. ಮೊದಲು ಎಸ್ಐಟಿ ಸ್ವಾಗತ ಎಂದ್ರು, ಈಗ ಧಾರ್ಮಿಕ ಸ್ಥಳಕ್ಕೆ ಅಪಮಾನ ಎನ್ನುತ್ತಿದ್ದಾರೆ. ಎಸ್ಐಟಿ ಮಾಡಿದಾಗ ಆತಂಕವಿತ್ತು, ಒಂದಷ್ಟು ಅನುಮಾನದಿಂದಲೇ ನೋಡುವಂತಿತ್ತು. ಕಾನೂನಾತ್ಮಕವಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಶವ ಸಿಗದೇ ಇದ್ದಾಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ್ರು. ಶವ ಸಿಕ್ಕಿದ್ರೆ ಬಿಜೆಪಿಯವರು ಏನು ಮಾಡ್ತಿದ್ರು?. ಎಸ್ಐಟಿಯನ್ನು ಮೊದಲೇ ವಿರೋಧ ಮಾಡಬೇಕಿತ್ತು. ಶವ ಸಿಗದೇ ಹೋದಾಗ ರಾಜಕಾರಣ ಪ್ರಾರಂಭಿಸಿದರು ಎಂದರು.ಪಹಲ್ಗಾಮ್​ನಲ್ಲಿ ಇನ್ನೂ ಆರು ಜನರ ಶವ ಸಿಕ್ಕಿಲ್ಲ, ಅದರ ಬಗ್ಗೆ ಮಾತನಾಡಲ್ಲ. ಷಡ್ಯಂತ್ರ ಇರೋದಕ್ಕೆ ತನಿಖೆ ಮಾಡಲಾಯಿತು. ಧರ್ಮಸ್ಥಳಕ್ಕೆ ಒಳ್ಳೆಯ ಹೆಸರು ಬಂತು. ಕೋರ್ಟ್ ಕೂಡ ತನಿಖೆ ಮಾಡಲು ಸೂಚನೆ ನೀಡಿತ್ತು. ಸ್ಥಳೀಯ ಪೊಲೀಸರಿಗೆ ಕೊಟ್ರೇ ಸಮರ್ಥರಲ್ಲ ಅಂತೀರಾ, ಎಸ್ಐಟಿ ಮಾಡಿದ್ರೆ ಸಿಬಿಐಗೆ ಕೊಡಿ ಅಂತೀರಾ. ನಾನು ಸರ್ಕಾರದ ನಿರ್ಧಾರದ ಪರ ಇದ್ದೇನೆ. ಎಸ್ಐಟಿ ವಿಚಾರಣೆಯಲ್ಲಿ ಎಲ್ಲರೂ ಸಿಕ್ತಾರೆ. ಕಾನೂನಾತ್ಮಕವಾಗಿ ಖಂಡಿತ ಕ್ರಮ ಆಗಲಿದೆ ಎಂದಿದ್ದಾರೆ.ಅಲೆಮಾರಿ ಜನಾಂಗದವರ ಪರ ನಾನಿದ್ದೇನೆ. ಸಮುದಾಯಕ್ಕೆ ಬೇಕಾದ ಅನುಕೂಲ ಮಾಡಿಕೊಡುವೆ. ಸಮುದಾಯಕ್ಕೆ ಸ್ವಾಮಿಗಳ ನೇಮಕ ಮಾಡುವ ಬೇಡಿಕೆ ಇದೆ. ಅದನ್ನು ಮಾಡಲು ಬೇಕಾದ ವ್ಯವಸ್ಥೆ ಮಾಡುವೆ ಎಂದರು. ಹಿಂದೂ ಹಿಂದೂ ಎಂದವರು ಹಿಂದೂ ಮಹಿಳೆಯರಿಗೆ ಅಧಿಕಾರ ಕೊಟ್ಟಿಲ್ಲ ಎಂದು ಸಚಿವ ಸಂತೋಷ ಲಾಡ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

[t4b-ticker]
error: Content is protected !!