ಸುಳ್ಯದಲ್ಲಿ ಆ.25 ರಂದು ನಡೆದ “ಕಾಪಿಕೊ” ಕಾರ್ಯಗಾರ | ಕಾಫಿ ಬೆಳೆ ಉತ್ತೇಜಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬ್ರಿಜೇಶ್ ಚೌಟ

Picture of Savistara

Savistara

Bureau Report

ಅಡಿಕೆ ಬೆಳೆಗೆ ಹಳದಿ ರೋಗ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಬೆಳೆಗೆ ಪ್ರೋತ್ಸಾಹ ನೀಡಲು “ಕಾಪಿಕೊ ಕಾರ್ಯಗಾರ” ಹಮ್ಮಿಕೊಳ್ಳಲಾಗಿದ್ದು, ಆ.25 ರಂದು ಸುಳ್ಯದ ಸಿಎ ಬ್ಯಾಂಕ್ ನ ಎ.ಎಸ್.ವಿಜಯಕುಮಾರ್ ಸಭಾಭವನದಲ್ಲಿ ಅಯೋಜನೆಗೊಂಡ ಕಾರ್ಯಕ್ರಮವು ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ, ಕಾಫಿ ಮಂಡಳಿ ಡೆಪ್ಯೂಟಿ ಡೈರೆಕ್ಟರ್ ಡಾ.ವಿ ಚಂದ್ರಶೇಖ‌ರ್, ತೋಟಗಾರಿಕೆ ಮಂಗಳೂರು ಇದರ ಉಪನಿರ್ದೇಶಕ ಮಂಜುನಾಥ್, ನಬಾರ್ಡ್ ಡಿಡಿಎಂ ಸಂಗೀತ ಕರ್ತ, ಬಿಜೆಪಿ ಸುಳ್ಯ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಸೆವೆನ್ ಬೀನ್ ಟೀಮ್ ಸಕಲೇಶಪುರ ಇದರ ಅಧ್ಯಕ್ಷ ಡಾ.ಪ್ರದೀಪ್, ಸೆವೆನ್ ಬೀನ್ ಟೀಮ್ ಸಕಲೇಶಪುರ ಇದರ ಚಯರ್ ಮ್ಯಾನ್ ಡಾ.ಧರ್ಮರಾಜ್, ಯಾರಾ ಫರ್ಟಿಲೈಸರ್ ಸಂಸ್ಥೆಯ ಮುಖ್ಯಸ್ಥ ಬೋಪಣ್ಣ, ಜೈನ್ ಇರಿಗೇಷನ್ ನ ಅಧಿಕಾರಿ ಕಾರ್ತಿಕ್ ಮಂಜುನಾಥ, ಕಾಪಿಕೊ ಕಾರ್ಯಾಗಾರದ ಸಂಚಾಲಕ ಸಂತೋಷ್ ಕುತ್ತಮೊಟ್ಟೆ, ಸಹ ಸಂಚಾಲಕ ರಾಮಕೃಷ್ಣ ಭಟ್ ಕುರುಂಬುಡೇಲು, ಸುಳ್ಯ ನ.ಪಂ.ಸದಸ್ಯೆ ಶಶಿಕಲಾ ನೀರಬಿದಿರೆ, ಸಿಎ ಬ್ಯಾಂಕ್‌ ಅಧ್ಯಕ್ಷ ವಿಕ್ರಮ್ ಅಡ್ಡಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶುಭದಾ ಆರ್ ಪ್ರಕಾಶ್ ಪ್ರಾರ್ಥಿಸಿದರು.ಸಂತೋಷ್‌ ಕುತ್ತಮೊಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!